Viral Video: ಇದು ಪಾಸ್​ಪೋರ್ಟ? ಫೋನ್​ ನಂಬರ್​​, ಲೆಕ್ಕಗಿಕ್ಕ ನೋಡಿ ದಿಗ್ಭ್ರಾಂತನಾದ ಅಧಿಕಾರಿ

Shocking: ಯಾರಿಗೆ ಎಷ್ಟು ಹಣ ಕೊಡಲಾಗಿದೆ, ಎಷ್ಟು ಹಣ ವಾಪಾಸು ಬಂದಿದೆ. ಯಾವುದ್ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎನ್ನುವುದೆಲ್ಲ ಈ ಪಾಸ್​​ಪೋರ್ಟ್​ನಲ್ಲಿದೆ. ಅಷ್ಟೇ ಅಲ್ಲ ಫೋನ್​ ನಂಬರುಗಳೂ. ಪಾಸ್​ಪೋರ್ಟ್​ನ ಖಾಲಿ ಹಾಳೆಯನ್ನು ಬಿಡುವುದು ಯಾಕೆ? ಎಂದುಕೊಂಡರೋ ಏನೋ ಈ ಮಲಯಾಳಿ ಮಹಾಶಯರು. ಪಾಸ್​ಪೋರ್ಟ್ ನವೀಕರಣಕ್ಕೆಂದು ಹೋದಾಗ ಮೂರ್ಛೆ ಹೋಗುವ ಸರದಿ ಅಧಿಕಾರಿಗಳದ್ದಾಗಿತ್ತು.

Viral Video: ಇದು ಪಾಸ್​ಪೋರ್ಟ? ಫೋನ್​ ನಂಬರ್​​, ಲೆಕ್ಕಗಿಕ್ಕ ನೋಡಿ ದಿಗ್ಭ್ರಾಂತನಾದ ಅಧಿಕಾರಿ
ಪಾಸ್​ಪೋರ್ಟ್​ನಲ್ಲಿ ಫೋನ್​ ನಂಬರ್​, ಲೆಕ್ಕ ಬರೆದಿರುವುದು.
Follow us
ಶ್ರೀದೇವಿ ಕಳಸದ
|

Updated on:Nov 04, 2023 | 1:20 PM

Passport : ಈಗಲೂ ಅನೇಕರ ಜೇಬಿನಲ್ಲಿ, ಬ್ಯಾಗಿನಲ್ಲಿ, ಅನೇಕರು ಸಣ್ಣ ಡೈರಿಯನ್ನು ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಮೊಬೈಲ್​ ನಂಬರ್​, ಲೆಕ್ಕ ವ್ಯವಹಾರ ಇತ್ಯಾದಿ ವಿಷಯಗಳನ್ನು ನಮೂದಿಸಿರುತ್ತಾರೆ. ಆದರೆ ಪಾಸ್​ಪೋರ್ಟ್​ನಲ್ಲಿ ಹೀಗೆಲ್ಲ ಬರೆದುದನ್ನು ಈತನಕ ನೋಡಿದ್ದೀರೇ? ಇಲ್ಲವಾದರೆ ಈ ವಿಡಿಯೋ ನೋಡಿ. ಮಲಯಾಳದ ವ್ಯಕ್ತಿಯೊಬ್ಬರು ಪಾಸ್​ಪೋರ್ಟ್​ ನವೀರಕರಣಕ್ಕೆಂದು ಪಾಸ್​ಪೋರ್ಟ್​ ಆಫೀಸಿಗೆ ಹೋದಾಗ ಅಲ್ಲಿಯ ಅಧಿಕಾರಿ (Officer) ಪಾಸ್​ಪೋರ್ಟ್ ತಪಾಸಣೆ ನಡೆಸಿದ್ದಾರೆ. ಅದರ ಅವಸ್ಥೆ ನೋಡಿ ದಿಗ್ಭ್ರಾಂತರಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳ ಮೂಲಕ ಮನರಂಜನೆ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: 8 ವರ್ಷದ ಈ ಬಾಲಕ ತನ್ನ ಹುಟ್ಟುಹಬ್ಬದ ದಿನ ಅತ್ತಿದ್ದೇಕೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎರಡು ದಿನಗಳ ಹಿಂದೆ X ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 4,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 900 ಜನರು ರೀಪೋಸ್ಟ್ ಮಾಡಿದ್ದಾರೆ. ಸುಮಾರು 270 ಜನರು ಪ್ರತಿಕ್ರಿಯಿಸಿದ್ದಾರೆ.

ಇದು ಪಾಸ್​ಪೋರ್ಟೋ ಫೋನ್​ ಡೈರೆಕ್ಟರಿಯೋ

ಈ ಪಾಸ್​ಪೋರ್ಟ್​ನೊಂದಿಗೆ ಪ್ರಯಾಣ ಮಾಡುವಾಗ ಅಧಿಕಾರಿ ಅದನ್ನು ಸ್ಟ್ಯಾಂಪ್ ಮಾಡಬೇಕಾದರೆ ಅವನಿಗೆ ಹೇಗನ್ನಿಸಬಹುದು ಎನ್ನುವುದು ಊಹಿಸಿ ಎಂದಿದ್ದಾರೆ ಒಬ್ಬರು. ಅವರು ಬಹುಶಃ ಪಾಸ್​ಪೋರ್ಟ್​ ಅನ್ನು ಈತನಕ ಪ್ರಯಾಣಕ್ಕೆ ಬಳಸಿಯೇ ಇಲ್ಲ ಎನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಖಾಲೀ ಪುಟಗಳನ್ನುಯಾಕೆ ಬಿಡಬೇಕು ಎಂದು ಯೋಚಿಸಿರುವಂತಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಕೋಕ್​ ಸ್ಟುಡಿಯೋದ ‘ಖಲಾಸಿ’ ಬೆಡಗಿಯ ಬೆಲ್ಲಿ ಡ್ಯಾನ್ಸ್​; ವಾಹ್​ ಎಂದ ನೆಟ್ಟಿಗರು

ಮೊದಲನೇ ಸಲ ಇಂಥದನ್ನು ನೋಡುತ್ತಿದ್ದೇನೆ ಈ ಕಾಲದಲ್ಲಿ ಹೀಗೆ ಬದುಕುವವರೂ ಇದ್ದಾರೆಯೇ? ಎಂದು ಅಚ್ಚರಿಯಾಗುತ್ತಿದೆ ಎಂದಿದ್ದಾರೆ ಒಬ್ಬರು. ಹೀಗೆಲ್ಲ ಮಾಡುವವರು ನಮ್ಮ ದೇಶದವರೇ ಎಂದಿದ್ದಾರೆ ಇನ್ನೊಬ್ಬರು. ತಿಳಿವಳಿಕೆ ಇಲ್ಲದ ಜನ ಹೀಗೆ ಮಾಡಿದ್ದಾರೆ, ತಪ್ಪೇನಿದೆ? ಅಧಿಕಾರಿ ತಿಳಿಹೇಳಿರುತ್ತಾರೆ ಬಿಡಿ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:19 pm, Sat, 4 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ