Viral Video: ಹಗ್ಗ ಬಿಚ್ಚಿ ಕೋತಿಯನ್ನು ರಕ್ಷಿಸಿದವನನ್ನೇ ಅನುಮಾನಿಸಿದ ನೆಟ್ಟಿಗರು; ನೀವೇನಂತೀರಿ?

Animals: ಈ ಕೋತಿಯನ್ನು ಈ ವ್ಯಕ್ತಿ ರಕ್ಷಿಸಿದ್ದಾರೆ. ಆದರೆ ಕೆಲವರು ರೀಲಿಗಾಗಿ ಹೀಗೆಲ್ಲ ಮಾಡುತ್ತಾರೆ ಎಂದಿದ್ದಾರೆ. ಅನುಮಾನದ ರೋಗವಿದ್ದರೆ ಹೀಗೇ ಆಗುವುದು, ಮಾನವೀಯತೆ ಬಗ್ಗೆ ಅರಿವಿಲ್ಲದವರು ಮಾತ್ರ ಹೀಗೆಲ್ಲ ಪ್ರತಿಕ್ರಿಯಿಸುತ್ತಾರೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ವಿಡಿಯೋ ನೋಡಿದರೆ ನಿಮ್ಮಿಂದ ಏನು ಅಭಿಪ್ರಾಯ ಹೊಮ್ಮುತ್ತದೆ ಎಂಬ ಕುತೂಹಲ ನಮ್ಮದು.

Viral Video: ಹಗ್ಗ ಬಿಚ್ಚಿ ಕೋತಿಯನ್ನು ರಕ್ಷಿಸಿದವನನ್ನೇ ಅನುಮಾನಿಸಿದ ನೆಟ್ಟಿಗರು; ನೀವೇನಂತೀರಿ?
ಕೋತಿಯನ್ನು ರಕ್ಷಿಸಿದ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on: Nov 08, 2023 | 3:08 PM

Monkey Lover: ಕೋತಿ ಎಂದಮೇಲೆ ತುಂಟತನ ಅದರ ಜನ್ಮ ಸಿದ್ಧ ಹಕ್ಕು. ಆದರೆ ಅದು ಕಾಲಿಗೆ ಹಗ್ಗ ಕಟ್ಟಿಸಿಕೊಳ್ಳುವಂಥ ತಪ್ಪನ್ನು ಏನು ಮಾಡಿತ್ತೋ ಏನೋ. ಅಷ್ಟೇ ಅಲ್ಲ ನಿರ್ಜನ ಪ್ರದೇಶದಲ್ಲಿ ಅದನ್ನು ಬಿಟ್ಟು ಬೇರೆ ಹೋಗಿದ್ದಾರೆ. ಅಂತೂ ಅದು ಪ್ರಾಣಿಪ್ರಿಯರೊಬ್ಬರ (Animal Lover) ಕಣ್ಣಿಗೆ ಬಿದ್ದಿದೆ. ಎರಡೂ ಕಾಲುಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅದನ್ನು ಪಾರು ಮಾಡಿದ್ದಾರೆ. ಕುಡಿಯಲು ನೀರು ಕೊಟ್ಟಿದ್ದಾರೆ. ಕಾಡಿನಲ್ಲೇ ಅದು ಮರೆಯಾಗಬಹುದೆಂದು ಕಾಯ್ದಿದ್ದಾರೆ. ಆದರೆ ಅದು ಅವರೊಂದಿಗೆ ನಡೆದುಕೊಂಡು ಬಂದಿದೆ. ಕೊನೆಗೊಂದು ಕಡೆ ಕುಳಿತಾಗ ಅವರ ಮಡಿಲನ್ನೂ ಏರಿ ಕುಳಿತಿದೆ.

ಇದನ್ನೂ ಓದಿ : Viral Video: ಡ್ಯಾನ್ಸಿಂಗ್ ದಾದೀ; ‘ಖಲಾಸೀ’ಗೆ ನರ್ತಿಸಿ ನವರಾತ್ರಿ ರಂಗೇರಿಸಿದ್ದ 65ರ ಅಜ್ಜಿಯ ವಿಡಿಯೋ ವೈರಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆಪ್ಟೆಂಬರ್ 5ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 5 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಮಾನವೀಯತೆಯ ಈ ದೃಶ್ಯವನ್ನು ನೋಡಿ ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಇವರು ವಿಡಿಯೋಗಾಗಿಯೇ ಹೀಗೆಲ್ಲ ಮಾಡುತ್ತಾರೆ ಎಂದೆನ್ನಿಸುತ್ತದೆ ಎಂದಿದ್ದಾರೆ.

ಇಲ್ಲಿದೆ ಕೋತಿಗೆ ಸಹಾಯ ಮಾಡುತ್ತಿರುವ ವಿಡಿಯೋ

ಪ್ರಾಣಿ ಮಕ್ಕಳನ್ನು ಹಿಂಸೆ ಮಾಡುವ ಜನರಿಗೆಂದೇ ನರಕದಲ್ಲಿ ವಿಶೇಷ ಜಾಗವಿದೆ. ನೀವು ಈ ಮಗುವನ್ನು ಬದುಕಿಸಿದಿರಿ ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಒಬ್ಬರು. ಯಾಕೆ ಜನರು ಹೀಗೆ ವಿಕೃತಿಯನ್ನು ಮೆರೆಯುತ್ತಾರೋ ಕಾಣೆ, ಅಂತೂ ಕೆಲವರಿಗಾದರೂ ದಯೆ ಕರುಣೆ ಇದೆಯಲ್ಲ ಸಾಕು ಎಂದಿದ್ದಾರೆ ಇನ್ನೊಬ್ಬರು. ಈ ಮನುಷ್ಯನೇ ಈ ಕೋತಿಗೆ ಹಗ್ಗ ಕಟ್ಟಿ ಕ್ಯಾಮೆರಾ ಎದುರು ಬಿಚ್ಚುತ್ತಿದ್ದರೆ? ಈ ವ್ಯಕ್ತಿಯನ್ನು ನಂಬುವುದು ಹೇಗೆ? ಎಂದಿದ್ದಾರೆ ಮತ್ತೊಬ್ಬರು. ನಂಬಿಕೆ ಎನ್ನುವುದು ಇರಬೇಕು, ಎಲ್ಲವನ್ನೂ ಅನುಮಾನಿಸುತ್ತೀರಾದರೆ ನಿಮಗೆ ಏನೋ ಸಮಸ್ಯೆ ಇದೆ ಎಂದರ್ಥ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ

ಹನುಮಂತನನ್ನು ಬಂಧಿಸಿದವರಿಗೆ ಶಿಕ್ಷೆ ಕಾದಿದೆ ಎಂದಿದ್ದಾರೆ ಒಬ್ಬರು. ರಾಮನು ಈ ಮನುಷ್ಯನ ರೂಪದಲ್ಲಿ ಬಂದು ಹನುಮಂತನನ್ನು ರಕ್ಷಿಸಿದ್ದಾನೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ