Viral Video: ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್​ ಎಲ್ಲಿ ಎಂದ ನೆಟ್ಟಿಗರು

Momo: ಯಾರಿಗೆ ಗೊತ್ತು ಈ ಮನುಷ್ಯ ಮುಂದೊಂದು ದಿನ ಮನುಷ್ಯನನ್ನು ಕೂಡ ಹೀಗೇ ಬೇಯಿಸಬಹುದೋ ಏನೋ. ದಯವಿಟ್ಟು ಈ ವಿಡಿಯೋ ಯಾರೂ ನೋಡಬೇಡಿ, ಸಸ್ಯಾಹಾರಿಗಳತಂತೂ ಮೊದಲು ನೋಡಬೇಡಿ... ಅಂತೆಲ್ಲ ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸುತ್ತಿದ್ದಾರೆ. ಇವ ಖಂಡಿತ ನರಕಕ್ಕೇ ಹೋಗುತ್ತಾನೆ ಎಂದು ಶಾಪ ಹಾಕುತ್ತಿದ್ದಾರೆ. ವಿಡಿಯೋ ನೋಡುವ ಆಯ್ಕೆ ನಿಮಗೆ ಬಿಟ್ಟಿದ್ದು.

Viral Video: ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್​ ಎಲ್ಲಿ ಎಂದ ನೆಟ್ಟಿಗರು
ಜೀವಂತ ಹುಳುಗಳನ್ನು ಹಿಟ್ಟಿನಲ್ಲಿ ತುಂಬಿ ಮೊಮೊ ತಯಾರಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Nov 03, 2023 | 12:03 PM

Chinese Food : ನೀವು ಮೊಮೊ ಪ್ರಿಯರಾಗಿದ್ದರೆ ದಯವಿಟ್ಟು ಕ್ಷಮಿಸಿ. ಏಕೆಂದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದರೆ ಖಂಡಿತ ನಿಮಗೆ ನಿರಾಶೆ, ಕೋಪ, ಅಸಹ್ಯ ಎಲ್ಲವೂ ಎನ್ನಿಸಬಹುದೇನೋ. ಈ ವಿಡಿಯೋ ನೋಡಿದ ನೆಟ್ಟಿಗರಿಗೆ ಬಯ್ಯಲು ಬೈಗುಳಗಳೇ ಸಾಲುತ್ತಿಲ್ಲ. ಕಾರಣ ಮಿಸುಕಾಡುವ ಮತ್ತು ಓಡಾಡುತ್ತ ತಪ್ಪಿಸಿಕೊಳ್ಳಲು ನೋಡುತ್ತಿರುವ ಜೀವಂತ ಹುಳುಗಳನ್ನು ಹಿಡಿದು ಈ ಹಿಟ್ಟಿನಲ್ಲಿ ತುಂಬಲಾಗಿದೆ ಮತ್ತು ಉಗಿಯ ಮೇಲೆ ಬೇಯಿಸಿ ಮೊಮೊ (Momo) ತಯಾರಿಸಲಾಗಿದೆ. ಜನ್ಮದಲ್ಲಿ ನಾವಿನ್ನು ಮೋಮೊ ತಿನ್ನದಂತೆ ಮಾಡಿದೆ ಈ ವಿಡಿಯೋ, ಯಾಕಾದರೂ ಇಂಥ ಅಸಹ್ಯಕರ ವಿಡಿಯೋ ಮಾಡುತ್ತಾರೋ ಎಂದು ಜನ ಬೈದು ಬೈದು ಸುಸ್ತಾಗಿದ್ದಾರೆ.

ಇದನ್ನೂ ಓದಿ : Viral Brain Teaser: ಇದು ಬೆಕ್ಕುಇಲಿಗಳ ಒಗಟು, ನೀವು ಮಾತ್ರ ಇದನ್ನು ಬಿಡಿಸಲು ಸಾಧ್ಯ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಚೈನೀಸ್ ಸ್ಟ್ರೀಟ್ ಫುಡ್ 2023 ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಚೀನಿ ಆಹಾರ ನಿಜಕ್ಕೂ ಕಿರಿಕಿರಿ ಎನ್ನಿಸುತ್ತಿದೆ. ದಯವಿಟ್ಟು Vomiting Butten ಎಲ್ಲಿ ಎಂದು ಹೇಳಿ ಎನ್ನುತ್ತಿದ್ದಾರೆ ನೆಟ್ಟಿಗರು. ಭೂಮಿ ಮೇಲೆ ತಿನ್ನಲು ನಿಜಕ್ಕೂ ಎಷ್ಟೊಂದು ವೈವಿಧ್ಯಮಯ ಮತ್ತು ಆರೋಗ್ಯಕರ ಆಹಾರವನ್ನು ನಾವು ಹೊಂದಿದ್ದೇವೆ, ಸಾಕಷ್ಟು ಆಯ್ಕೆಗಳು ಇವೆ. ಆದರೆ ಯಾಕೆ ಇಂಥವನ್ನೆಲ್ಲ ತಿನ್ನಬೇಕು? ಇದನ್ನು ತಿನ್ನುವುದು ಹೋಗಲಿ ನೋಡುವುದು ಕೂಡ ಕಷ್ಟವಾಗುತ್ತಿದೆ. ಇದನ್ನು ತಲೆಯಿಂದ ತೆಗೆಯುವುದು ಎಂದು ಹೇಳಿ ಎಂದಿದ್ದಾರೆ ಮತ್ತೊಂದಿಷ್ಟು ಜನ.

ಇಲ್ಲಿದೆ ಆ ಹುಳುಗಳ ಮೊಮೊ

ನಿಜಕ್ಕೂ ಇದು ಆಘಾತಕಾರಿಯಾದ ವಿಡಿಯೋ, ನನಗೆ ಸುಧಾರಿಸಿಕೊಳ್ಳಲಾಗುತ್ತಿಲ್ಲ, ಇದರಿಂದ ಹೊರಬರಲು ಮಾರ್ಗವನ್ನು ತಿಳಿಸಿ ಎಂದು ಅಂಗಲಾಚಿದ್ದಾರೆ ಅನೇಕರು. ಅವರವರ ಆಹಾರ ಅವರವರ ಆಯ್ಕೆ, ಈ ಬಗ್ಗೆ ಬಹಳ ಯೋಚಿಸಬೇಡಿ ಎಂದಿದ್ದಾರೆ ಒಬ್ಬರು. ದಯವಿಟ್ಟು ಈ ವಿಡಿಯೋವನ್ನು ರಿಪೋರ್ಟ್ ಮಾಡಿ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ‘ಹುಡುಗ ಹರೆಯಕ್ಕೆ ಬಂದಿದ್ದಾನೆ ಬಯ್ಯದೇ ಪ್ರೀತಿಯಿಂದ ತಿದ್ದಿ’ ಎನ್ನುತ್ತಿರುವ ಶ್ವಾನಪ್ರೇಮಿಗಳು

ನಿಜಕ್ಕೂ ನಾನು ನೋಡಿದ ಎಲ್ಲ ವಿಡಿಯೋಗಳಲ್ಲಿ ಇದು ಅತ್ಯಂತ ಕೊಳಕಾದ ವಿಡಿಯೋ ಎಂದಿದ್ದಾರೆ ಒಬ್ಬರು. ಇವನೊಂದು ದಿನ ಮನುಷ್ಯರನ್ನು ತಿಂದರೂ ಅಚ್ಚರಿಯಿಲ್ಲ ಎಂದಿದ್ದಾರೆ ಇನ್ನೊಬ್ಬರು. ಈ ಭೂಮಿಯ ಮೇಲೆ ಏನು ನಡೀತಿದೆಯೋ ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ ಮತ್ತೊಬ್ಬರು. ಒಟ್ಟಿನಲ್ಲಿ ಇಡೀ ನೆಟ್​ಲೋಕ ಈ ವಿಡಿಯೋ ನೋಡಿ ಅಸಹ್ಯಪಟ್ಟುಕೊಂಡಿದೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:58 am, Fri, 3 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ