ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ

EdelGive Hurun India Philanthropy List 2023: ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿಯಲ್ಲಿ ಬಹಳಷ್ಟು ಕನ್ನಡಿಗರು ಮತ್ತು ಕರುನಾಡಿಗರು ಇದ್ದಾರೆ. ವಿಪ್ರೋದ ಅಜೀಮ್ ಪ್ರೇಮ್​ಜಿ, ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ನಿಖಿಲ್ ಕಾಮತ್, ಕಿರಣ್ ಮಜುಮ್ದಾರ್ ಶಾ, ನಿತಿನ್ ಕಾಮತ್ ಮೊದಲಾದವರು ಕರ್ನಾಟಕ ದಾನ ಶೂರರೆನಿಸಿದ್ದಾರೆ.

ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ
ನಿಖಿಲ್ ಕಾಮತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2023 | 12:30 PM

ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿ (EdelGive Hurun India Philanthropy List 2023) ಪ್ರಕಟವಾಗಿದ್ದು, ವರ್ಷದಿಂದ ವರ್ಷಕ್ಕೆ ದಾನಶೂರ ಭಾರತೀಯರ ಪಟ್ಟಿ ಬೆಳೆಯುತ್ತಾ ಹೋಗಿದೆ. 2022-23ರ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಕೋಟಿ ರೂ ದಾನ ಮಾಡಿದವರ ಸಂಖ್ಯೆ 14 ಮುಟ್ಟಿದೆ. ಹೆಚ್​ಸಿಎಲ್ ಟೆಕ್ನಾಲಜೀಸ್​ನ ಶಿವ್ ನಾದರ್ (Shiv Nadar) ಅವರು ಸತತ ಮೂರು ವರ್ಷಗಳಿಂದ ಭಾರತದ ಅತಿ ಮಹಾದಾನಿ (Most Generous Philanthropist) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಮಾಡಿದ ದಾನವನ್ನು ದಿನದ ಲೆಕ್ಕದಲ್ಲಿ ಮುಂದಿಟ್ಟರೆ ದಿನಕ್ಕೆ 5 ಕೋಟಿ ರೂಗೂ ಹೆಚ್ಚಾಗುತ್ತದೆ. ಒಂದು ವರ್ಷದಲ್ಲಿ ಶಿವ್ ನಾದರ್ ಅವರು 2,042 ಕೋಟಿ ರೂ ದಾನ ಮಾಡಿದ್ದಾರೆ. ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿ 2023 ಯಲ್ಲಿ ಈ ಮಾಹಿತಿ ಇದೆ.

ಕರ್ನಾಟಕದವರೂ ದಾನಕ್ಕೆ ಸೈ…

ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿಯಲ್ಲಿ ಬಹಳಷ್ಟು ಕನ್ನಡಿಗರು ಮತ್ತು ಕರುನಾಡಿಗರು ಇದ್ದಾರೆ. ವಿಪ್ರೋದ ಅಜೀಮ್ ಪ್ರೇಮ್​ಜಿ, ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ನಿಖಿಲ್ ಕಾಮತ್, ಕಿರಣ್ ಮಜುಮ್ದಾರ್ ಶಾ, ನಿತಿನ್ ಕಾಮತ್ ಮೊದಲಾದವರು ಕರ್ನಾಟಕ ದಾನ ಶೂರರೆನಿಸಿದ್ದಾರೆ.

ಅಜೀಮ್ ಪ್ರೇಮ್​ಜಿ ಮೊದಲಿಂದಲೂ ದಾನಗಳಿಗೆ ಎತ್ತಿದ ಕೈ. ಅವರು 2022-23ರ ಹಣಕಾಸು ವರ್ಷದಲ್ಲಿ ಒಟ್ಟು 1,774 ಕೋಟಿ ರೂ ದಾನ ಮಾಡಿದ್ದಾರೆ. ರೋಹಿಣಿ ನಿಲೇಕಣಿ ಅತಿಹೆಚ್ಚು ದಾನ ಮಾಡಿದ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಒಂದು ವರ್ಷದಲ್ಲಿ ಮಾಡಿದ ದಾನ 170 ಕೋಟಿ ರೂ. ನಂದನ್ ನಿಲೇಕಣಿ 189 ಕೋಟಿ ರೂ ದಾನ ಮಾಡಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಬೆಲೆ ಏರಿಕೆ; ವಿಶ್ವನಗರಿಗಳಲ್ಲಿ ಬೆಂಗಳೂರು 17ನೇ ಸ್ಥಾನದಲ್ಲಿ; ಟಾಪ್-5ನಲ್ಲಿ ಮುಂಬೈ

ಒಟ್ಟು 14 ವ್ಯಕ್ತಿಗಳು ಒಂದು ವರ್ಷದಲ್ಲಿ 100 ಕೋಟಿ ರೂಗೂ ಹೆಚ್ಚು ದಾನ ಮಾಡಿದ್ದಾರೆ. 50 ಕೋಟಿ ರೂಗೂ ಹೆಚ್ಚು ದಾನ ಮಾಡಿದ ವ್ಯಕ್ತಿಗಳ ಸಂಖ್ಯೆ 24 ಇದೆ. 20 ಕೋಟಿಗೂ ಹೆಚ್ಚು ದಾನ ಮಾಡಿದವರು 47 ಮಂದಿ. 5 ಕೋಟಿ ರೂಗೂ ಹೆಚ್ಚು ದಾನ ಮಾಡಿದವರ ಸಂಖ್ಯೆ 119 ಇದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ದಾನಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ.

ಪ್ರಮುಖ ದಾನಿಗಳು

  • ಶಿವ್ ನಾದರ್: 2,042 ಕೋಟಿ ರೂ
  • ಅಜೀಮ್ ಪ್ರೇಮ್​ಜಿ: 1,774 ಕೋಟಿ ರೂ
  • ಮುಕೇಶ್ ಅಂಬಾನಿ: 376 ಕೋಟಿ ರೂ
  • ಗೌತಮ್ ಅದಾನಿ ಮತ್ತು ಕುಟುಂಬ: 285 ಕೋಟಿ ರೂ
  • ನಂದನ್ ನಿಲೇಕಣಿ: 189 ಕೋಟಿ ರೂ
  • ರೋಹಿಣಿ ನಿಲೇಕಣಿ: 170 ಕೋಟಿ ರೂ
  • ನಿಖಿಲ್ ಕಾಮತ್: 110 ಕೋಟಿ ರೂ

ಇದನ್ನೂ ಓದಿ: ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವೀರ ತ್ರಿಮೂರ್ತಿಗಳನ್ನು ಹೆಸರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

ಕನ್ನಡಿಗರಾದ 38 ವರ್ಷದ ನಿಖಿಲ್ ಕಾಮತ್ ಅತ್ಯಂತ ಕಿರಿಯ ವಯಸ್ಸಿನ ಮಹಾದಾನಿ ಎನಿಸಿದ್ದಾರೆ. ಸುಮಾರು 30,000 ಕೋಟಿ ರೂ ಮೊತ್ತದ ಸಂಪತ್ತು ಹೊಂದಿರುವ ನಿಖಿಲ್ ಕಾಮತ್ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ತತ್ವ ಅಳವಡಿಸಿಕೊಂಡವರು. ದಾನಕ್ಕೆ ಉತ್ತೇಜಿಸಲೆಂದೇ ಅವರೊಂದು ಗುಂಪು ರಚಿಸಿದ್ದು, ಯುವ ಉದ್ಯಮಿಗಳನ್ನು ಈ ಗುಂಪಿಗೆ ಸೇರ್ಪಡೆಗೊಳಿಸಿದ್ದಾರೆ. ಅವರ ಆದಾಯದ ಶೇ. 25ರಷ್ಟು ಹಣವನ್ನು ದಾನ ಧರ್ಮ, ಸಮಾಜಸೇವೆಗಳಿಗೆ ಖರ್ಚು ಮಾಡುವಂತೆ ಪ್ರೇರೇಪಿಸುತ್ತಾರೆ. ಅವರ ಅಣ್ಣ ನಿತಿನ್ ಕಾಮತ್ ಕೂಡ ಹವಾಮಾನ ಸಂಬಂಧಿತ ಚಟುವಟಿಕೆಗಳಿಗೆ ಹಣ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ