Viral Video: ಈ ಮೊಸಳೆಗೆ ಈ ಮನುಷ್ಯನನ್ನು ಮುದ್ದಾಡಬೇಕು ಎನ್ನಿಸಿತು, ಮುಂದೆ?

Animal Lover: ಮೊಸಳೆ ಎಂದರೆ ನಿದ್ರೆಯಲ್ಲಿಯೂ ಭಯಪಡುವವರಿದ್ದಾರೆ. ದೂರದಿಂದಲೇ ಅದನ್ನು ನೋಡಿ ಅವರು ಓಡಿಹೋಗುತ್ತಾರೆ. ಇಂಥವರ ಹತ್ತಿರ ಮೊಸಳೆ ಬಂದರೆ ಮುಂದೇನು ಎನ್ನುವುದನ್ನು ಹೇಳುವುದೇ ಬೇಡ. ಹೀಗಿರುವಾಗ ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಮುದ್ದಾಡಿರುವ ವಿಡಿಯೋವನ್ನು ಇವರು ನೋಡಿದರೆ ಏನು ಗತಿ? ಗುಂಡಿಗೆ ಗಟ್ಟಿ ಮಾಡಿಕೊಂಡು ನೋಡಬಹುದು, ಏಕೆಂದರೆ ಇದು ವಿಡಿಯೋ!

Viral Video: ಈ ಮೊಸಳೆಗೆ ಈ ಮನುಷ್ಯನನ್ನು ಮುದ್ದಾಡಬೇಕು ಎನ್ನಿಸಿತು, ಮುಂದೆ?
ಪ್ರಾಣ ಪ್ರೇಮಿ ಜೇ ಬ್ರೂವರ್​​ನನ್ನು ಮುದ್ಧಾಡುತ್ತಿರುವ ಮೊಸಳೆ
Follow us
ಶ್ರೀದೇವಿ ಕಳಸದ
|

Updated on:Nov 07, 2023 | 10:38 AM

Alligator: ಮೊಸಳೆಯನ್ನು ನೋಡಿದರೇ ಅನೇಕರಿಗೆ ಭಯವಾಗುತ್ತದೆ. ಅದು ಬಾಯಿ ತೆರೆದರಂತೂ ಮುಗಿದೇ ಹೋಯಿತು. ಇನ್ನು ಮೈಮೇಲೆ ಬಿದ್ದರೆ!? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವ್ಯಕ್ತಿಯೊಬ್ಬನ ಮೇಲೇರಿದ ಮೊಸಳೆ ಅವನನ್ನು ಮುದ್ದು (Cuddle) ಮಾಡಿದೆ. ಈ ವಿಡಿಯೋ ನೋಡಲು ಅಷ್ಟೇ ಭಯಂಕರ ಅಷ್ಟೇ ಮಜವೂ ಆಗಿದೆ. ಸರೀಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್ ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಅಬ್ಬಾ ಸತ್ತೆವು! ಎಂದಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿಯ ಬದಲಾಗಿ ನಾನು ಅದರೊಂದಿಗೆ ಇರಬಾರದಿತ್ತೆ? ಎಂದು ಕೇಳಿದ್ದಾರೆ.

ಇದನ್ನೂ ಓದಿ : Viral Video: ‘ನನ್ನ ಮಕ್ಕಳಿಗೆ ಉಣ್ಣಿಸಿದ್ದಕ್ಕೆ ಧನ್ಯವಾದ’; ಮಹಿಳೆಗೆ ಕೃತಜ್ಞತೆ ಸಲ್ಲಿಸಿದ ನಾಯಿ

ಇದನ್ನೂ ಓದಿ
Image
ತನ್ನ ಮಕ್ಕಳಿಗೆ ಉಣ್ಣಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ನಾಯಿ
Image
ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ
Image
ಮೊಮೊದಲ್ಲಿ ಜೀವಂತ ಹುಳುಗಳ ಹೂರಣ; ವಾಂತಿ ಬಟನ್​ ಎಲ್ಲಿ ಎಂದ ನೆಟ್ಟಿಗರು
Image
ಇದು ಬೆಕ್ಕುಇಲಿಗಳ ಒಗಟು, ನೀವು ಮಾತ್ರ ಇದನ್ನು ಬಿಡಿಸಲು ಸಾಧ್ಯ

ನಿನ್ನೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ ಈತನಕ ಸುಮಾರು 3.4 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 14,000 ಜನರು ಈ ವಿಡಿಯೋ ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಬ್ರೂವರ್​ನ ಧೈರ್ಯವನ್ನು ಶ್ಲಾಘಿಸಿದ್ದಾರೆ. ಕೆಲವರು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಬ್ರೂವರ್​ನನ್ನು ಮುದ್ದಾಡುತ್ತಿರುವ ಮೊಸಳೆ

ನಿಮ್ಮ ತಲೆಯಲ್ಲಿ ಮೆಟಲ್​ ಪ್ಲೇಟ್ ಇದೆಯೇ? ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಎಂಥ ಮುದ್ದಾಗಿದೆ ಈ ದೃಶ್ಯ ಎಂದಿದ್ದಾರೆ ಇನ್ನೊಬ್ಬರು. ಅವನ ಬಾಯಿಗೆ ಟೇಪ್ ಹಾಕಿ ಒಳ್ಳೆಯದು ಮಾಡಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ಆ ಟೇಪ್​ ಅವನ ಶಕ್ತಿಯನ್ನು ತಡೆದುಕೊಳ್ಳುವುದೇ? ಅಕಸ್ಮಾತ್ ಟೇಪ್​ ಹರಿದರೆ ಏನು ಗತಿ? ಎಂದಿದ್ದಾರೆ ಇನ್ನೂ ಒಬ್ಬರು. ಇದು ಅಷ್ಟೇ ಮುದ್ಧಾಗಿದೆ ಮತ್ತು ಅಷ್ಟೇ ಭಯಂಕರವೂ ಆಗಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: 8 ವರ್ಷದ ಈ ಬಾಲಕ ತನ್ನ ಹುಟ್ಟುಹಬ್ಬದ ದಿನ ಅತ್ತಿದ್ದೇಕೆ?

ಮಗ ಅಪ್ಪನನ್ನು ಪ್ರೀತಿಸುವ ಪರಿ ಎಂದಿದ್ದಾರೆ ಒಬ್ಬರು. ಬಾಯಿಗೆ ಅಂಟಿಸಿದ ಟೇಪ್​ ತೆಗೆದು ಮುದ್ದಾಡಿಸಿಕೊಂಡು ನೋಡಿ ಒಮ್ಮೆ ಎಂದಿದ್ದಾರೆ ಇನ್ನೊಬ್ಬರು. ಟೇಪ್​ ತೆಗೆದು ಮುದ್ದಾಡಿಸಿಕೊಂಡ ಮೇಲೆ ಹೀಗೆಯೇ ನಗುತ್ತಲೇ ಇರುವಿರೋ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:38 am, Tue, 7 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ