Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುತ್ತಿದ್ದ ಬೈಕ್​​ನಲ್ಲಿ ಕುಳಿತು ಭರತನಾಟ್ಯ ಮಾಡಿದ ಪುಟ್ಟ ಹುಡುಗಿ, ಇಲ್ಲಿದೆ ವಿಡಿಯೋ

 ಮಕ್ಕಳು ಯಾವುದೇ ಕೆಲಸವನ್ನಾದರೂ ಆಗಲಿ ಶ್ರದ್ದೆಯಿಂದ ಮಾಡುತ್ತಾರೆ. ಅದಕ್ಕೆ ಪೂರಕವೆಂಬ ಹಾಗೆ ಇತ್ತೀಚಿಗೆ ಒಂದು ಪುಟ್ಟ ಹುಡುಗಿಯ ಡಾನ್ಸ್ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೀವೂ ಕೂಡ ನೋಡಿರಬಹುದು, ಇದು ನಿಮಗೆ ಹಲವಾರು ಕಥೆಗಳನ್ನು ಹೇಳುತ್ತವೆಯಾದರೂ ಆಕೆಗೆ ನೃತ್ಯದ ಮೇಲಿರುವ ಆಸಕ್ತಿ ಎದ್ದು ತೋರುತ್ತದೆ. ಮನಸ್ಸಿಗೆ ಇಷ್ಟವಾದದ್ದನ್ನು ಮಾಡಲು ಯಾರಹಂಗಿಲ್ಲ ಎನ್ನುವಂತೆ, ಇಷ್ಟ ಪಟ್ಟ ಕಾರ್ಯವನ್ನು ಕಷ್ಟದಲ್ಲಿಯೂ ಮಾಡಬಹುದು ಎಂಬುದಕ್ಕೆ ಈ ಪುಟ್ಟ ಹುಡುಗಿ ಸಾಕ್ಷಿಯಾಗಿದ್ದಾಳೆ.

ಚಲಿಸುತ್ತಿದ್ದ ಬೈಕ್​​ನಲ್ಲಿ ಕುಳಿತು ಭರತನಾಟ್ಯ ಮಾಡಿದ ಪುಟ್ಟ ಹುಡುಗಿ, ಇಲ್ಲಿದೆ ವಿಡಿಯೋ
ವೈರಲ್​​​ ವಿಡಿಯೋ ಇಲ್ಲಿದೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 08, 2023 | 2:23 PM

ಮಕ್ಕಳ ಆಟ- ಪಾಠ ಎಲ್ಲವೂ ಚೆಂದ. ಅವರ ಮುಗ್ಧತೆ ಇನ್ನೂ ಚೆಂದ. ಇವೆಲ್ಲವೂ ಎಂತವರ ಮನಸ್ಸನ್ನೂ ಕೂಡ ಕರಗಿಸುತ್ತದೆ. ಅದರಲ್ಲಿಯೂ ಮಕ್ಕಳು ಯಾವುದೇ ಕೆಲಸವನ್ನಾದರೂ ಆಗಲಿ ಶ್ರದ್ದೆಯಿಂದ ಮಾಡುತ್ತಾರೆ. ಅದಕ್ಕೆ ಪೂರಕವೆಂಬ ಹಾಗೆ ಇತ್ತೀಚಿಗೆ ಒಂದು ಪುಟ್ಟ ಹುಡುಗಿಯ ಡಾನ್ಸ್ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೀವೂ ಕೂಡ ನೋಡಿರಬಹುದು, ಇದು ನಿಮಗೆ ಹಲವಾರು ಕಥೆಗಳನ್ನು ಹೇಳುತ್ತವೆಯಾದರೂ ಆಕೆಗೆ ನೃತ್ಯದ ಮೇಲಿರುವ ಆಸಕ್ತಿ ಎದ್ದು ತೋರುತ್ತದೆ. ಮನಸ್ಸಿಗೆ ಇಷ್ಟವಾದದ್ದನ್ನು ಮಾಡಲು ಯಾರಹಂಗಿಲ್ಲ ಎನ್ನುವಂತೆ, ಇಷ್ಟ ಪಟ್ಟ ಕಾರ್ಯವನ್ನು ಕಷ್ಟದಲ್ಲಿಯೂ ಮಾಡಬಹುದು ಎಂಬುದಕ್ಕೆ ಈ ಪುಟ್ಟ ಹುಡುಗಿ ಸಾಕ್ಷಿಯಾಗಿದ್ದಾಳೆ.

ಅಂತಹ ವಿಶೇಷ ಏನಿದೆ ಈ ವಿಡಿಯೋದಲ್ಲಿ ಅಂತೀರಾ? ಒಂದು ಮುದ್ದಾದ ಹುಡುಗಿ ತನ್ನ ತಂದೆ ಜೊತೆ ಬೈಕ್ ನಲ್ಲಿ ಕುಳಿತು ಅಲ್ಲಿಯೇ ಡಾನ್ಸ್ ಮಾಡುತ್ತಾಳೆ. ಅನೇಕ ಭರತನಾಟ್ಯ ಭಂಗಿಯನ್ನು ಮಾಡುವ ಮೂಲಕ ತನ್ನ ಪ್ರತಿಭೆಯನ್ನು ಬೈಕ್ ನಲ್ಲಿಯೇ ಕುಳಿತು ಪ್ರದರ್ಶಿಸುತ್ತಾಳೆ. ಅವರ ಹಿಂದೆ ಹಿಂದೆ ಹೋಗುತ್ತಿರುವ ಒಂದು ಕಾರಿನವರು ಈ ವಿಡಿಯೋ ಮಾಡಿದ್ದು ಈಗ ಎಲ್ಲೆಡೆ ವೈರೆಲ್ ಆಗಿದೆ. ಅದಕ್ಕೆ ಭರತನಾಟ್ಯದ ಹಲವು ಪದ್ಯಗಳನ್ನು ಎಡಿಟ್ ಮಾಡಿದ್ದು ಆಕೆಯ ನೃತ್ಯ ವೈಖರಿಗೆ ಸರಿಸಾಟಿಯಿಲ್ಲ ಎಂಬಂತೆ ಅನಿಸುತ್ತದೆ. ಯಾವುದೇ ಅಲಂಕಾರಗಳಿಲ್ಲದೆಯೇ ಕಲೆಯನ್ನು ಪ್ರದರ್ಶನ ಮಾಡುವುದು ಕೂಡ ಒಂದು ಸಾಧನೆಯೇ ಸರಿ. ಆ ಪುಟ್ಟ ಹುಡುಗಿಯ ವಯಸ್ಸಿಗೆ ಆಕೆಗಿರುವ ಶ್ರದ್ದೆ, ಉತ್ಸಾಹ, ಆ ಪ್ರೀತಿ ಎಲ್ಲವೂ ಅಗಣಿತ. ಯಾರು ನನ್ನನ್ನು ನೋಡುತ್ತಾರೋ? ಏನೆಂದು ಕೊಳ್ಳುತ್ತಾರೋ? ಅದಾವ ಯೋಚನೆಗಳಿಲ್ಲದೇ ಅವಳದೇ ಆದ ಲೋಕದಲ್ಲಿ ವಿಹರಿಸುತ್ತಿರುವ ಅವಳೇ ಸುಖಿ ಎಂದೆನಿಸುತ್ತದೆ.

ಇದನ್ನೂ ಓದಿ:  ಕಾರು ಚಾಲಕನ ಸಣ್ಣ ತಪ್ಪು, ಸ್ಕೂಟಿ ಚಾಲಕನ ಪ್ರಾಣಕ್ಕೆ ಕುತ್ತು ತಂತು; ವಿಡಿಯೋ ವೈರಲ್​​

ವೈರಲ್​​ ವಿಡಿಯೋ ಇಲ್ಲಿದೆ:

ಈ ವಿಡಿಯೋ ನೋಡಿದ ಹಲವರು ಆಕೆಯ ಮುಂದಿನ ಜೀವನಕ್ಕೆ ಶುಭಹಾರೈಕೆಗಳನ್ನು ತಿಳಿಸಿದ್ದಾರೆ. ಇನ್ನು ಕೆಲವರು ಅವಳ ನೃತ್ಯಕ್ಕೆ ಮನಸೋತಿದ್ದು ಆಕೆಯ ಉತ್ಸಾಹಕ್ಕೆ ಜೈ ಎಂದಿದ್ದಾರೆ. ಮತ್ತೊಂದಿಷ್ಟು ಜನ ಇವೆಲ್ಲವೂ ನಮ್ಮ ಬಾಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಏನೇ ಆಗಲಿ ಆಕೆಯ ಬೈಕ್ ನೃತ್ಯ ಬಹಳ ಸೊಗಸಾಗಿದೆ ಎಂಬುದು ಸುಳ್ಳಲ್ಲ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 2:22 pm, Wed, 8 November 23

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ