ಎಂಸಿಎಲ್ಆರ್ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್; ಏನಿದರ ಪರಿಣಾಮ?
ICICI and Bank of India Hikes MCLR: ಕನಿಷ್ಠ ಸಾಲದ ದರವಾದ ಎಂಸಿಎಲ್ಆರ್ ಅನ್ನು ಎರಡು ಬ್ಯಾಂಕುಗಳು ಏರಿಸಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ತಮ್ಮ ವಿವಿಧ ಅವಧಿಯ ಎಂಸಿಎಲ್ಆರ್ ದರವನ್ನು ಹೆಚ್ಚಿಸಿದೆ. ಐಸಿಐಸಿಐನ ಒಂದು ವರ್ಷದ ಎಂಸಿಎಲ್ಆರ್ ಶೇ. 9ಕ್ಕೆ ಏರಿದೆ. ಬ್ಯಾಂಕ್ ಆಫ್ ಇಂಡಿಯಾದ ಒಂದು ವರ್ಷದ ಎಂಸಿಎಲ್ಆರ್ ಶೇ. 8.75ಕ್ಕೆ ಹೆಚ್ಚಾಗಿದೆ.
ನವದೆಹಲಿ, ನವೆಂಬರ್ 2: ಕನಿಷ್ಠ ಸಾಲದ ದರವಾದ ಎಂಸಿಎಲ್ಆರ್ (MCLR) ಅನ್ನು ಎರಡು ಬ್ಯಾಂಕುಗಳು ಏರಿಸಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ತಮ್ಮ ವಿವಿಧ ಅವಧಿಯ ಎಂಸಿಎಲ್ಆರ್ ದರವನ್ನು ಹೆಚ್ಚಿಸಿದೆ. ಐಸಿಐಸಿಐನ ಒಂದು ವರ್ಷದ ಎಂಸಿಎಲ್ಆರ್ ಶೇ. 9ಕ್ಕೆ ಏರಿದೆ. ಬ್ಯಾಂಕ್ ಆಫ್ ಇಂಡಿಯಾದ ಒಂದು ವರ್ಷದ ಎಂಸಿಎಲ್ಆರ್ ಶೇ. 8.75ಕ್ಕೆ ಹೆಚ್ಚಾಗಿದೆ.
ಏನಿದು ಎಂಸಿಎಲ್ಆರ್?
2016ರಲ್ಲಿ ಆರ್ಬಿಐ ಎಂಸಿಎಲ್ಆರ್ ಅನ್ನು ಜಾರಿಗೆ ತಂದಿತು. ಇದು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್. ಬೇಸ್ ರೇಟ್ನಂತೆ ಇದೂ ಕೂಡ ಒಂದು ಬ್ಯಾಂಕ್ ತನ್ನ ಯಾವುದೇ ಗ್ರಾಹಕರಿಗೆ ಆಫರ್ ಮಾಡಬಹುದಾದ ಕನಿಷ್ಠ ಬಡ್ಡಿದರ. ರೆಪೋ ದರಕ್ಕೆ ಅನುಗುಣವಾಗಿ ಇದರ ದರವೂ ಬದಲಾಗುತ್ತದೆ.
ಐಸಿಐಸಿಐ ಬ್ಯಾಂಕ್ ಎಂಸಿಎಲ್ಆರ್ ಎಷ್ಟು?
ಐಸಿಐಸಿಐ ಬ್ಯಾಂಕ್ನ 15 ದಿನದ ಮತ್ತು ಒಂದು ತಿಂಗಳ ಎಂಸಿಎಲ್ಆರ್ ಶೇ. 8.50ಕ್ಕೆ ಏರಿಸಲಾಗಿದೆ. ಮೂರು ತಿಂಗಳದ್ದು ಶೇ. 8.55, ಆರು ತಿಂಗಳದ್ದು ಶೇ. 8.90 ಮತ್ತು ಒಂದು ವರ್ಷದ ಎಂಸಿಎಲ್ಆರ್ ಶೇ. 9ರಷ್ಟಿದೆ.
ಇದನ್ನೂ ಓದಿ: ಹೊಸ ದಾಖಲೆ; ಅಕ್ಟೋಬರ್ ತಿಂಗಳಲ್ಲಿ ಯುಪಿಐ ಮೂಲಕ ಆದ ವಹಿವಾಟು ಮೌಲ್ಯ 17.16 ಲಕ್ಷಕೋಟಿ ರೂ
ಬ್ಯಾಂಕ್ ಆಫ್ ಇಂಡಿಯಾದ ಎಂಸಿಎಲ್ಆರ್ ಎಷ್ಟು?
ಬ್ಯಾಂಕ್ ಆಫ್ ಇಂಡಿಯಾದ 15 ದಿನದ ಎಂಸಿಎಲ್ಆರ್ ಶೇ. 7.95ರಷ್ಟಿದೆ. ಒಂದು ತಿಂಗಳದ್ದು ಶೇ. 8.20, ಮೂರು ತಿಂಗಳದ್ದು ಶೇ. 8.35, ಆರು ತಿಂಗಳದ್ದು ಶೇ. 8.55ರಷ್ಟು ಎಂಸಿಎಲ್ಆರ್ ಇದೆ.
ಹಾಗೆಯೇ, ಬಿಒಐನ ಒಂದು ವರ್ಷದ ಎಂಸಿಎಲ್ಆರ್ ಶೇ. 8.75ರಷ್ಟಿದ್ದರೆ, ಮೂರು ವರ್ಷದ ಎಂಸಿಎಲ್ಆರ್ ಶೇ. 8.95ಕ್ಕೆ ಏರಿಸಲಾಗಿದೆ.
ಇದನ್ನೂ ಓದಿ: US Interest Rates: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; ಭಾರತೀಯ ಮಾರುಕಟ್ಟೆ ಮೇಲೇನು ಪರಿಣಾಮ?
ಈಗ ಯಾಕೆ ಎಂಸಿಎಲ್ಆರ್ ಹೆಚ್ಚಿಸಿದ್ದು?
ಕಳೆದ ತಿಂಗಳು ನಡೆದ ಎಂಪಿಸಿ ಸಭೆ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇನ್ನಷ್ಟು ಸಾಲ ಮತ್ತು ಠೇವಣಿ ದರಗಳನ್ನು ಹೆಚ್ಚಿಸುವ ಅವಕಾಶ ಇದೆ ಎಂದು ಹೇಳಿದ್ದರು. ಅದಾದ ಬಳಿಕ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಹೆಚ್ಚಿಸಲು ಮುಂದಾಗಬಹುದು ಎಂಬ ಸುಳಿವು ಇತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ