ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವೀರ ತ್ರಿಮೂರ್ತಿಗಳನ್ನು ಹೆಸರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

NR Narayana Murthy On Indian Economic Freedom: ಇನ್ಫೋಸಿಸ್​ನ ಮಾಜಿ ಸಿಎಫ್​ಒ ಮೋಹನ್ ದಾಸ್ ಪೈ ಅವರ ಪೋಡ್​ಕ್ಯಾಸ್ಟ್​ನಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ನಾರಾಯಣಮೂರ್ತಿ, 1991ರ ಆರ್ಥಿಕ ಉದಾರೀಕರಣ ನೀತಿಯನ್ನು ಪ್ರಶಂಸಿಸುತ್ತಾ, ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದ್ದ ವರ್ಷ ಅದು ಎಂದು ಹೇಳಿದ್ದಾರೆ. ಈ ಸ್ವಾತಂತ್ರ್ಯ ದಕ್ಕಲು ಮನಮೋಹನ್ ಸಿಂಗ್, ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಪಿ ಚಿದಂಬರಂ ಕಾರಣಕರ್ತರು ಎಂದೂ ಎನ್​ಆರ್​ಎನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವೀರ ತ್ರಿಮೂರ್ತಿಗಳನ್ನು ಹೆಸರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ
ಎನ್ ಆರ್ ನಾರಾಯಣಮೂರ್ತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2023 | 7:41 PM

ಭಾರತೀಯರ ಕೆಲಸದ ಉತ್ಪನ್ನಶೀಲತೆ ಹೆಚ್ಚಾಗಬೇಕು ಎಂದು ಇತ್ತೀಚೆಗೆ ಸಲಹೆ ನೀಡಿದ್ದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ಇದೀಗ ಭಾರತದ ಆರ್ಥಿಕ ಸ್ವಾತಂತ್ರ್ಯವೀರರನ್ನು ಹೆಸರಿಸಿದ್ದಾರೆ. ಇನ್ಫೋಸಿಸ್​ನ ಮಾಜಿ ಸಿಎಫ್​ಒ ಮೋಹನ್ ದಾಸ್ ಪೈ ಅವರ ಪೋಡ್​ಕ್ಯಾಸ್ಟ್​ನಲ್ಲಿ (podcast) ಪಾಲ್ಗೊಂಡು ಮಾತನಾಡುತ್ತಿದ್ದ ನಾರಾಯಣಮೂರ್ತಿ, 1991ರ ಆರ್ಥಿಕ ಉದಾರೀಕರಣ ನೀತಿಯನ್ನು ಪ್ರಶಂಸಿಸುತ್ತಾ, ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದ್ದ ವರ್ಷ ಅದು ಎಂದು ಹೇಳಿದ್ದಾರೆ. ಈ ಸ್ವಾತಂತ್ರ್ಯ ದಕ್ಕಲು ಮನಮೋಹನ್ ಸಿಂಗ್, ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಪಿ ಚಿದಂಬರಂ ಕಾರಣಕರ್ತರು ಎಂದೂ ಎನ್​ಆರ್​ಎನ್ ಅಭಿಪ್ರಾಯಪಟ್ಟಿದ್ದಾರೆ.

ಪಿವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1991ರಲ್ಲಿ ಅಧಿಕಾರದಲ್ಲಿ ಇದ್ದದ್ದು. ಆಗ ಜಾಗತೀಕರಣಕ್ಕೆ ತೆರೆದುಕೊಳ್ಳಲು ಭಾರತದ ಆರ್ಥಿಕ ವ್ಯವಸ್ಥೆಗೆ ಉದಾರೀಕರಣದ ನೀತಿ ತರಲಾಯಿತು. ಆಗ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಪಿ ಚಿದಂಬರಂ ವಾಣಿಜ್ಯ ಸಚಿವರಾಗಿದ್ದರು. ಮತ್ತು ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಆಗ ಕಾಮರ್ಸ್ ಮಿನಿಸ್ಟ್ರಿಯಲ್ಲಿ ಕಾರ್ಯದರ್ಶಿಯಾಗಿದ್ದರು.

ಇದನ್ನೂ ಓದಿ: ಭಾರತೀಯರು ಎಂಥ ಅಪಾಯದಲ್ಲಿದ್ದಾರೆ ಗೊತ್ತಾ? ಬರ್ಬಾದ್ ಆಗಲು ಈ ಒಂದೇ ದುರ್ಘಟನೆ ಸಾಕು ಎನ್ನುತ್ತಾರೆ ನಿತಿನ್ ಕಾಮತ್; ಏನಿದು ಎಚ್ಚರಿಕೆಯ ಕರೆಗಂಟೆ?

‘ನಮಗೆ 1947ರಲ್ಲಿ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದರೆ ಆರ್ಥಿಕ ಸ್ವಾತಂತ್ರ್ಯ ದಕ್ಕಿದ್ದು ಮಾತ್ರ 1991ರಲ್ಲಿ. ಅದಕ್ಕೆ ನಾವು ನರಸಿಂಹರಾವ್ ಅವರಿಗೆ ಋಣಿಯಾಗಿರಬೇಕು. ಈ ವಿಚಾರದಲ್ಲಿ ಬಹಳ ಬಹಳ ಸ್ಪಷ್ಟವಾಗಿರಬೇಕು. ಡಾ. ಮನಮೋಹನ್ ಸಿಂಗ್ ಅವರು ರಾವ್​ಗೆ ಹಣಕಾಸು ಸಚಿವರಾಗಿದ್ದರು. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಗಳು ಪೂರ್ಣವಾಗಿ ಬೆಂಬಲಿಸದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಡಾ. ಮನಮೋಹನ್ ಸಿಂಗ್, ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಪಿ ಚಿದಂಬರಂ, ಈ ಮೂವರು ವ್ಯಕ್ತಿಗಳು ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯ ದಕ್ಕಿಸಿದರು. ಅವರಿಗೆ ನಾವು ಋಣಿಯಾಗಿರಬೇಕು’ ಎಂದು ಎನ್ ಆರ್ ನಾರಾಯಣಮೂರ್ತಿ ಆ ಪೋಡ್​ಕ್ಯಾಸ್ಟ್​ನಲ್ಲಿ ನುಡಿದಿದ್ದಾರೆ.

1991ರಲ್ಲಿ ಆದ ಆರ್ಥಿಕ ಸುಧಾರಣೆಗಳೇನು?

ಮೋಹನ್ ದಾಸ್ ಪೈ ಜೊತೆಗಿನ ‘ದಿ ರೆಕಾರ್ಡ್’ ಪೋಡ್​ಕ್ಯಾಸ್ಟ್​ನಲ್ಲಿ ನಾರಾಯಣಮೂರ್ತಿ ಅವರು 1991ರ ಉದಾರ ಆರ್ಥಿಕ ನೀತಿಯ ಕೆಲ ಪ್ರಮುಖ ಸುಧಾರಣಾ ಕ್ರಮಗಳನ್ನು ವಿವರಿಸಿದ್ದಾರೆ.

  1. ಹೈ ಟೆಕ್ ಇತ್ಯಾದಿ ಕೆಲ ಕ್ಷೇತ್ರಗಳಲ್ಲಿ ಲೈಸೆನ್ಸಿಂಗ್ ಕ್ರಮವನ್ನು ತೆಗೆದುಹಾಕಲಾಯಿತು.
  2. ದೆಹಲಿಯಲ್ಲಿದ್ದ ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಷ್ಯೂಸ್​ನ ಕಚೇರಿಯನ್ನೇ ಮುಚ್ಚಲಾಯಿತು.
  3. ಕರೆಂಟ್ ಅಕೌಂಟ್ ಕನ್ವರ್ಟಬಿಲಿಟಿಯನ್ನು ಜಾರಿಗೆ ತರಲಾಯಿತು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ

1991ರಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರ ಇವೂ ಸೇರಿದಂತೆ ಜಾರಿಗೆ ತಂದ ಇನ್ನೂ ಕೆಲ ಸುಧಾರಣಾ ಕ್ರಮಗಳನ್ನು ಇನ್ಫೋಸಿಸ್ ಸಹ-ಸಂಸ್ಥಾಪಕರು ಸ್ಮರಿಸಿದ್ದಾರೆ. ಈ ಉದಾರನೀತಿಯಿಂದ ಬಹಳ ದೊಡ್ಡ ಲಾಭ ಪಡೆದ ಕ್ಷೇತ್ರಗಳಲ್ಲಿ ಐಟಿಯೂ ಒಂದು. ಎರಡು ಮೂರು ದಶಕಗಳ ಕಾಲ ಭಾರತದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಶಕ್ತಿಯಾಗಿದ್ದು ಐಟಿ ಕ್ಷೇತ್ರವೇ. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮೊದಲಾದ ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಂದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್