Viral: ‘ತುಂಬಾ ಮುದ್ದಾಗಿದ್ದೀರಿ’ ನಾಗಾಲ್ಯಾಂಡ್​ ಸಚಿವರಿಗೆ ಇಂಡಿಗೋ ಗಗನಸಖಿಯಿಂದ ಚೀಟಿ, ಮುಂದೆ?

Temjen Imna Along : ನಾಗಾಲ್ಯಾಂಡ್​ನ ಸಚಿವ ತೆಂಜೆನ್​ ಇಮ್ನಾ ಅಲಾಂಗ್​ ಲವಲವಿಕೆಯ ವ್ಯಕ್ತಿತ್ವದವರು. ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್​ಗಳನ್ನು ಆಗಾಗ ರಂಜಿಸುತ್ತ ತಮ್ಮೆಡೆ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಇಂಡಿಗೋ ಗಗನಸಖಿ ಇವರಿಗೆ ಚೀಟಿ ಕೊಟ್ಟಿದ್ದಾಳೆ. 'ನಿಮಗೆ ನನ್ನ ನಂಬರ್ ಕೊಡಬಹುದಿತ್ತು ಆದರೆ...' ಹಾಗಿದ್ದರೆ ಆ ಚೀಟಿಯಲ್ಲಿ ಮುಂದೇನಿದೆ?

Viral: 'ತುಂಬಾ ಮುದ್ದಾಗಿದ್ದೀರಿ' ನಾಗಾಲ್ಯಾಂಡ್​ ಸಚಿವರಿಗೆ ಇಂಡಿಗೋ ಗಗನಸಖಿಯಿಂದ ಚೀಟಿ, ಮುಂದೆ?
ನಾಗಾಲ್ಯಾಂಡ್ ಸಚಿವ ತೆಂಜೆನ್​ ಇಮ್ನಾ ಅಲಾಂಗ್
Follow us
ಶ್ರೀದೇವಿ ಕಳಸದ
|

Updated on:Nov 01, 2023 | 2:40 PM

Nagaland: ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ತೆಂಜೆನ್​ ಇಮ್ನಾ ಅಲಾಂಗ್ (Temjen Imna Along) ಇತ್ತೀಚೆಗೆ ನವದೆಹಲಿಯಿಂದ ಕೊಲ್ಕತ್ತೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಇಂಡಿಗೋ ಏರ್​ಲೈನ್ಸ್​​ನ ಗಗನಸಖಿಯಿಂದ ಒಂದು ಚೀಟಿಯನ್ನು ಸ್ವೀಕರಿಸಿದರು. ಆ ಚೀಟಿಯನ್ನು ಅವರು X ನಲ್ಲಿ ಉಲ್ಲಾಸಮಯವಾದ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಗಗನಸಖಿ ಬರೆದ ಚೀಟಿ ಹೀಗಿದೆ; ‘ಡಿಯರ್ ಸರ್, ನೀವು 6E (513) DEL-CCU 6E ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಸಂತೋಷ ತಂದಿದೆ. ಎಂದಿನಂತೆ ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ. ನಾನು ನಿಮಗೆ ನನ್ನ ಫೋನ್ ನಂಬರ್​ ನೀಡಬಹುದಾಗಿತ್ತು ಆದರೆ ನನ್ನ ಮತ್ತು ನಿಮ್ಮ ಸರ್​ನೇಮ್​ ಒಂದೇ. ಹಾಗಾಗಿ ನಾವು ಮೂಲತಃ ‘ಸಹೋದರರು ಮತ್ತು ಸಹೋದರಿಯರು.’ ಇಂಡಿಗೋದಲ್ಲಿ ಪ್ರಯಾಣಿಸಿದ್ದಕ್ಕಾಗಿ ಧನ್ಯವಾದಗಳು.’

ಇದನ್ನೂ ಓದಿ : Viral: ಹ್ಯಾಲ್ಯೋವೀನ್​; ಹ್ಯಾರಿಪಾಟರ್​ ಪಾತ್ರಧಾರಿಗಳ ವೇಷದಲ್ಲಿ ಝ್ಯುಕರ್​ಬರ್ಗ್​ ಕುಟುಂಬ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್ 31 ರಂದು X ನಲ್ಲಿ ಈ ಪೋಸ್ಟ್ ಮಾಡಲಾಗಿದೆ. ‘ಆಸಾನ್ ಭಾಷಾ ಮೇ ಮೇರೇ ಕೋ ಫೋನ್ ನಂಬರ್​ ನಹೀಂ ದಿಯಾ’ ಎಂಬ ಉಲ್ಲಾಸಮಯ ಒಕ್ಕಣೆಯನ್ನು ತೆಂಜಾನ್​ ಈ ಪೋಸ್ಟಿಗೆ ಬರೆದಿದ್ದಾರೆ. ಈತನಕ 6.2 ಲಕ್ಷಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಅನೇಕರು ಈ ಪೋಸ್ಟಿನಡಿ ಪ್ರತಿಕ್ರಿಯಿಸಿ, ನಿಜವಾಗಲೂ ನಿಮ್ಮದು ತುಂಬಾ ಮುದ್ದಾದ ವ್ಯಕ್ತಿತ್ವ ಸರ್ ಎಂದು ಪ್ರತಿಕ್ರಿಯಿಸಿದ್ದಾರೆ.

ಸಚಿವರಿಗೆ ಗಗನಸಖಿ ಕೊಟ್ಟ ಚೀಟಿ ಇಲ್ಲಿದೆ

ಓಹೋ ಹೀಗಾಯಿತೇ! ಹಾಗಿದ್ದರೆ ಮುಂದಿನ ಬಾರಿ ಶುಭವಾಗಲಿ ಎಂದಿದ್ದಾರೆ ಒಬ್ಬರು. ಕನಿಷ್ಠ ರಕ್ಷಾ ಬಂಧನಕ್ಕಾದರೂ ಆಕೆ ನಿಮಗೆ ನಂಬರ್ ನೀಡಬಹುದಿತ್ತು ಎಂದಿದ್ದಾರೆ ಇನ್ನೊಬ್ಬರು. ನೀವಿಬ್ಬರೂ ಒಂದೇ ಬುಡಕಟ್ಟಿಗೆ ಸೇರದೇ ಇದ್ದಿದ್ದರೆ ಇಷ್ಟೊತ್ತಿಗೆ… ಎಂದಿದ್ದಾರೆ ಮತ್ತೊಬ್ಬರು. ಮತ್ತೊಮ್ಮೆ ಆ ಗಗನಸಖಿಯ ಸಿಕ್ಕರೆ ನಂಬರ್ ಪಡೆದು ನನಗೆ ಕೊಡಿ ಸರ್ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Brain Teaser: ‘ತೆರೆಸಾ ಬ್ರೇನ್​ ಟೀಸರ್’ಗೆ ಉತ್ತರ ಕಂಡುಕೊಳ್ಳಲು ಯಾರಿಗೂ ಆಗುತ್ತಿಲ್ಲ, ನಿಮಗೆ?

ಯಾರೂ ಈತನಕ ನನಗೆ ಹೀಗೆ ಹೇಳಿಯೇ ಇಲ್ಲವಲ್ಲ ಎಂದಿದ್ದಾರೆ ಒಬ್ಬರು. ಅದಕ್ಕೆ ಸಚಿವರು, ಇಬ್ಬರೂ ಸೇರಿ ಒಂದು ಕ್ಲಬ್​ ಓಪನ್ ಮಾಡೋಣ ನಡೀರಿ ಎಂದಿದ್ದಾರೆ. ಇದೇನು ಹೊಸದಲ್ಲ, ಅವಿವಾಹಿತರಿಗೆ ಇದು ಸಾಮಾನ್ಯ ಎಂದಿದ್ದಾರೆ ಇನ್ನೊಬ್ಬರು. ನನ್ನೊಂದಿಗೆ ಇದು ಯಾವಾಗಲೂ ಆಗುತ್ತಲೇ ಇರುತ್ತದೆ ಎಂದಿದ್ದಾರೆ ಸಚಿವರು. ಅಲ್ಲಿ ಪ್ರತಿಕ್ರಿಯಿಸಿರುವ ಅನೇಕರಿಗೆ ಸಚಿವರು ಪ್ರತಿಯಾಗಿ ಪ್ರತಿಕ್ರಿಯಿಸುತ್ತಾ ಹೋಗಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:36 pm, Wed, 1 November 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ