Viral Video: ಬಾಯಿಂದ ಬಾಯಿಗೆ ನೀರು ಉಗುಳಿಕೊಳ್ಳುತ್ತಿರುವ ಜೋಡಿಯ ವಿಡಿಯೋ ವೈರಲ್; ಪೊಲೀಸರ ಪ್ರತಿಕ್ರಿಯೆ

Delhi: ಮತ್ತೆ ನೆಟ್ಟಿಗರು ಕೋಪಗೊಂಡಿದ್ದಾರೆ. ರೀಲಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುವವರನ್ನು ಖಂಡಿಸಿದ್ದಾರೆ. ಇಷ್ಟು ದಿನಗಳ ಕಾಲ ದೆಹಲಿ ಮೆಟ್ರೋದಲ್ಲಿದ್ದ ಈ ರೀಲಿಗರು ಇದೀಗ ಇಲ್ಲಿ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋಗೆ ನೋಯ್ಡಾದ ಪೊಲೀಸರು ಪ್ರತಿಕ್ರಿಯಿಸಿದ್ದು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

Viral Video: ಬಾಯಿಂದ ಬಾಯಿಗೆ ನೀರು ಉಗುಳಿಕೊಳ್ಳುತ್ತಿರುವ ಜೋಡಿಯ ವಿಡಿಯೋ ವೈರಲ್; ಪೊಲೀಸರ ಪ್ರತಿಕ್ರಿಯೆ
ನೋಯ್ಡಾದ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಯೊಂದು ಪರಸ್ಪರರ ಬಾಯಿಯಲ್ಲಿ ನೀರು ಉಗುಳುತ್ತಿರುವುದು.
Follow us
ಶ್ರೀದೇವಿ ಕಳಸದ
|

Updated on:Nov 02, 2023 | 12:44 PM

Noida: ನೋಯ್ಡಾದ ಜೋಡಿಯೊಂದು ಪಾರ್ಕ್​ನಲ್ಲಿ ನೀರು ಕುಡಿದು ಪರಸ್ಪರರ ಬಾಯೊಳಗೆ ಉಗುಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೋಯ್ಡಾದ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿ ಈ ಜೋಡಿಯ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೆಹಲಿ ಮೆಟ್ರೋ (Delhi Metro) ಬಿಟ್ಟು ಇದೀಗ ಇಂಥ ಅಸಭ್ಯ ಜನ ನೋಯ್ಡಾ ಸೆಕ್ಟರ್​ 78 ಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಲೈಕ್, ಕಮೆಂಟ್​ಗಳಿಗಾಗಿ ಇಂಥ ರೀಲ್​​ಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ರೀಲ್​​ಗಳನ್ನು ಮಾಡುವುದುನ್ನು ನಿಷೇಧಿಸಬೇಕು’ ಎಂದು ಗ್ರೇಟರ್​ ನೋಯ್ಡಾ ವೆಸ್ಟ್​ ಎಂಬ X ಖಾತೆಯು ಈ ವಿಡಿಯೋಗೆ ಒಕ್ಕಣೆ ಬರೆದು ಪೋಸ್ಟ್ ಮಾಡಿದೆ.

ಇದನ್ನೂ ಓದಿ : Viral Video: ವೆಲ್​ಕಮ್​ ಟು ಮರ್ಲಿ ಹೇರ್ ಸಲೂನ್​! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನವೆಂಬರ್​ 1ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈತನಕ 46,000 ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 90 ಜನರು ಪ್ರತಿಕ್ರಿಯಿಸಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ನೋಯ್ಡಾದ ಡಿಸಿಪಿ, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಗಸ್ತು/ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ. ​

ಇಲ್ಲಿದೆ ಆ ಜೋಡಿಯ ವಿಡಿಯೋ

ಇವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅನೇಕರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಕೆಲಸಗಳನ್ನು ಮಾಡುವುದು ನಾಚಿಕೆಗೇಡು ಎಂದಿದ್ದಾರೆ ಮತ್ತೊಂದಿಷ್ಟು ಜನ. ಇಂತ ಅನಾಹುತಗಳನ್ನು ತಡೆಹಿಡಿಯಲು ಅಲ್ಲಿಯ ಆಡಳಿತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : Viral Video: ಮುಂಬೈ; ಟ್ರಾಫಿಕ್​​ನಲ್ಲಿ ಆಟೊ ಚಾಲಕನ ಗಾಯನ, ಎಲ್ಲೆಡೆ ಇಂಥವರಿರಲಿ ಎಂದ ನೆಟ್ಟಿಗರು

ದೆಹಲಿ ಮೆಟ್ರೋಗಳಲ್ಲಿಯ ಜನರು ಇಲ್ಲಿಗೆ ಶಿಫ್ಟ್ ಆಗಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ದಾರೆ ಒಬ್ಬರು. ಇಂಥ ಮನಸ್ಥಿತಿಯವರು ಎಲ್ಲೆಡೆಯೂ ಇದ್ದಾರೆ. ಇಂಥವರನ್ನು ಪತ್ತೆ ಹಚ್ಚಿ ರೀಲಿಗಾಗಿ ಹೀಗೆ ಅಸಭ್ಯವಾಗಿ ವರ್ತಿಸುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಇದಕ್ಕಾಗಿ ವಿಶೇಷ ತಂಡವನ್ನು ಪೊಲೀಸರು ರಚಿಸಬೇಕು ಎಂದಿದ್ದಾರೆ ಇನ್ನಹೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:29 pm, Thu, 2 November 23

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ