Viral: ಮುಂಬೈ; ಕಳೆದುಕೊಂಡ ‘ಶಾಂತಿ’ ಹುಡುಕಲು ಪೊಲೀಸರ ಬಳಿ ಹೋಗುತ್ತಿದ್ದೇನೆ ಎಂದ ಮಹಿಳೆ; ಪೊಲೀಸರ ಉತ್ತರ ಇಲ್ಲಿದೆ

Peace: ಶಾಂತಿ ಯಾರಿಗೆ ಬೇಕಿಲ್ಲ? ಎಲ್ಲರಿಗೂ ಬೇಕು. ಆದರೆ ಅದು ಸಿಗುವುದೆಲ್ಲಿ? ಕೆಲವರು ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನೂ ಕೆಲವರು ಬಾರಿಗೆ ಹೋಗುತ್ತಾರೆ. ಮತ್ತೂ ಕೆಲವರು ಕಾಡಿಗೆ ಹೋಗುತ್ತಾರೆ. ಇಲ್ಲವಾದರೆ ಸೋಶಿಯಲ್​ ಮೀಡಿಯಾದಲ್ಲಿ ಮುಳುಗುತ್ತಾರೆ. ಇದೀಗ ಮುಂಬೈನ ಮಹಿಳೆಯೊಬ್ಬಳು ಶಾಂತಿ ಹುಡುಕಿಕೊಂಡು ಪೊಲೀಸರ ಬಳಿ ಹೊರಟಿದ್ದೇನೆ ಎಂದಿದ್ದಕ್ಕೆ ಪೊಲೀಸರು ಏನುತ್ತರಿಸಿದ್ಧಾರೆ ನೋಡಿ.

Viral: ಮುಂಬೈ; ಕಳೆದುಕೊಂಡ 'ಶಾಂತಿ' ಹುಡುಕಲು ಪೊಲೀಸರ ಬಳಿ ಹೋಗುತ್ತಿದ್ದೇನೆ ಎಂದ ಮಹಿಳೆ; ಪೊಲೀಸರ ಉತ್ತರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
|

Updated on:Nov 03, 2023 | 1:23 PM

Mumbai: ‘ನಾನು ಕಳೆದುಕೊಂಡಿರುವ ಶಾಂತಿಯನ್ನು ಹುಡುಕಲು ಪೊಲೀಸ್​ ಠಾಣೆಗೆ ಹೋಗುತ್ತಿದ್ದೇನೆ’ ಎಂದು ಮುಂಬೈನ ವೇದಿಕಾ ಆರ್ಯ ಎಂಬಾಕೆ Xನಲ್ಲಿ ಹಾಕಿದ ಪೊಲೀಸರನ್ನು (Police) ಟ್ಯಾಗ್ ಮಾಡಿದ್ದಾರೆ. ಇದೀಗ ನೆಟ್ಟಿಗರಿಗೆ ಒಳ್ಳೆಯ ಮನರಂಜನೆ ಕೊಡುತ್ತಿದೆ. ಸೃಜನಶೀಲರಾದ ಮುಂಬೈ ಪೊಲೀಸರು ಈ ಪೋಸ್ಟ್​ಗೆ ಎಂದಿನಂತೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿ ಭೇಷ್​ ಎನ್ನಿಸಿಕೊಂಡಿದ್ದಾರೆ. ತಮಾಷೆಯಾಗಿ ಆಕೆ ಈ ಪೋಸ್ಟ್​ ಹಾಕಿದ್ದನ್ನು ಗಮನಿಸಿದ ಪೊಲೀಸರು ಸಿಕ್ಕ ಅವಕಾಶವನ್ನು ಬಿಡದೆ, ‘ಮಿಸ್ ಆರ್ಯ, ನಾವು  ಹಲವಾರು ಮಂದಿ ಕೂಡ ಶಾಂತಿಯ ಹುಡುಕಾಟದಲ್ಲಿದ್ದೇವೆ. ಖಂಡಿತ ನೀವು ನಿಮ್ಮ ಆತ್ಮದಲ್ಲಿ ಅದನ್ನು ಕಂಡುಕೊಳ್ಳುತ್ತೀರಿ. ಈ ವಿಷಯವಾಗಿ ನಮ್ಮ ಮೇಲೆ ನೀವು ವಿಶ್ವಾಸವಿಟ್ಟಿದ್ದನ್ನು ಪ್ರಶಂಸಿಸುತ್ತೇವೆ, ಇನ್ನೇನಾದರೂ ಸ್ಪಷ್ಟತೆ ಬೇಕಿದ್ದರೆ ಖಂಡಿತ ನೀವು ನಮ್ಮ ಬಳಿ ಬರಬಹುದು’ ಎಂದು #EnsuringSukoonForMumbai #MumbaiFirst ಹ್ಯಾಷ್​ಟ್ಯಾಗ್ ಸೇರಿಸಿದ್ದಾರೆ.

ಇದನ್ನೂ ಓದಿ : Viral Video: ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್​ ಎಲ್ಲಿ ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪೊಲೀಸರ ಈ ಫಿಲ್ಮಿ ಉತ್ತರ ಮತ್ತು ಬುದ್ಧಿವಂತಿಕೆ ನೆಟ್ಟಿಗರ ಮನಸ್ಸನ್ನು ಸೂರೆಗೊಂಡಿದೆ. ಮುಂಬೈ ಪೊಲೀಸರ ಹಾಸ್ಯಪ್ರಜ್ಞೆಯ ಪ್ರದರ್ಶನ ಪ್ರದರ್ಶನಗೊಳ್ಳುವುದು ಇದು ಮೊದಲ ಬಾರಿಯೇನಲ್ಲ. ಎರಡು ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಈತನಕ 1.4 ಲಕ್ಷ ಜನರು ನೋಡಿದ್ದಾರೆ. ಸುಮಾರು 500 ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ವೇದಿಕಾ ಆರ್ಯ ಪೋಸ್ಟ್​ ಇಲ್ಲಿದೆ

ಅರೆ ವಾಹ್​ ಶಾಹಿರಿ ಬರೆಯುವ ಪೊಲೀಸರಿದ್ದಾರೆ! ಎಂದಿದ್ದಾರೆ ಒಬ್ಬರು. ಓಹ್ ದೇವರೇ, ನೀವು ಪೊಲೀಸರು ಪ್ರತೀದಿನ ಏನೆಲ್ಲ ಅನುಭವಿಸಬೇಕು ಎನ್ನುವುದು ನಂಬಲಸಾಧ್ಯ ಎಂದಿದ್ದಾರೆ ಇನ್ನೊಬ್ಬರು. ಸಾಮಾಜಿಕ ಜಾಲತಾಣದ ಈ ಪುಟವನ್ನು ನಿರ್ವಹಿಸುವವರು ಯಾರು? ಅವರು ಹೀಗೆ ಆಗಾಗ ಮಿನುಗುತ್ತಿರುತ್ತಾರೆ ಮರೆಯಲ್ಲೇ ಎಂದಿದ್ದಾರೆ ಮತ್ತೊಬ್ಬರು. ಜಾವೇದ್ ಅಖ್ತರ್ ನಿಮ್ಮ ಐಡಿಯಿಂದ ಬರೆದಿರಬೇಕು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ‘ಹುಡುಗ ಹರೆಯಕ್ಕೆ ಬಂದಿದ್ದಾನೆ ಬಯ್ಯದೇ ಪ್ರೀತಿಯಿಂದ ತಿದ್ದಿ’ ಎನ್ನುತ್ತಿರುವ ಶ್ವಾನಪ್ರೇಮಿಗಳು

ಸಾರ್ವಜನಿಕರೊಂದಿಗೆ ಶಾಂತವಾಗಿ, ಸಂವಾದಾತ್ಮಕ ಮತ್ತು ತಮಾಷೆಯಾಗಿ ಪ್ರತಿಕ್ರಿಯಿಸುವ ವಿಷಯವಾಗಿ ಮುಂಬೈ ಪೊಲೀಸರು ಪ್ರಸಿದ್ಧಿ ಪಡೆದಿದ್ದಾರೆ. 2015 ರ ಡಿಸೆಂಬರ್​ನಲ್ಲಿ X ಖಾತೆ ತೆರೆಯಲಾಗಿದ್ದು ಈತನಕ ಸುಮಾರು 5 ಮಿಲಿಯನ್​ ಅನುಯಾಯಿಗಳನ್ನು ಹೊಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:13 pm, Fri, 3 November 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್