Viral Video: ಮೋಡಿ ಮಾಡಿದ ಮೇಧಾವಿಯ ಬೆಲ್ಲಿ ಡ್ಯಾನ್ಸ್​; ಉಲ್ಲಸಿತಗೊಂಡ ನೆಟ್ಟಿಗರು

Shreya Ghoshal: ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡಿಗೆ ಮೇಧಾವಿ ಎಂಬ ಕಲಾವಿದೆ ಭರ್ಜರಿಯಾಗಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈತನಕ ಇಂಥ ಬೆಲ್ಲಿ ಡ್ಯಾನ್ಸ್​ ರೀಲ್​ ನೋಡಿರಲೇ ಇಲ್ಲ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಸಾಕಷ್ಟು ಸಲ ಈ ಡ್ಯಾನ್ಸ್​ ನೋಡಿದೆ. ನನ್ನ ಮೂಡ್​ ಫ್ರೆಷ್ ಆಯಿತು ಎಂದು ಕೆಲವರು ಹೇಳಿದ್ದಾರೆ. ನೀವು ಕೂಡ ಈ ಡ್ಯಾನ್ಸ್ ನೋಡಿ ಅಭಿಪ್ರಾಯಿಸಿ.

Viral Video: ಮೋಡಿ ಮಾಡಿದ ಮೇಧಾವಿಯ ಬೆಲ್ಲಿ ಡ್ಯಾನ್ಸ್​; ಉಲ್ಲಸಿತಗೊಂಡ ನೆಟ್ಟಿಗರು
ಮೇಧಾವಿ ಮಿಶ್ರಾ
Follow us
ಶ್ರೀದೇವಿ ಕಳಸದ
|

Updated on:Nov 02, 2023 | 1:41 PM

Belly Dance: ಬೆಲ್ಲಿ ಡ್ಯಾನ್ಸ್​ ಕೆಲವೇ ಕೆಲವರಿಗೆ ಒಲಿಯುತ್ತದೆ. ಸತತ ಪರಿಶ್ರಮ ಮತ್ತು ಕೌಶಲ ಅದಕ್ಕೆ ಬೇಕಾಗುತ್ತದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕಾರವನ್ನು ಪ್ರಯತ್ನಿಸುತ್ತಿರುತ್ತಾರೆ. ಆದರೆ ಎಲ್ಲರ ಪ್ರದರ್ಶನವೂ ನಿರೀಕ್ಷಿತ ಮಟ್ಟವನ್ನು ತಲುಪುತ್ತದೆ ಎಂದು ಹೇಳಲಾಗದು. ಇದೀಗ ನೃತ್ಯ ಕಲಾವಿದೆ (Dancer) ಮೇಧಾವಿ ಮಿಶ್ರಾ ಮಾಡಿದ ಬೆಲ್ಲಿ ಡ್ಯಾನ್ಸ್​ ನೆಟ್ಟಿಗರ ಗಮನ ಸೆಳೆದಿದೆ. 2008ರಲ್ಲಿ ಬಿಡುಗಡೆಯಾದ ಗಜಿನಿ ಸಿನೆಮಾದ ಹಾಡಿಗೆ ಈಕೆ ಡ್ಯಾನ್ಸ್ ಮಾಡಿದ್ದಾರೆ. ಪ್ರವೀಣ್​ ಮಣಿ ಮತ್ತು  ಶ್ರೇಯಾ ಘೋಷಾಲ್ (Shreya Ghoshal) ಈ ಹಾಡನ್ನು ಹಾಡಿದ್ದಾರೆ. ಮೇಧಾವಿಯ ನೃತ್ಯಕೌಶಲ ನೋಡಿದ ನೆಟ್ಟಿಗರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನು ಓದಿ : Viral Video: ಬಾಯಿಂದ ಬಾಯಿಗೆ ನೀರು ಉಗುಳಿಕೊಳ್ಳುತ್ತಿರುವ ಜೋಡಿಯ ವಿಡಿಯೋ ವೈರಲ್; ಪೊಲೀಸರ ಪ್ರತಿಕ್ರಿಯೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈತನಕ ಸುಮಾರು 4,000 ಜನರು ಲೈಕ್ ಮಾಡಿದ್ದಾರೆ. ನೀವು ಮಾಡಿದ ನೃತ್ಯ ಇಷ್ಟವಾಯಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈತನಕ ನಾನು ನೋಡಿದ ಬೆಲ್ಲಿ ಡ್ಯಾನ್ಸ್ ರೀಲ್​​ಗಳಲ್ಲಿ ನಿಮ್ಮದು ಅತ್ಯುತ್ತಮವಾಗಿದೆ ಎಂದಿದ್ದಾರೆ ಕೆಲವರು.

ಮೇಧಾವಿಯ ಬೆಲ್ಲಿ ಡ್ಯಾನ್ಸ್ ವಿಡಿಯೋ

ಅದ್ಭುತವಾದ ಪ್ರದರ್ಶನ. ನಿಮ್ಮ ಇತರೇ ರೀಲ್​​ಗಳಿಗಿಂತ ಇದು ಹೆಚ್ಚು ಮೆಚ್ಚುಗೆಯಾಯಿತು ಎಂದು ಹೇಳಿದ್ದಾರೆ ಒಬ್ಬರು. ಇದು ನನ್ನ ಮೂಡ್​ ಅನ್ನೇ ಬದಲಾಯಿಸಿತು, ಚೆನ್ನಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಇನ್ನೊಬ್ಬರು. ನಾನೂ ಈಗ ಇಂಥದೇ ಒಂದು ರೀಲ್ ಮಾಡಬೇಕು ಎಂದುಕೊಳ್ಳುತ್ತಿದ್ದೇನೆ ಆದರೆ ನಿಮ್ಮಷ್ಟು ಚೆನ್ನಾಗಿ ನರ್ತಿಸಲು ನನಗೆ ಬರಲಿಕ್ಕಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ವೆಲ್​ಕಮ್​ ಟು ಮರ್ಲಿ ಹೇರ್ ಸಲೂನ್​! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?

ನಿಮ್ಮಷ್ಟಕ್ಕೆ ನೀವೇ ಇದನ್ನು ಕಲಿತಿರೋ? ಎಂದು ಕೇಳಿದ್ದಾರೆ ಒಬ್ಬರು. ನನಗೆ ನಿದ್ರೆ ಬರುತ್ತಿತ್ತು, ನಿಮ್ಮ ಬಳುಕು ನೋಡಿ ಎಲ್ಲವೂ ಓಡಿಹೋಯಿತು ಎಂದಿದ್ದಾರೆ ಇನ್ನೊಬ್ಬರು. ಈ ಹಾಡು ನನ್ನಿಷ್ಟದ್ದು, ನೀವಿದಕ್ಕೆ ಬಹಳ ಚೆನ್ನಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ನಾನಿದನ್ನೂ ಈತನಕ ಇಪ್ಪತ್ತು ಸಲವಾದರೂ ನೋಡಿದೆ, ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:40 pm, Thu, 2 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ