Viral Video: ‘ಹುಡುಗ ಹರೆಯಕ್ಕೆ ಬಂದಿದ್ದಾನೆ ಬಯ್ಯದೇ ಪ್ರೀತಿಯಿಂದ ತಿದ್ದಿ’ ಎನ್ನುತ್ತಿರುವ ಶ್ವಾನಪ್ರೇಮಿಗಳು

Dog Lover: 'ಈ ವಯಸ್ಸಿನಲ್ಲಿ ಈ ಹುಡುಗ ಹೀಗೆ ಆಡುವುದು ತೀರಾ ಸಹಜ, ಆದರೆ ಬೆಳಗಾಗುವ ಮೊದಲೇ ವಾಪಾಸು ಮನೆಗೆ ಬಂದು ಡೋರ್​ ಬೆಲ್ ಮಾಡಿದ್ದಾನಲ್ಲ, ಅವನಿಗೆ ಜವಾಬ್ದಾರಿ ಇದೆ ಅಂತಲೇ ಅರ್ಥ. ಹಾಗಾಗಿ ಅವನನ್ನು ಬಯ್ಯದೇ ಮೆಲ್ಲ ತಿಳಿಹೇಳಿ ಮನೆಯೊಳಗೆ ಕರೆದುಕೊಳ್ಳಿ. ಅವನಿಗೆ ತನ್ನ ಸ್ನೇಹಿತರೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಿ. ಆಗ ಅವನು ಹೀಗೆಲ್ಲ ಓಡಿಹೋಗಲಾರ.'

Viral Video: 'ಹುಡುಗ ಹರೆಯಕ್ಕೆ ಬಂದಿದ್ದಾನೆ ಬಯ್ಯದೇ ಪ್ರೀತಿಯಿಂದ ತಿದ್ದಿ' ಎನ್ನುತ್ತಿರುವ ಶ್ವಾನಪ್ರೇಮಿಗಳು
ಸಂಜೆ ಹೊರಗೆ ಹೋಗಿದ್ದು ನಸುಕಿನಲ್ಲಿ ಮನೆಗೆ ಬಂದು ಬೆಲ್ ಬಾರಿಸುತ್ತಿರುವ ನಾಯಿ
Follow us
ಶ್ರೀದೇವಿ ಕಳಸದ
|

Updated on:Nov 02, 2023 | 3:10 PM

Dog: ಹರೆಯಕ್ಕೆ ಬಂದ ಹುಡುಗನೊಬ್ಬ ಮನೆಯವರ ಕಣ್ತಪ್ಪಿಸಿ ಹೊರಗೆ ಸುತ್ತಾಡಿ ಬಂದು ಏನೂ ಆಗಿಯೇ ಇಲ್ಲವೆಂಬಂತೆ ಮನೆಬಾಗಿಲು ತಟ್ಟುವ ರೀತಿಯನ್ನು ನಾಯಿಯೊಂದು ಅನುಕರಿಸಿದೆ. ಸಂಜೆ ಮನೆಯಿಂದ ಹೊರಟು ಬೆಳಗಿನ ಜಾವ ನಾಲ್ಕು ಗಂಟೆಗೆ ಡೋರ್​ ಬೆಲ್​ ಮಾಡಿದೆ. ಈ ವಿಡಿಯೋ ಇದೀಗ ವೈರಲ್ (Viral) ಆಗಿದ್ದು ನೆಟ್ಟಿಗರು ಈ ತುಂಟನನ್ನು ಮತ್ತು ಮುಗ್ಧನಂತೆ ನಟಿಸಿರುವುದನ್ನು ಪ್ರೀತಿಸುತ್ತಿದ್ದಾರೆ. ಈ ವಿಡಿಯೋವನ್ನು ಈತನಕ 2.2 ಮಿಲಿಯನ್​ ಜನರು ನೋಡಿದ್ದು ಸುಮಾರು 2.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ತಮ್ಮ ತಮ್ಮ ಸಾಕುನಾಯಿಗಳ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: ಮೋಡಿ ಮಾಡಿದ ಮೇಧಾವಿಯ ಬೆಲ್ಲಿ ಡ್ಯಾನ್ಸ್​; ಉಲ್ಲಸಿತಗೊಂಡ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ನಾಯಿಯ ‘ಅಮಾಯಕ ನಡೆ’ ಮನೆಬಾಗಿಲಿನಾಚೆ ಇರುವ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ. ಸಂಜೆ 6 ಗಂಟೆಗೆ ಮನೆಯಿಂದ ಓಡಿಹೋದ ನಾಯಿ ಬೆಳಗಿನ 4ಕ್ಕೆ ಬಂದು ಮಳ್ಳನಂತೆ ಡೋರ್ ಬೆಲ್ ಮಾಡಿದೆ. ಬಾಗಿಲು ತೆಗೆದಾಗ ಯಾವುದೋ ಅರ್ಜೆಂಟ್​ ಕೆಲಸದ ಮೇಲೆ ಆಚೆ ಹೋಗಿತ್ತೇನೋ ಎನ್ನುವವರಂತೆ ಪೋಸ್ ಕೂಡ ಕೊಟ್ಟಿದೆ.

ಇಲ್ಲಿದೆ ನೋಡಿ ಆ ಮಳ್ಳನಾಯಿಯ ವಿಡಿಯೋ

View this post on Instagram

A post shared by Nextdoor (@nextdoor)

ಸಾಹೇಬ್ರು ನೈಟ್ ಪಾರ್ಟಿ ಮುಗಿಸಿ ಮನೆಗೆ ಬಂದಿದ್ದಾರೆ ಬೇಗ ಬಾಗಿಲು ತೆಗೆಯಿರಿ ಎಂದಿದ್ಧಾರೆ ಒಬ್ಬರು. ಅವರು ನೈಟ್ ಶಿಫ್ಟ್​ನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಬೇಗ ಬಾಗಿಲು ತೆರೆಯಿರಿ ಎಂದಿದ್ದಾರೆ ಇನ್ನೊಬ್ಬರು. ಹುಡುಗ ಹರೆಯಕ್ಕೆ ಬಂದಿದ್ದಾನೆ, ಅವನ ನಡೆ ಸಹಜವಾಗಿದೆ ಬಿಡಿ, ಅವನನ್ನು ಬೈಯ್ಯದೇ ಬಾಗಿಲು ತೆರೆಯಿರಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಬಾಯಿಂದ ಬಾಯಿಗೆ ನೀರು ಉಗುಳಿಕೊಳ್ಳುತ್ತಿರುವ ಜೋಡಿಯ ವಿಡಿಯೋ ವೈರಲ್; ಪೊಲೀಸರ ಪ್ರತಿಕ್ರಿಯೆ

ಎಂಥ ಜಾಣಮರಿ ಇದು, ನನಗೀಗ ಈ ನಾಯಿ ಬೇಕು ಎಂದಿದ್ದಾರೆ ಒಬ್ಬರು. ಹೊಸದಾಗಿ ನೈಟ್​ ಶಿಫ್ಟ್​ ಹಾಕಿರಬೇಕು, ಇಷ್ಟು ದಿನ 9-5 ಇತ್ತಲ್ಲವೇ? ಎಂದಿದ್ಧಾರೆ ಇನ್ನೊಬ್ಬರು. ಅವನಿನ್ನು ಹೀಗೆಯೇ ನೈಟ್ ಶಿಫ್ಟ್​ನಲ್ಲಿರುತ್ತಾನೆ, ಬಂದೋಬಸ್ತ್ ಮಾಡಿ! ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:00 pm, Thu, 2 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ