Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಮನಸ್ಸಿನ ಪ್ರಧಾನಿ, ಮೋದಿ ಮೋಡಿಗೆ ಪುಟ್ಟ ಮಗು ಪಿಧಾ! ಇಲ್ಲಿದೆ ವಿಡಿಯೋ

ಪ್ರಧಾನಿ ಮೋದಿ ಅವರು ಒಂದು ಚಿಕ್ಕ ಮಗುವಿನ ಜೊತೆಯಲ್ಲಿ ಆಟವಾಡುತ್ತಿರುವ ವಿಡಿಯೋ ಬಾರಿ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇದು ಮೋದಿ ಅಭಿಮಾನಿಗಳಿಗೆ ದುಪ್ಪಟ್ಟು ಸಂತಸ ತಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ "ಮೋದಿಯವರ ಹಾವ -ಭಾವ ನೋಡಿದವರು ಅವರನ್ನು ದ್ವೇಷಿಸಲು ಸಾಧ್ಯವಿಲ್ಲ" ಎಂಬ ಟ್ಯಾಗ್ ಲೈನ್ ಮೂಲಕ ಎಲ್ಲರ ಸ್ಟೇಟಸ್ ಕೂಡ ಆಗಿದೆ. ಜೊತೆಗೆ ಫೇಸ್ಬುಕ್, ಟ್ವಿಟ್ಟರ್​​ಗಳಲ್ಲಿ ಬಾರಿ ಹವಾ ಎಬ್ಬಿಸಿದೆ.

ಮಗು ಮನಸ್ಸಿನ ಪ್ರಧಾನಿ, ಮೋದಿ ಮೋಡಿಗೆ ಪುಟ್ಟ ಮಗು ಪಿಧಾ! ಇಲ್ಲಿದೆ ವಿಡಿಯೋ
ವೈರಲ್​​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Nov 08, 2023 | 3:14 PM

ಪ್ರಧಾನಿ ಮೋದಿಯವರನ್ನು ದೂಷಿಸುವವರು ಸಾವಿರ ಮಂದಿಯಾದರೆ ಪ್ರೀತಿಸುವವರು ಲಕ್ಷ ಮಂದಿ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದೆ. ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದ ಬಿಜೆಪಿಯ ಸಾರ್ವಜನಿಕ ರ್‍ಯಾಲಿಯಲ್ಲಿ ಮೋದಿ ಭಾಗವಹಿಸಿ, ತಮ್ಮ ಮಾತುಗಳಲ್ಲಿ ಬಿಜೆಪಿ ಸರಕಾರದ ಆಡಳಿತ ವೈಖರಿಯ ಬಗ್ಗೆ ತಿಳಿಸಿದ್ದರು. ಈ ವಿಚಾರವಾಗಿಯೂ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದರ ಜೊತೆ ಜೊತೆಗೆ ಮೋದಿ ಅವರು ಒಂದು ಚಿಕ್ಕ ಮಗುವಿನ ಜೊತೆಯಲ್ಲಿ ಆಟವಾಡುತ್ತಿರುವ ಕ್ಲಿಪ್ ಬಾರಿ ವೈರೆಲ್ ಆಗಿರುವುದನ್ನು ನೀವು ನೋಡಿರಬಹುದು. ಇದು ಮೋದಿ ಅಭಿಮಾನಿಗಳಿಗೆ ದುಪ್ಪಟ್ಟು ಸಂತಸ ತಂದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ “ಮೋದಿಯವರ ಹಾವ -ಭಾವ ನೋಡಿದವರು ಅವರನ್ನು ದ್ವೇಷಿಸಲು ಸಾಧ್ಯವಿಲ್ಲ” ಎಂಬ ಟ್ಯಾಗ್ ಲೈನ್ ಮೂಲಕ ಎಲ್ಲರ ಸ್ಟೇಟಸ್ ಕೂಡ ಆಗಿದೆ. ಜೊತೆಗೆ ಫೇಸ್ಬುಕ್, ಟ್ವಿಟ್ಟರ್​​ಗಳಲ್ಲಿ ಬಾರಿ ಹವಾ ಎಬ್ಬಿಸಿದೆ. ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ಒಂದು ಚಿಕ್ಕ ಮಗು ತನ್ನ ತಾಯಿಯ ತೋಳಲ್ಲಿ ಕುಳಿತು ಮೋದಿಯವರನ್ನು ನೋಡುತ್ತಿತ್ತು. ಮಗುವಿನ ಹತ್ತಿರಕ್ಕೆ ಬಂದ ಅವರು ಮಂದ ಹಾಸದಿಂದ ತನ್ನ ಬಳಿ “ಬಾ” ಎಂದು ಕರೆಯುತ್ತಾರೆ. ಅಷ್ಟು ಕರೆದಿದ್ದೆ ತಡ ಆ ಮಗು ಅವರ ಬಳಿ ಹೋಗಲು ಕಾಯುತ್ತಾ ಇದ್ದವರಂತೆ ಅವರ ತೋಳಿಗೆ ಜಿಗಿಯಿತು. ಆ ಮಗುವನ್ನು ಮುದ್ದಾಡಿದ ಮೋದಿ ಕೆಲವು ನಿಮಿಷಗಳ ಕಾಲ ಮಗುವಾದರು. ಇನ್ನು ಆ ಮಗುವಿನ ತಾಯಿ ತನ್ನ ಮುದ್ದು ಕಂದ ಮೋದಿಜೀ ಬಳಿ ಹೋಗಿದ್ದನ್ನು ನೋಡಿ ಕಣ್ಣತುಂಬಿಕೊಂಡರು. ಇದು ಕೇವಲ ಕೆಲವು ನಿಮಿಷಗಳ ವಿಡಿಯೋವಾದರೂ ಕೂಡ ಯಾರೂ ಅದನ್ನು ಚೆನ್ನಾಗಿಲ್ಲ ಎಂದು ಹೇಳಲಾರರು.

ಇದನ್ನೂ ಓದಿ:ಲತಾ ಮಂಗೇಶ್ಕರ್  ಹಾಡಿಗೆ ವೃದ್ಧದಂಪತಿ ಲಿಪ್​ ಸಿಂಕ್; 2 ಮಿಲಿಯನ್​ ವೀಕ್ಷಣೆ​

ಪ್ರಧಾನಿ ಮೋದಿ ಮತ್ತು ಮಗುವಿನ ವೈರಲ್​​ ವಿಡಿಯೋ ಇಲ್ಲಿದೆ:

ಈ ಬಗ್ಗೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು “ಮತ್ತೊಮ್ಮೆ ನಮ್ಮ ಮನಸ್ಸು ಗೆದ್ದು ಬಿಟ್ಟರಿ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಮಗುವಿನ ಅದೃಷ್ಟವನ್ನು ಹೊಗಳಿದ್ದಾರೆ. ಅನೇಕರು “ನಮೋ” ಎಂದು ಬರೆದುಕೊಂಡಿದ್ದಾರೆ. ಏನೇ ಆಗಲಿ ಈ ವಿಡಿಯೋ ಮಾತ್ರ ನಿಮ್ಮ ಮನಸ್ಸಿಗೆ ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ. ಮಕ್ಕಳ ಮೇಲೆ ಪ್ರಧಾನಿ ಮೋದಿ ಅವರಿಗಿರುವ ಪ್ರೀತಿ ಅಪಾರ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:33 am, Wed, 8 November 23

ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ