AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಐಫೋನ್ ರಫ್ತು: ಭಾರತ ಹೊಸ ಇತಿಹಾಸ; ಇದೇ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ

India exports more iPhones to US than China: 2025ರ ಏಪ್ರಿಲ್ ತಿಂಗಳಲ್ಲಿ ಅಮೆರಿಕಕ್ಕೆ ಭಾರತದಿಂದ ರಫ್ತಾದ ಐಫೋನ್ ಸಂಖ್ಯೆ 33 ಲಕ್ಷ. ಆ ತಿಂಗಳಲ್ಲಿ ಚೀನಾದಿಂದ ಹೋಗಿದ್ದ 9 ಲಕ್ಷ ಐಫೋನ್ ಮಾತ್ರ. ಆ್ಯಪಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚೀನಾಗಿಂತ ಹೆಚ್ಚು ಮೇಡ್ ಇನ್ ಇಂಡಿಯಾ ಐಫೋನ್​​ಗಳು ಅಮೆರಿಕಕ್ಕೆ ಸರಬರಾಜಾಗಿವೆ. ಚೀನಾ ಮತ್ತು ಅಮೆರಿಕದ ಒತ್ತಡದ ಮಧ್ಯೆಯೂ ಆ್ಯಪಲ್ ಕಂಪನಿ ಭಾರತಕ್ಕೆ ಆದ್ಯತೆ ಕೊಡುವುದು ಮುಂದುವರಿದಿದೆ.

ಅಮೆರಿಕಕ್ಕೆ ಐಫೋನ್ ರಫ್ತು: ಭಾರತ ಹೊಸ ಇತಿಹಾಸ; ಇದೇ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ
ಐಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2025 | 4:25 PM

Share

ನವದೆಹಲಿ, ಮೇ 29: ಮೇಕ್ ಇನ್ ಇಂಡಿಯಾ ಅಭಿಯಾನದ ಯಶಸ್ಸೋ, ಆ್ಯಪಲ್ ಕಂಪನಿಯ ವ್ಯಾಪಾರ ಚಾಣಾಕ್ಷ್ಯತೆಯೋ, ಸ್ವಾವಲಂಬಿ ಭಾರತದ ದೃಢ ಹೆಜ್ಜೆಯೋ ಭಾರತವು ಐಫೋನ್ ರಫ್ತಿನಲ್ಲಿ ಹೊಸ ದಾಖಲೆ ಸ್ಥಾಪಿಸಿದೆ. ಅಮೆರಿಕಕ್ಕೆ ಐಫೋನ್ ರಫ್ತು ಮಾಡುವುದರಲ್ಲಿ ಚೀನಾವನ್ನು (China) ಭಾರತ ಹಿಂದಿಕ್ಕಿದೆ. ಇಂಥದ್ದೊಂದು ಬೆಳವಣಿಗೆ ಇತಿಹಾಸದಲ್ಲೇ ಇದೇ ಮೊದಲು. 2025ರ ಏಪ್ರಿಲ್ ತಿಂಗಳಲ್ಲಿ ಭಾರತವು ಬರೋಬ್ಬರಿ 33 ಲಕ್ಷ ಐಫೋನ್​​​ಗಳನ್ನು ಅಮೆರಿಕಕ್ಕೆ ರಫ್ತು ಮಾಡಿತ್ತು. ಅದೇ ತಿಂಗಳಲ್ಲಿ ಅಮೆರಿಕಕ್ಕೆ ಹೋದ ಮೇಡ್ ಇನ್ ಚೀನಾ ಐಫೋನ್​​ಗಳ ಸಂಖ್ಯೆ 9 ಲಕ್ಷ ಮಾತ್ರ. ಮಾರ್ಕೆಟ್ ರಿಸರ್ಚ್ ಸಂಸ್ಥೆಯಾದ ಕ್ಯಾನಾಲಿಸ್ (Canalys) ಬಿಡುಗಡೆ ಮಾಡಿದ ವರದಿಯಲ್ಲಿ ಈ ದತ್ತಾಂಶ ಕಂಡುಬಂದಿದೆ.

ಮೇಡ್ ಇನ್ ಇಂಡಿಯಾ ಐಫೋನ್​​ಗಳು ಚೀನಾ ಮೀರಿಸಲು ಏನು ಕಾರಣ?

ಏಪ್ರಿಲ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳಿಗೆ ಟ್ಯಾರಿಫ್ ಹೇರಿಕೆ ದರವನ್ನು ಪ್ರಕಟಿಸಿದರು. ಆದರೆ, ನಂತರದ ದಿನಗಳಲ್ಲಿ ಚೀನಾ ಬಿಟ್ಟು ಉಳಿದ ದೇಶಗಳ ಸರಕುಗಳಿಗೆ ಟ್ಯಾರಿಫ್ ಅನ್ನು ಶೇ. 10ರ ದರಕ್ಕೆ ಇಳಿಸಲಾಯಿತು. ಆ್ಯಪಲ್​ನ ಐಫೋನ್​​ಗಳಿಗೆ ಟ್ಯಾರಿಫ್​​ನಿಂದ ವಿನಾಯಿತಿಯನ್ನೂ ಕೊಡಲಾಯಿತು. ಅಷ್ಟರಲ್ಲಿ ಆ್ಯಪಲ್ ಕಂಪನಿಯು ಮೇಡ್ ಇನ್ ಇಂಡಿಯಾ ಐಫೋನ್​​ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಅಮೆರಿಕಕ್ಕೆ ಕಳುಹಿಸಿತ್ತು. ಮಾರ್ಚ್ ತಿಂಗಳಲ್ಲಿ ಭಾರತದಿಂದ ಬರೋಬ್ಬರಿ 44 ಲಕ್ಷ ಐಫೋನ್​​ಗಳು ಅಮೆರಿಕಕ್ಕೆ ಹೋಗಿದ್ದುವು.

ಮಾರ್ಚ್​​ನಲ್ಲೇ ಸಾಕಷ್ಟು ದಾಸ್ತಾನು ಇದ್ದರಿಂದ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಐಫೋನ್​​ಗಳನ್ನು ಆಮದು ಮಾಡಿಕೊಳ್ಳುವ ಅಗತ್ಯ ಇರಲಿಲ್ಲ. ಹೀಗಾಗಿ, ಭಾರತದಿಂದ ಮಾರ್ಚ್​​ನಲ್ಲಿ 44 ಲಕ್ಷದಷ್ಟು ರಫ್ತಾಗಿದ್ದ ಐಫೋನ್​​ಗಳು ಏಪ್ರಿಲ್​​ನಲ್ಲಿ 33 ಲಕ್ಷ ಸಂಖ್ಯೆ ಮಾತ್ರವೇ ಅಮೆರಿಕಕ್ಕೆ ಹೋಗಿದ್ದು. ಆದರೂ ಕೂಡ ಚೀನಾಗಿಂತ ಮೇಡ್ ಇನ್ ಇಂಡಿಯಾ ಐಫೋನ್​​ಗಳೇ ಹೆಚ್ಚು ಇದ್ದದ್ದು ಇದೇ ಮೊದಲ ಸಲ.

ಇದನ್ನೂ ಓದಿ: ಪ್ಲಾಸ್ಟಿಕ್, ರಬ್ಬರ್ ವಸ್ತು ಖರೀದಿಸುವಾಗ ಮೇಡ್ ಇನ್ ಚೀನಾ ಗಮನಿಸಿ… ಡ್ರ್ಯಾಗನ್ ಮಣಿಸಲು ನಿಮ್ಮ ಕೈಲಿದೆ ಅಸ್ತ್ರ

ಜನವರಿಯಿಂದ ಏಪ್ರಿಲ್​ವರೆಗಿನ ನಾಲ್ಕು ತಿಂಗಳನ್ನು ಗಣನೆಗೆ ತೆಗೆದುಕೊಂಡರೆ ಚೀನಾ ಮುಂದಿದೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 1.32 ಕೋಟಿ ಮೇಡ್ ಇನ್ ಚೀನಾ ಐಫೋನ್​​ಗಳು ಅಮೆರಿಕಕ್ಕೆ ಸಾಗಣೆ ಆಗಿವೆ. ಇದೇ ಅವಧಿಯಲ್ಲಿ ಭಾರತದಿಂದ ಹೋದ ಐಫೋನ್​​ಗಳು 1.15 ಕೋಟಿ. ಆದರೆ, ಮಾರ್ಚ್ ತಿಂಗಳಿಂದ ಮೇಡ್ ಇನ್ ಇಂಡಿಯಾ ಐಫೋನ್​​ಗಳು ಅಮೆರಿಕಕ್ಕೆ ಹೋಗುತ್ತಿರುವ ಪ್ರಯಾಣ ಗಣನೀಯವಾಗಿ ಹೆಚ್ಚಾಗಿದೆ.

ಅಮೆರಿಕ, ಚೀನಾ ಒತ್ತಡ ನಡುವೆಯೂ ಭಾರತಕ್ಕೆ ಪ್ರಾಶಸ್ತ್ಯ ಕೊಡುತ್ತಿರುವ ಆ್ಯಪಲ್

ಆ್ಯಪಲ್ ಕಂಪನಿ ನೇರವಾಗಿ ತನ್ನ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ಫಾಕ್ಸ್​​ಕಾನ್, ಪೆಗಾಟ್ರಾನ್, ಟಾಟಾ ಎಲೆಕ್ಟ್ರಾನಿಕ್ಸ್ ಮೊದಲಾದ ಕಂಪನಿಗಳಿಗೆ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತದೆ. ವಿವಿಧ ಬಿಡಿಭಾಗಗಳ ತಯಾರಿಕೆಯನ್ನು ಬೇರೆ ಬೇರೆ ಕಂಪನಿಗಳು ಮಾಡುತ್ತವೆ. ಈ ಎಲ್ಲಾ ತಯಾರಿಕೆಯ ಇಕೋಸಿಸ್ಟಂ ಚೀನಾದಲ್ಲಿ ಇದೆ. ಆದರೂ ಕೂಡ ಕೋವಿಡ್ ಬಳಿಕ ಉಂಟಾದ ತೊಂದರೆ ಗಮನದಲ್ಲಿರಿಸಿಕೊಂಡು ಆ್ಯಪಲ್ ಕಂಪನಿ ತನ್ನ ಸಪ್ಲೈ ಚೈನ್ ಅನ್ನು ಚೀನಾದಿಂದ ಹೊರಗೂ ವಿಸ್ತರಿಸಲು ನಿರ್ಧರಿಸಿತು. ಇದರ ಪರಿಣಾಮವಾಗಿ ಭಾರತದಲ್ಲಿ ಐಫೋನ್ ಫ್ಯಾಕ್ಟರಿಗಳು ಸ್ಥಾಪನೆಯಾಗಿವೆ. ಅದಕ್ಕೆ ಬೇಕಾದ ಬಿಡಿಭಾಗಗಳ ತಯಾರಿಕೆಯ ಇಕೋಸಿಸ್ಟಂ ಕೂಡ ಒಂದೊಂದಾಗಿ ಭಾರತದಲ್ಲಿ ನೆಲೆಗೊಳ್ಳುತ್ತಿವೆ.

ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?

ಆ್ಯಪಲ್​​ನ ಸಪ್ಲೈ ಚೈನ್ ಭಾರತಕ್ಕೆ ಹರಡುತ್ತಿರುವುದು ಚೀನಾಗೆ ಅಸಮಾಧಾನ ತಂದಿದೆ. ಪರೋಕ್ಷವಾಗಿ ಅದು ಒತ್ತಡ ಹಾಕುತ್ತಿದೆ. ಇನ್ನು, ಅಮೆರಿಕ ಕೂಡ ಐಫೋನ್ ತಯಾರಿಕೆಯು ತನ್ನ ದೇಶದಲ್ಲೇ ಆಗಬೇಕು ಎಂದು ಹೊಸ ವರಸೆ ತೆಗೆಯುತ್ತಿದೆ. ಈ ಒತ್ತಡಗಳ ನಡುವೆಯೂ ಆ್ಯಪಲ್ ಕಂಪನಿ ಭಾರತದ ಮೇಲಿನ ತಮ್ಮ ಒಲವನ್ನು ಮುಂದುವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ