AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂದೂರ್ ಟ್ರೇಡ್​​ಮಾರ್ಕ್​​ಗೆ ನಾಲ್ವರ ಅರ್ಜಿ; ರಿಲಾಯನ್ಸ್ ಹಿಜ್ಜೆ ಹಿಂದಕ್ಕೆ; ಸೇನಾ ಕಾರ್ಯಾಚರಣೆ ಹೆಸರು ಬಳಸಬಹುದಾ?

Trademark controversy of Operation Sindoor: ಪಾಕಿಸ್ತಾನದ ವಿವಿಧ ಜಾಗಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಹಳ ಜನಪ್ರಿಯವಾದ ಪದವಾಗಿ ಹೋಗಿದೆ. ನಿನ್ನೆ ಬುಧವಾರ ಆ ಹೆಸರಿನ ಟ್ರೇಡ್​​ಮಾರ್ಕ್​​​ಗೆ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ರಿಲಾಯನ್ಸ್​​ದೂ ಒಂದು. ಈಗ ರಿಲಾಯನ್ಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಅರ್ಜಿ ತತ್​​ಕ್ಷಣವೇ ಹಿಂಪಡೆದಿರುವುದಾಗಿ ಹೇಳಿದೆ.

ಆಪರೇಷನ್ ಸಿಂದೂರ್ ಟ್ರೇಡ್​​ಮಾರ್ಕ್​​ಗೆ ನಾಲ್ವರ ಅರ್ಜಿ; ರಿಲಾಯನ್ಸ್ ಹಿಜ್ಜೆ ಹಿಂದಕ್ಕೆ; ಸೇನಾ ಕಾರ್ಯಾಚರಣೆ ಹೆಸರು ಬಳಸಬಹುದಾ?
ಆಪರೇಷನ್ ಸಿಂದೂರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2025 | 5:21 PM

ನವದೆಹಲಿ, ಮೇ 8: ಆಪರೇಷನ್ ಸಿಂದೂರ್ (Operation Sindoor) ಈಗ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಟ್ರೆಂಡಿಂಗ್ ಆಗುತ್ತಿದೆ. ಭಾರತವು ಪಾಕಿಸ್ತಾನದ 9 ಸ್ಥಳಗಳಲ್ಲಿನ ಉಗ್ರ ಶಿಬಿರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡಿದ ಕಾರ್ಯಾಚರಣೆಗೆ ಆಪರೇಶನ್ ಸಿಂದೂರ ಎಂದು ಹೆಸರಿಟ್ಟಿದೆ. ಈ ಹೆಸರು ಬಹಳ ಜನಪ್ರಿಯವಾಗುತ್ತಿದ್ದಂತೆಯೇ ಆ ಹೆಸರನ್ನು ಟ್ರೇಡ್​​ಮಾರ್​ಕ್ (Trademark) ಆಗಿ ನೊಂದಾಯಿಸಲು ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​​​ನ ಜಿಯೋ ಸ್ಟುಡಿಯೋಸ್​​ನಿಂದ ಸಲ್ಲಿಕೆಯಾದ ಒಂದು ಅರ್ಜಿಯೂ ಇದೆ. ಬಹಳ ಗಂಭೀರವಾದ ಆಪರೇಷನ್ ಸಿಂದೂರ್​ನ ಹೆಸರನ್ನು ಹೀಗೆ ಟ್ರೇಡ್ ಮಾರ್ಕ್ ಆಗಿ ಉಪಯೋಗಿಸಲು ಯತ್ನಿಸುತ್ತಿರುವ ವಿಚಾರವು ವಿವಾದಕ್ಕೆ ಎಡೆ ಮಾಡಿಕೊಡಲು ಶುರುವಾಗಿತ್ತು. ಅಷ್ಟರಲ್ಲಿ ಎಚ್ಚೆತ್ತ ರಿಲಾಯನ್ಸ್ ಇಂಡಸ್ಟ್ರೀಸ್, ತನ್ನ ಅರ್ಜಿಯನ್ನು ಹಿಂಪಡೆದುಕೊಂಡಿರುವುದಾಗಿ ಘೋಷಿಸಿದೆ.

ಈ ಬಗ್ಗೆ ರಿಲಾಯನ್ಸ್ ಇಂಡಸ್ಟ್ರೀಸ್ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಆಪರೇಷನ್ ಸಿಂದೂರ್ ಹೆಸರನ್ನು ಟ್ರೇಡ್​​ಮಾರ್ಕ್​ ಆಗಿ ನೊಂದಾಯಿಸಲು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿರುವುದಾಗಿ ತಿಳಿಸಿದೆ. ಕಂಪನಿಯ ಕಿರಿಯ ಉದ್ಯೋಗಿಯೊಬ್ಬರು ಯಾರೊಂದಿಗೂ ಚರ್ಚೆ ಮಾಡದೇ ಟ್ರೇಡ್​​​ಮಾರ್ಕ್​​ಗೆ ಅರ್ಜಿ ಹಾಕಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಅರ್ಜಿ ಹಿಂಪಡೆಯಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ರಿಲಾಯನ್ಸ್ ಇಂಡಸ್ಟ್ರೀಸ್ ಹಾಗೂ ಸಂಬಂಧಿತ ಸಂಸ್ಥೆಗಳು ಆಪರೇಷನ್ ಸಿಂದೂರ್ ಬಗ್ಗೆ ಹೆಮ್ಮೆ ಹೊಂದಿವೆ. ನಮ್ಮ ದಿಟ್ಟ ಸೇನಾ ಪಡೆಗಳ ಹೆಮ್ಮೆಯ ಆಪರೇಷನ್ ಅದು. ದುಷ್ಟ ಭಯೋತ್ಪಾದನೆ ವಿರುದ್ಧ ಖಡಕ್ ಹೋರಾಟದ ಸಂಕೇತವಾಗಿದೆ’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಹೇಳಿದೆ.

ಇದನ್ನೂ ಓದಿ: ಎಲ್​​ಒಸಿ, ಎಲ್​​ಎಸಿ, ಅಂತಾರಾಷ್ಟ್ರೀಯ ಗಡಿ ಮಧ್ಯೆ ವ್ಯತ್ಯಾಸವೇನು? ಇಲ್ಲಿದೆ ಡೀಟೇಲ್ಸ್

ಆಪರೇಷನ್ ಸಿಂದೂರ್ ಹೆಸರಿನ ಟ್ರೇಡ್​​ಮಾರ್ಕ್​​ಗೆ ಅರ್ಜಿ ಸಲ್ಲಿಸಿದ ನಾಲ್ವರು ಯಾರು?

2025ರ ಮೇ 7, ಬುಧವಾರ ಬೆಳಗ್ಗೆ 10:42ರಿಂದ ಸಂಜೆ 6:27ರವರೆಗೆ ಆಪರೇಷನ್ ಸಿಂದೂರ್ ಹೆಸರಿಗೆ ನಾಲ್ಕು ಟ್ರೇಡ್​​ಮಾರ್ಕ್ ಅಪ್ಲಿಕೇಶನ್ಸ್ ಸಲ್ಲಿಕೆಯಾಗಿದ್ದುವು. ರಿಲಾಯನ್ಸ್ ಅಲ್ಲದೇ, ಮುಂಬೈನ ನಿವಾಸಿ ಮುಕೇಶ್ ಚೇತರಾಮ್ ಅಗ್ರವಾಲ್, ನಿವೃತ್ತ ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೇಗ್ ಮತ್ತು ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಅವರು ಅರ್ಜಿ ಸಲ್ಲಿಸಿದವರು.

ಟ್ರೇಡ್​​ಮಾರ್ಕ್ ಯಾವುದಕ್ಕೆ ನೊಂದಾಯಿಸಲಾಗುತ್ತದೆ?

ಟ್ರೇಡ್​​ಮಾರ್ಕ್ ಎಂಬುದು ಒಂದು ಸಂಸ್ಥೆ ಅಥವಾ ಬ್ರ್ಯಾಂಡ್​​​ಗೆ ಇಡಲಾಗುವ ಹೆಸರು. ಟ್ರೇಡ್​​ಮಾರ್ಕ್ ಸಿಕ್ಕರೆ ಆ ಹೆಸರನ್ನು ಬೇರೆ ಯಾವ ಸಂಸ್ಥೆಗಳಿಗೆ ಇಡಲು ಆಗುವುದಿಲ್ಲ. ಆಪರೇಷನ್ ಸಿಂದೂರ್ ಹೆಸರಿಗೆ ಟ್ರೇಡ್​​ಮಾರ್ಕ್ ಸಿಕ್ಕರೆ, ಅದನ್ನು ಪಡೆದವರು ಆ ಹೆಸರಿನಲ್ಲಿ ಕಂಪನಿ ಆರಂಭಿಸಬಹುದು, ಚಾರಿಟಿ ನಡೆಸಬಹುದು.

ಭಾರತೀಯ ಸೇನೆ ತನ್ನ ಕಾರ್ಯಾಚರಣೆಗಳ ಹೆಸರಿಗೆ ಕಾಪಿರೇಟ್ ಪಡೆಯುವುದಿಲ್ಲ. ಇವುಗಳನ್ನು ಯಾರು ಬೇಕಾದರೂ ಮುಕ್ತವಾಗಿ ಬಳಸಬಹುದು. ಆದರೆ, ಭಾರತದಲ್ಲಿ ಇಂಥ ಕಾರ್ಯಾಚರಣೆಯ ಹೆಸರನ್ನು ಟ್ರೇಡ್​​ಮಾರ್ಕ್ ಆಗಿ ಬಳಸಿದ್ದು, ಅಥವಾ ಕಾಪಿರೈಟ್ ಮಾಡಿಕೊಂಡಿದ್ದು ಉದಾಹರಣೆ ಇಲ್ಲ.

ಇದನ್ನೂ ಓದಿ: ದೇಶದೊಳಗೆ ನುಗ್ಗಲು ಬಂದ ಪಾಕಿಸ್ತಾನದ ಮೇಲೆ ಭಾರತ ದಾಳಿ; ಲಾಹೋರ್​ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ಅಮೆರಿಕದ ಶಾಕ್ ಅಂಡ್ ಆವ್, ರಷ್ಯಾದ ರೆಡ್ ಆರ್ಮಿ ಹೆಸರಿಗೆ ಅರ್ಜಿ

2003ರಲ್ಲಿ ಅಮೆರಿಕವು ಇರಾಕ್ ಮೇಲೆ ದಾಳಿ ಮಾಡಿದಾಗ ಕಾರ್ಯಾಚರಣೆಯ ಹೆಸರನ್ನು ‘ಶಾಕ್ ಅಂಡ್ ಆವ್’ (Shock and Awe) ಎಂದಿಟ್ಟಿತ್ತು. ಆ ಹೆಸರಿಗೆ ಬರೋಬ್ಬರಿ 29 ಟ್ರೇಡ್​​ಮಾರ್ಕ್ ಅಪ್ಲಿಕೇಶನ್​​ಗಳು ಸಲ್ಲಿಕೆಯಾಗಿದ್ದುವು. ಬೇರೆ ಬೇರೆ ಉತ್ಪನ್ನಗಳಿಗೆ ಬೇಕಾಗಿ ಅರ್ಜಿ ಹಾಕಲಾಯಿತಾದರೂ ಯಾರಿಗೂ ಟ್ರೇಡ್​​ಮಾರ್ಕ್ ಸಿಕ್ಕಿದಂತಿಲ್ಲ.

ರಷ್ಯಾದ ಸೇನೆಗೆ ರೆಡ್ ಆರ್ಮಿ (Red Army) ಎಂದು ಕರೆಯಲಾಗುತ್ತದೆ. ಸರ್ಕಾರದ ಒಂದು ಸಂಸ್ಥೆಯೇ ಈ ಹೆಸರನ್ನು ಟ್ರೇಡ್​​ಮಾರ್ಕ್ ಆಗಿ ನೊಂದಾಯಿಸಿತು. ಇದಕ್ಕೆ ವಿರೋಧ ಬಂದಿತಾದರೂ ಅಂತಿಮವಾಗಿ ಟ್ರೇಡ್​​ಮಾರ್ಕ್ ಸಿಕ್ಕಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ