Nikhil Kamath: ಶಾಲೆಯೆಂದರೆ ತಿರಸ್ಕಾರ, ಟೀಚರ್​ಗಳೆಂದರೆ ಭಯ; ಓದನ್ನೇ ಬಿಡಲು ಕಾರಣಬಿಚ್ಚಿಟ್ಟ ಝೀರೋಧ ಸಂಸ್ಥಾಪಕ

Zerodha Co-founder Reveals Some Truths: ನಿಖಿಲ್ ಕಾಮತ್ ಶಾಲಾ ಓದನ್ನು ಮಧ್ಯಕ್ಕೇ ಬಿಟ್ಟು ವ್ಯವಹಾರಕ್ಕಿಳಿದು ಷೇರುಪೇಟೆಯಲ್ಲಿ ಒಳ್ಳೆಯ ಎತ್ತರಕ್ಕೆ ಬೆಳೆದಿರುವ ಸಂಗತಿ ಬಹಳ ಮಂದಿಗೆ ಗೊತ್ತಿರಬಹುದು. ಆದರೆ, ಶಾಲಾ ಓದನ್ನು ಯಾಕೆ ಬಿಟ್ಟೆ ಎಂಬ ಸತ್ಯವನ್ನು ಕಾಮತ್ ಬಹಿರಂಗಗೊಳಿಸಿದ್ದಾರೆ.

Nikhil Kamath: ಶಾಲೆಯೆಂದರೆ ತಿರಸ್ಕಾರ, ಟೀಚರ್​ಗಳೆಂದರೆ ಭಯ; ಓದನ್ನೇ ಬಿಡಲು ಕಾರಣಬಿಚ್ಚಿಟ್ಟ ಝೀರೋಧ ಸಂಸ್ಥಾಪಕ
ನಿಖಿಲ್ ಕಾಮತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2023 | 4:53 PM

ಶಾಲಾ ಕಾಲೇಜಿನಲ್ಲಿ ನಾವು ಪಡೆಯುವ ಸರ್ಟಿಫಿಕೇಟ್ ಎಲ್ಲದಕ್ಕೂ ಮಾನದಂಡವಲ್ಲ. ಓದೇ ನಮ್ಮ ಜೀವನದ ಸರ್ವಸ್ವ ಅಲ್ಲ. ಕಾಲೇಜು ಮೆಟ್ಟಿಲೇ ಹತ್ತದ ಹಲವರು ದೊಡ್ಡದೊಡ್ಡ ವಿಜ್ಞಾನಿಗಳಾಗಿರುವ ನಿದರ್ಶನಗಳು ನಮ್ಮಲ್ಲುಂಟು. ಓದೇ ಬರದವರು ದೊಡ್ಡ ವಾಣಿಜ್ಯೋದ್ಯಮಿಗಳಾಗಿರುವುದು, ರಾಜಕಾರಣಿಗಳು, ಮಂತ್ರಿಗಳಾಗಿರುವುದನ್ನು ನೋಡಿದ್ದೇವೆ. ಸಣ್ಣ ವಯಸ್ಸಿಗೆ ಕೋಟ್ಯಾಧಿಪತಿಯಾಗಿರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವ್ಯಾವಹಾರಿಕ ಗುಟ್ಟು ಹಂಚಿಕೊಳ್ಳುವ ಝೀರೋಧದ ಸಹಸಂಸ್ಥಾಪಕ ನಿಖಿಲ್ ಕಾಮತ್ (Zerodha co-founder Nikhil Kamath) ಹಾಗು ಅವರ ಸಹೋದರ ಸಿಇಒ ನಿತಿನ್ ಕಾಮತ್ ಇಬ್ಬರೂ ಕೂಡ ಇದಕ್ಕೆ ಉದಾಹರಣೆ ಎನಿಸಿದ್ದಾರೆ. ಬೇರೆ ಬೇರೆ ಉದ್ಯಮಸ್ನೇಹಿತರೊಂದಿಗೆ ಪೋಡ್​ಕ್ಯಾಸ್ಟ್ ನಡೆಸುವ ನಿಖಿಲ್ ಕಾಮತ್, ಅಂತಹದ್ದೊಂದು ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಾ, ತಮ್ಮ ಕೆಟ್ಟ ಶಾಲಾ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ನಿಖಿಲ್ ಕಾಮತ್ ಶಾಲಾ ಓದನ್ನು ಮಧ್ಯಕ್ಕೇ ಬಿಟ್ಟು ವ್ಯವಹಾರಕ್ಕಿಳಿದು ಷೇರುಪೇಟೆಯಲ್ಲಿ ಒಳ್ಳೆಯ ಎತ್ತರಕ್ಕೆ ಬೆಳೆದಿರುವ ಸಂಗತಿ ಬಹಳ ಮಂದಿಗೆ ಗೊತ್ತಿರಬಹುದು. ಆದರೆ, ಶಾಲಾ ಓದನ್ನು ಯಾಕೆ ಬಿಟ್ಟೆ ಎಂಬ ಸತ್ಯವನ್ನು ಕಾಮತ್ ಬಹಿರಂಗಗೊಳಿಸಿದ್ದಾರೆ. ಶಿವಮೊಗ್ಗ ಮೂಲದ ನಿಖಿಲ್ ಕಾಮತ್ ಅವರಿಗೆ ಶಾಲೆ ಎಂದರೆ ಹೇಸಿಗೆ ಎನಿಸುತ್ತಿತ್ತಂತೆ. ಈ ಟೀಚರ್, ಆ ಟೀಚರ್ ಅಂತಲ್ಲ ಎಲ್ಲಾ ಟೀಚರ್​ಗಳನ್ನು ಕಂಡರೂ ಭಯವಾಗುತ್ತಿತ್ತಂತೆ.

ಇದನ್ನೂ ಓದಿSalary Gap: ಛೇ ಛೇ..! ಸರ್ಕಾರಿ ವರ್ಸಸ್ ಖಾಸಗಿ ಸಂಸ್ಥೆ; ಎಸ್​ಬಿಐ ಛೇರ್ಮನ್​ಗೆ ಸಿಗೋ ಸಂಬಳ ಇಷ್ಟೇನಾ?

ಶಾಲೆಗೆ ಹೋಗಲು ಬಹಳ ಜಿಗುಪ್ಸೆ ಎನಿಸುತ್ತಿತ್ತು. ಶಾಲೆ ಕಲಿಸುತ್ತಿದ್ದುದು ಬರೀ ಹೆದರಿಕೆ ಮತ್ತು ವಿಧೇಯತೆ ಮಾತ್ರವೇ. ವಿಧೇಯತೆಯ ವ್ಯಕ್ತಿ 10 ವರ್ಷದಲ್ಲಿ ಯಶಸ್ಸು ಕಾಣಲಾರ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.

‘ನಾನು ಹೋಗುತ್ತಿದ್ದ ಶಾಲೆ ಭಯಂಕರವಾದುದು. ಶಾಲೆ ಎಂದರೆ ತಿರಸ್ಕಾರ, ನನ್ನ ಶಿಕ್ಷಕರನನ್ನು ದ್ವೇಷಿಸುತ್ತಿದ್ದೆ. ನಾವು ಯಾವುದಕ್ಕೆ ಹೆದರಬಾರದೋ ಅದಕ್ಕೆಲ್ಲಾ ಹೆದರುತ್ತಾ ಬೆಳೆದೆ. ನನ್ನ ಕ್ಲಾಸ್ ಟೀಚರ್, ಈ ಟೀಚರ್, ಆ ಟೀಚರ್ ಹೀಗೆ ಎಲ್ಲರಿಗೂ ಹೆದರುತ್ತಿದ್ದೆ. 10ನೇ ತರಗತಿಗಿಂತ ಹೆಚ್ಚು ನಾನು ಹೋಗಲಿಲ್ಲ. ಶಾಲೆಗೆ ಹೋಗದೇ ಕೆಲಸ ಅದೂ ಇದೂ ಮಾಡುತ್ತಾ ಇದ್ದೆ’ ಎಂದು ನಿಖಿಲ್ ಕಾಮತ್ ಈ ಪೋಡ್​ಕ್ಯಾಸ್ಟ್ ಚರ್ಚೆಯಲ್ಲಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿK Krithivasan: ಟಿಸಿಎಸ್ ಹೊಸ ಸಿಇಒ ಕೆ ಕೃತಿವಾಸನ್ ಸಂಬಳ, ಅನುಭವ ಇತ್ಯಾದಿ ವಿವರ

ಶಾಲೆಯಲ್ಲಿ ವಿಧೇಯತೆಯ ಪಾಠ

‘ನಾನು ಏನಾಗಬೇಕು, ಏನು ಕಲಿಯಬೇಕು, ಒಳ್ಳೆಯ ಕೆಲಸಕ್ಕೆ ಏನು ಬೇಕು ಎಂಬ ಐಡಿಯಾಗಳಿಗೆ ನಾನು ಬದ್ಧನಾಗಿರಬೇಕಾದುದನ್ನು ಶಾಲೆ ನನಗೆ ಕಲಿಸಿಕೊಡುತ್ತಿತ್ತು. ಆದರೆ, ಇವತ್ತು ಐಡಿಯಾ ಎಲ್ಲೆಡೆ ಬಹಳ ತ್ವರಿತವಾಗಿ ಪರಿವರ್ತನೆ ಕಾಣುತ್ತಿದೆ. ವಿಧೇಯನಾಗಿರುವುದರಿಂದ 10 ವರ್ಷದಲ್ಲಿ ಯಾರೂ ಯಶಸ್ಸು ಕಾಣಲು ಸಾಧ್ಯವಾಗದೇನೋ’ ಎಂದು ನಿಖಿಲ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ನಿಖಿಲ್ ಕಾಮತ್ ಶಿವಮೊಗ್ಗದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದವರು. 17ನೇ ವಯಸ್ಸಿಗೆ ಓದಿಗೆ ತಿಲಾಂಜಲಿ ಹೇಳಿ ವ್ಯವಹಾರಕ್ಕಿಳಿದವರು. ಇವತ್ತು ಭಾರತದ ಅಗ್ರಮಾನ್ಯ ಸ್ಟಾಕ್ ಬ್ರೋಕರೇಜ್ ಎನಿಸಿರುವ ಝೀರೋಧ ಕಂಪನಿಯನ್ನು ತಮ್ಮ ಸಹೋದರ ನಿತಿನ್ ಕಾಮತ್ ಜೊತೆ ಸೇರಿ ಕಟ್ಟಿದವರು ನಿಖಿಲ್ ಕಾಮತ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್