ಯಾಕೆ ದಾನ ಧರ್ಮ ಮಾಡುತ್ತೀರಿ? ಮಕ್ಕಳು ಮಂದಿಗೆ ದುಡ್ಡಿಡಲ್ವಾ? ಈ ಪ್ರಶ್ನೆಗೆ ಯುವ ಉದ್ಯಮಿ ಕೊಟ್ಟ ಉತ್ತರ ನೋಡಿ..!
Nikhil Kamath On Donationg Wealth: ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕರಾದ ನಿಖಿಲ್ ಕಾಮತ್ ವಯಸ್ಸು ಇನ್ನೂ 38 ವರ್ಷ. ಇಷ್ಟು ಸಣ್ಣ ವಯಸ್ಸಿಗೆ ಅವರು ತಮ್ಮ ಸಂಪತ್ತಿನ ದೊಡ್ಡ ಭಾಗವನ್ನು ದಾನ ಮಾಡುತ್ತಿದ್ದಾರೆ. ಅತಿಹೆಚ್ಚು ದಾನ ಮಾಡುವವರಲ್ಲಿ ಅವರು ಭಾರತದ ಅತಿಕಿರಿಯ ಬಿಲಿಯನೇರ್ ಎನಿಸಿದ್ದಾರೆ. ಭವಿಷ್ಯದ ದಿನಗಳಿಗೆ ಮತ್ತು ಮುಂದಿನ ತಲೆಮಾರುಗಳಿಗೆ ಹಣ ಎತ್ತಿಡುವ ಬದಲು ಯಾಕೆ ಆ ಹಣವನ್ನು ದಾನ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ನಿಖಿಲ್ ಕಾಮತ್ ಉತ್ತರ ಬಹಳ ಸೋಜಿಗ ಎನಿಸುತ್ತದೆ.
ಭಾರತದ ಯುವ ಉದ್ಯಮಿ ಮತ್ತು ಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿರುವ ನಿಖಿಲ್ ಕಾಮತ್ ದಾನ ದತ್ತಿಗಳಲ್ಲೂ (philanthropy) ಸೈ ಎನಿಸಿದ್ದಾರೆ. ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕರಾದ ನಿಖಿಲ್ ಕಾಮತ್ ವಯಸ್ಸು ಇನ್ನೂ 38 ವರ್ಷ. ಇಷ್ಟು ಸಣ್ಣ ವಯಸ್ಸಿಗೆ ಅವರು ತಮ್ಮ ಸಂಪತ್ತಿನ ದೊಡ್ಡ ಭಾಗವನ್ನು ದಾನ ಮಾಡುತ್ತಿದ್ದಾರೆ. ಅತಿಹೆಚ್ಚು ದಾನ ಮಾಡುವವರಲ್ಲಿ ಅವರು ಭಾರತದ ಅತಿಕಿರಿಯ ಬಿಲಿಯನೇರ್ ಎನಿಸಿದ್ದಾರೆ. ಭವಿಷ್ಯದ ದಿನಗಳಿಗೆ ಮತ್ತು ಮುಂದಿನ ತಲೆಮಾರುಗಳಿಗೆ ಹಣ ಎತ್ತಿಡುವ ಬದಲು ಯಾಕೆ ಆ ಹಣವನ್ನು ದಾನ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ನಿಖಿಲ್ ಕಾಮತ್ ಉತ್ತರ ಬಹಳ ಸೋಜಿಗ ಎನಿಸುತ್ತದೆ.
ಈ ನಶ್ವರ ಬದುಕಿನಲ್ಲಿ ನಾವು ನಂಬಿರುವ ವಿಚಾರಕ್ಕೆ ಹಣ ಹಾಕಿದರೆ ಚಂದ…
‘ಈ ದೇಹ ಮತ್ತು ಬದುಕು ನಶ್ವರ ಎಂಬುದನ್ನು ಎಲ್ಲರೂ ತಿಳಿಯಬೇಕು. ನನಗೆ 37 ವರ್ಷ ವಯಸ್ಸು. ಭಾರತೀಯರ ಸರಾಸರಿ ಜೀವಿತಾವದಿ 72 ವರ್ಷ. ನನಗೆ ಈಗ 35 ವರ್ಷ ಮಾತ್ರವೇ ಉಳಿದಿರುವುದು. ಬ್ಯಾಂಕುಗಳಲ್ಲಿ ಹಣ ಉಳಿಸಿಹೋಗುವುದರಿಂದ ಏನೂ ಬೆಲೆ ಇರುವುದಿಲ್ಲ. ನಾನು ನಂಬಿರುವ ವಿಚಾರಕ್ಕೆ ಆ ಹಣ ಕೊಡಲು ಬಯಸುತ್ತೇನೆ. ಕಳೆದ 20 ವರ್ಷದಲ್ಲಿ ಗಳಿಸಿರುವ ಹಣ ಮತ್ತು ಮುಂದಿನ 20 ವರ್ಷದಲ್ಲಿ ಗಳಿಸುವ ಹಣವನ್ನು ಬ್ಯಾಂಕ್ನಲ್ಲಿ ಇರಿಸುವುದರ ಬದಲು ಆ ಹಣವನ್ನು ಸರಿಯಾಗಿ ಉಪಯೋಗಿಸುತ್ತೇನೆ,’ ಎಂದು ನಿಖಿಲ್ ಕಾಮತ್ ಹೇಳುತ್ತಾರೆ.
ಇದನ್ನೂ ಓದಿ: ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ
ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಮತ್ತು ಉದ್ಯಮಿ ವಾರನ್ ಬಫೆಟ್ ಇಬ್ಬರೂ ಸೇರಿ ಆರಂಭಿಸಿರುವ ದಿ ಗಿವಿಂಗ್ ಪ್ಲೆಡ್ಜ್ ಎಂಬ ದಾನ ಸಂಸ್ಥೆಗೆ ನಾಲ್ವರು ಭಾರತೀಯರು ಕೈಜೋಡಿಸಿದ್ದಾರೆ. ಅವರ ಪೈಕಿ ಅತ್ಯಂತ ಕಿರಿಯವರೆಂದರೆ ನಿಖಿಲ್ ಕಾಮತ್. ಕುತೂಹಲ ಎಂದರೆ ದಿ ಗಿವಿಂಗ್ ಪ್ಲೆಡ್ಜ್ನಲ್ಲಿರುವ ಎಲ್ಲಾ ನಾಲ್ವರು ಭಾರತೀಯರೂ ಕೂಡ ಕರ್ನಾಟಕದವರೇ ಮತ್ತು ಬೆಂಗಳೂರಿಗರೇ ಆಗಿರುವುದು.
ಇನ್ಫೋಸಿಸ್ನ ನಂದನ್ ನಿಲೇಕಣಿ, ವಿಪ್ರೋದ ಅಜೀಮ್ ಪ್ರೇಮ್ಜಿ, ಬಯೋಕಾನ್ನ ಕಿರಣ್ ಮಜುಮ್ದಾರ್ ಮತ್ತು ಝೀರೋಧದ ನಿಖಿಲ್ ಕಾಮತ್ ಈ ನಾಲ್ವರು ವ್ಯಕ್ತಿಗಳು. ತಮ್ಮ ಸಂಪಾದನೆಯ ಹೆಚ್ಚಿನ ಭಾಗವನ್ನು ಸಮಾಜ ಕಾರ್ಯಗಳಿಗೆ ದಾನ ಮಾಡಲು ಶಪಥ ಮಾಡಿವರು ಇವರು. ದಾನ ಕೈಂಕರ್ಯಕ್ಕೆ ನಿಖಿಲ್ ಕಾಮತ್ಗೆ ಸ್ಫೂರ್ತಿಯಾಗಿದ್ದು ನಿಲೇಕಣಿ, ಪ್ರೇಮ್ಜಿ ಮತ್ತು ಕಿರಣ್ ಮಜುಮ್ದಾರ್ ಅವರಂತೆ.
ಇದನ್ನೂ ಓದಿ: Nikhil Kamath: ಶಾಲೆಯೆಂದರೆ ತಿರಸ್ಕಾರ, ಟೀಚರ್ಗಳೆಂದರೆ ಭಯ; ಓದನ್ನೇ ಬಿಡಲು ಕಾರಣಬಿಚ್ಚಿಟ್ಟ ಝೀರೋಧ ಸಂಸ್ಥಾಪಕ
ಹೆಚ್ಚು ಜನಪ್ರಿಯತೆ, ಹೆಚ್ಚು ಹಣ ಇರುವ ಈ ವ್ಯಕ್ತಿಗಳು ಸಮಾಜದ ಬಗ್ಗೆ ಇಷ್ಟು ಪ್ರೀತಿ ಹೊಂದಿರುವಾಗ, ನಾನೂ ಅವರಂತೆಯೇ ಆಗಬೇಕೆಂದು ಬಯಸಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ