Viral Video: ಡ್ಯಾನ್ಸಿಂಗ್ ದಾದೀ; ‘ಖಲಾಸೀ’ಗೆ ನರ್ತಿಸಿ ನವರಾತ್ರಿ ರಂಗೇರಿಸಿದ್ದ 65ರ ಅಜ್ಜಿಯ ವಿಡಿಯೋ ವೈರಲ್

Viral Dance: ರವಿ ಬಾಲಾ ಶರ್ಮಾ ಈ ಅಜ್ಜಿ ನೆಟ್ಟಿಗರಿಗೆ ಅಚ್ಚುಮೆಚ್ಚು. ಅಜ್ಜಿ ಮತ್ತೆ ಹೊಸ ರೀಲ್ ಯಾವಾಗ ಪೋಸ್ಟ್ ಮಾಡ್ತಾರೆ ಅಂತ ನೆಟ್ಟಿಗರು ಕಾಯ್ತಾ ಇರ್ತಾರೆ. ಇವರ ಡ್ಯಾನ್ಸ್​ ರೀಲ್​ಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಖಲಾಸಿ ಹಾಡಿಗೆ ಇವರು ಡ್ಯಾನ್ಸ್ ಮಾಡಿದ್ದು ಮತ್ತೆ ವೈರಲ್ ಆಗಿದೆ ಇವರ ರೀಲ್​. ನೀವು ಇವರ ವಿಡಿಯೋ ನೋಡಬೇಕಾ? ಬನ್ನಿ ಹಾಗಿದ್ದರೆ...

Viral Video: ಡ್ಯಾನ್ಸಿಂಗ್ ದಾದೀ; 'ಖಲಾಸೀ'ಗೆ ನರ್ತಿಸಿ ನವರಾತ್ರಿ ರಂಗೇರಿಸಿದ್ದ 65ರ ಅಜ್ಜಿಯ ವಿಡಿಯೋ ವೈರಲ್
ರವಿ ಬಾಲಾ ಶರ್ಮಾ
Follow us
ಶ್ರೀದೇವಿ ಕಳಸದ
|

Updated on:Nov 08, 2023 | 1:29 PM

Dance: 65 ವರ್ಷದ ರವಿ ಬಾಲಾ ಶರ್ಮಾ ನೆಟ್ಟಿಗರ ಕಣ್ಮಣಿ. ಡ್ಯಾನ್ಸಿಂಗ್​ ದಾದೀ ಎಂದೇ ಪರಿಚಿತರು. ಅವರು ಮಾಡುವ ಡ್ಯಾನ್ಸ್​ ರೀಲ್​ಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅವರ ಉತ್ಸಾಹ ಮತ್ತು ನೃತ್ಯಕೌಶಲವನ್ನು ಕೊಂಡಾಡುವ ಸಾವಿರಾರು ಅಭಿಮಾನಿಗಳು ಅವರ ಹೊಸ ರೀಲ್​ಗಾಗಿ (New Reel) ಕಾಯುತ್ತಿರುತ್ತಾರೆ. ನವರಾತ್ರಿ ಸಮಯದಲ್ಲಿ ಕೋಕ್​ ಸ್ಟುಡಿಯೋದ ‘ಖಲಾಸಿ’ ಹಾಡಿಗೆ ಗರ್ಭಾ ನೃತ್ಯವನ್ನು ಪ್ರಸ್ತುತಪಡಿಸಿದ್ದಾರೆ ಈ ಅಜ್ಜಿ. ಹಳದಿ ಬಣ್ಣದ ಉಡುಪಿನಲ್ಲಿ ಅತ್ಯಂತ ಮೋಹಕವಾಗಿ ಕಂಗೊಳಿಸಿದ್ದಾರೆ ನೆಟ್ಟಿಗರು ಆಹಾ ಅದ್ಭುತ ಎಂದು ಹುರಿದುಂಬಿಸಿದ್ದಾರೆ.

ಇದನ್ನೂ ಓದಿ : Viral Video: ‘ಕಬ್ಬಿನ ಟೋಲ್’​ ಇಲ್ಲಿಯ ಆನೆಗಳಿಗೆ ಕೇಳಿ ಪಡೆಯುವ ಸುಖ ಗೊತ್ತು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್ 15 ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಎಂಟು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ನಯನಮನೋಹರವಾದ ಈ ನೃತ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ನಿಮ್ಮ ಶಕ್ತಿ ನಿಜಕ್ಕೂ ಅದ್ಭುತ ಎಂದಿದ್ದಾರೆ ಒಬ್ಬರು. ನೀವು ಸ್ಫೂರ್ತಿಯ ಗಣಿ ಎಂದಿದ್ದಾರೆ ಇನ್ನೊಬ್ಬರು. ಸೂಪರ್ ದಾದೀಮಾ ಎಂದಿದ್ದಾರೆ ಮತ್ತೊಬ್ಬರು.

ಇಲ್ಲಿದೆ ಅಜ್ಜಿಯ ಡ್ಯಾನ್ಸ್​

ನೀವು ನೋಡಲು ಬಹಳ ಸುಂದರವಾಗಿದ್ದೀರಿ, ವಯಸ್ಸು ಎನ್ನುವುದು ಕೇವಲ ಅಂಕಿ ಸಂಖ್ಯೆ ಎನ್ನುವುದನ್ನು ನಿರೂಪಿಸಿದ್ದೀರಿ ಎಂದಿದ್ದಾರೆ ಒಬ್ಬರು. ನಿಮಗೆ ವಯಸ್ಸೇ ಆಗುವುದಿಲ್ಲ, ಯುವತಿಯರೂ ಕೂಡ ನಾಚುವಂತೆ ನರ್ತಿಸುತ್ತೀರಿ ಎಂದಿದ್ದಾರೆ ಇನ್ನೊಬ್ಬರು. ನನಗೂ ಈಗ ಈ ಹಾಡಿಗೆ ಡ್ಯಾನ್ಸ್ ಮಾಡಬೇಕು ಅನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ

ಖಲಾಸಿ ಹಾಡನ್ನು ಅಚಿಂತ್ ನಿರ್ಮಿಸಿದ್ದಾರೆ ಮತ್ತು ಸಂಯೋಜಿಸಿದ್ದಾರೆ, ಸೌಮ್ಯ ಜೋಶಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆದಿತ್ಯ ಗಾದ್ವಿ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ಸದ್ಯದಲ್ಲಿ ಟ್ರೆಂಡಿಂಗ್​ನಲ್ಲಿದ್ದು ಸಿನೆಮಾ ತಾರೆಯರು, ರೀಲಿಗರು ಮತ್ತು ವೃತ್ತಿಪರ ನೃತ್ಯ ಕಲಾವಿದರು ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 1:24 pm, Wed, 8 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ