ರಿಯಲ್ ಎಸ್ಟೇಟ್ ಬೆಲೆ ಏರಿಕೆ; ವಿಶ್ವನಗರಿಗಳಲ್ಲಿ ಬೆಂಗಳೂರು 17ನೇ ಸ್ಥಾನದಲ್ಲಿ; ಟಾಪ್-5ನಲ್ಲಿ ಮುಂಬೈ

Knight Frank Prime Global Index: 2023ರ ಕ್ಯಾಲೆಂಡರ್ ವರ್ಷದ ಮೂರನೇ ಕ್ವಾರ್ಟರ್​ನ ನೈಟ್ ಫ್ರ್ಯಾಂಕ್ ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್​ನಲ್ಲಿ ಮುಂಬೈ ನಾಲ್ಕನೇ ಸ್ಥಾನ ಪಡೆದಿರುವುದು ವಿಶೇಷ. ಮುಂಬೈನ ಮುಖ್ಯ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಕಳೆದ 12 ತಿಂಗಳ ಅವಧಿಯಲ್ಲಿ ಶೇ. 6.5ರಷ್ಟು ಹೆಚ್ಚಳ ಕಂಡಿದೆ. ನವದೆಹಲಿ ಶೇ. 4.1ರಷ್ಟು ಬೆಳವಣಿಗೆ ಕಂಡಿದೆ. 36ನೇ ಸ್ಥಾನದಲ್ಲಿದ್ದ ಅದು 10ನೇ ಸ್ಥಾನಕ್ಕೆ ಜಿಗಿದಿದೆ. ಬೆಂಗಳೂರು ಈ ಪಟ್ಟಿಯಲ್ಲಿ 22ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಏರಿದೆ.

ರಿಯಲ್ ಎಸ್ಟೇಟ್ ಬೆಲೆ ಏರಿಕೆ; ವಿಶ್ವನಗರಿಗಳಲ್ಲಿ ಬೆಂಗಳೂರು 17ನೇ ಸ್ಥಾನದಲ್ಲಿ; ಟಾಪ್-5ನಲ್ಲಿ ಮುಂಬೈ
ಬೆಂಗಳೂರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2023 | 10:43 AM

ನವದೆಹಲಿ, ನವೆಂಬರ್ 3: ಫಿಲಿಪ್ಪೈನ್ಸ್​ನ ಮನೀಲಾ ನಗರದಲ್ಲಿ (Manila City of Philippines) ಕಳೆದ ಒಂದು ವರ್ಷದಲ್ಲಿ ಲಕ್ಷುರಿ ರಿಯಲ್ ಎಸ್ಟೇಟ್ ದರ ಬರೋಬ್ಬರಿ ಶೇ. 21.2ರಷ್ಟು ಏರಿದೆ. ನೈಟ್ ಫ್ರ್ಯಾಂಕ್ ಪ್ರೈಮ್ ಗ್ಲೋಬಲ್ ಸಿಟೀಸ್ ಸೂಚ್ಯಂಕದಲ್ಲಿ (Knight Frank Prime Global Index Q2 2023) ಮನೀಲಾ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಒಂದೆರಡು ವರ್ಷದಿಂದ ದುಬೈ ಈ ಪಟ್ಟಿಯಲ್ಲಿ ಸದಾ ಮೊದಲ ಸ್ಥಾನ ಗಳಿಸುತ್ತಿತ್ತು. ಈ ಬಾರಿಯೂ ಅದು ಶೇ. 15.9ರಷ್ಟು ಬೆಳವಣಿಗೆ ಕಂಡಿತಾದರೂ ಮನೀಲಾ ನಗರದ ಪ್ರೈಮ್ ಲೊಕೇಶನ್​ಗಳಿಗೆ ಈ ವರ್ಷ ಭರ್ಜರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ದುಬೈ ಎರಡನೇ ಸ್ಥಾನಕ್ಕೆ ಇಳಿಯಬೇಕಾಯಿತು.

2023ರ ಕ್ಯಾಲೆಂಡರ್ ವರ್ಷದ ಮೂರನೇ ಕ್ವಾರ್ಟರ್​ನ ನೈಟ್ ಫ್ರ್ಯಾಂಕ್ ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್​ನಲ್ಲಿ ಮುಂಬೈ ನಾಲ್ಕನೇ ಸ್ಥಾನ ಪಡೆದಿರುವುದು ವಿಶೇಷ. ಮುಂಬೈನ ಮುಖ್ಯ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಕಳೆದ 12 ತಿಂಗಳ ಅವಧಿಯಲ್ಲಿ ಶೇ. 6.5ರಷ್ಟು ಹೆಚ್ಚಳ ಕಂಡಿದೆ. ಹಿಂದಿನ ಕ್ವಾರ್ಟರ್​ನಲ್ಲಿ ಮುಂಬೈ 22ನೇ ಸ್ಥಾನದಲ್ಲಿದ್ದದ್ದು ಈಗ 4ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: ಶಾಲೆಗಳಿಗೆ 2 ದಿನ ರಜೆ; ನಿರ್ಮಾಣ ಕೆಲಸಕ್ಕೆ ನಿಷೇಧ

ಬೆಂಗಳೂರು 17ನೇ ಸ್ಥಾನದಲ್ಲಿ…

ರಾಷ್ಟ್ರ ರಾಜಧಾನಿ ನವದೆಹಲಿ ಶೇ. 4.1ರಷ್ಟು ಬೆಳವಣಿಗೆ ಕಂಡಿದೆ. 36ನೇ ಸ್ಥಾನದಲ್ಲಿದ್ದ ಅದು 10ನೇ ಸ್ಥಾನಕ್ಕೆ ಜಿಗಿದಿದೆ. 26 ಸ್ಥಾನಗಳಷ್ಟು ಅದು ಮೇಲೇರಿದೆ. ಇನ್ನು, ಬೆಂಗಳೂರಿನ ಮುಖ್ಯ ಸ್ಥಳಗಳಲ್ಲಿ ಶೇ. 2.2ರಷ್ಟು ಮೌಲ್ಯ ಹೆಚ್ಚಳವಾಗಿದ್ದು, ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್​ನ ಪಟ್ಟಿಯಲ್ಲಿ 22ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಏರಿದೆ.

ಚೀನಾದ ಶಾಂಘೈ ನಗರ ಈ ವಿಚಾರದಲ್ಲಿ ಶೇ. 10.4ರಷ್ಟು ಹೆಚ್ಚಳ ಕಂಡು ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. ಡಬಲ್ ಡಿಜಿಟ್ ಪ್ರಗತಿ ಹೊಂದಿರುವುದು ಮನೀಲಾ, ದುಬೈ ಮತ್ತು ಶಾಂಘೈ ಮಾತ್ರ. ಕೀನ್ಯಾದ ರಾಜಧಾನಿ ನೈರೋಬಿ ಶೇ. 4.1ರಷ್ಟು ಮೌಲ್ಯ ಹೆಚ್ಚಳ ಕಂಡು ಮುಂಬೈಗಿಂತ ಒಂದು ಸ್ಥಾನ ಮೇಲಿದೆ.

ಸ್ಪೇನ್​ನ ಮ್ಯಾಡ್ರಿಡ್, ಸ್ವೀಡನ್​ನ ಸ್ಟಾಕ್​ಹಾಮ್, ಸೌತ್ ಕೊರಿಯಾದ ಸೋಲ್, ಆಸ್ಟ್ರೇಲಿಯಾದ ಸಿಡ್ನಿ, ಕೀನ್ಯಾದ ನೈರೋಬಿ ನಗರಗಳು ನೈಟ್ ಫ್ರ್ಯಾಂಕ್ ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್​ನಲ್ಲಿ ಕ್ರಮವಾಗಿ 5ರಿಂದ 9ನೇ ಸ್ಥಾನ ಪಡೆದಿವೆ.

ಇದನ್ನೂ ಓದಿ: ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವೀರ ತ್ರಿಮೂರ್ತಿಗಳನ್ನು ಹೆಸರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

ಬೆಲೆ ಇಳಿಕೆ ಕಂಡ ನಗರಗಳು…

ಆಸ್ಟ್ರೇಲಿಯಾದ ವೆಲಿಂಗ್ಟನ್, ಕೆನಡಾದ ವ್ಯಾನ್​ಕೂವರ್, ಜರ್ಮನಿಯ ಫ್ರಾಂಕ್​ಫುರ್ಟ್ ಮತ್ತು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರಗಳಲ್ಲಿ ಮುಖ್ಯ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಕುಸಿತ ಕಂಡಿದೆ. ಅವರು ಕ್ರಮವಾಗಿ 43ರಿಂದ 46ನೇ ಸ್ಥಾನ ಪಡೆದಿವೆ.

ನೈಟ್ ಫ್ರ್ಯಾಂಕ್ ಸಂಸ್ಥೆ ಜಗತ್ತಿನ ಎಲ್ಲಾ ನಗರಗಳನ್ನು ಈ ಅಧ್ಯಯನದಲ್ಲಿ ಆರಿಸಿಕೊಂಡಿಲ್ಲ. ಕೆಲವೇ ಆಯ್ದ ನಗರಗಳಿವೆ. ಭಾರತದಲ್ಲಿ ನವದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ. ಹೈದರಾಬಾದ್, ಪುಣೆ ಮೊದಲಾದ ನಗರಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಏರುಗತಿಯಲ್ಲಿರುವುದನ್ನು ಗಮನಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್