AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LAC vs LoC: ಎಲ್​​ಒಸಿ, ಎಲ್​​ಎಸಿ, ಅಂತಾರಾಷ್ಟ್ರೀಯ ಗಡಿ ಮಧ್ಯೆ ವ್ಯತ್ಯಾಸವೇನು? ಇಲ್ಲಿದೆ ಡೀಟೇಲ್ಸ್

Difference between LAC and LoC: ಭಾರತದ ಗಡಿ ವಿಚಾರಕ್ಕೆ ಬಂದಾಗ ಅಂತಾರಾಷ್ಟ್ರೀಯ ಗಡಿ, ಎಲ್​​ಒಸಿ, ಎಲ್​​ಎಸಿ ಹೆಸರನ್ನು ಕೇಳಿರುತ್ತೀರಿ. ಅಂತಾರಾಷ್ಟ್ರೀಯ ಗಡಿ ಎಂಬುದು ಯಾವುದೇ ವಿವಾದ ಇಲ್ಲದ, ಉಭಯ ದೇಶಗಳಿಗೆ ಸಮ್ಮತವಾಗಿರುವ ಮತ್ತು ನಿರ್ಧಾರಿತವಾಗಿರುವ ಗಡಿಯಾಗಿದೆ. ಎಲ್​​ಒಸಿ ಎಂಬುದು ಕಾಶ್ಮೀರ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ನಿಯಂತ್ರಿತ ಪ್ರದೇಶಗಳ ನಡುವೆ ತಾತ್ಕಾಲಿಕವಾಗಿ ನಿರ್ಧರಿಸಲಾಗಿರುವ ಗಡಿರೇಖೆಯಾಗಿದೆ. ಎಲ್​​ಎಸಿ ಎಂಬುದು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್. ಇದು ಭಾರತ ಮತ್ತು ಚೀನಾ ನಡುವೆ ಇತ್ಯರ್ಥವಾಗದೇ ಇರುವ ಗಡಿಭಾಗವಾಗಿದೆ.

LAC vs LoC: ಎಲ್​​ಒಸಿ, ಎಲ್​​ಎಸಿ, ಅಂತಾರಾಷ್ಟ್ರೀಯ ಗಡಿ ಮಧ್ಯೆ ವ್ಯತ್ಯಾಸವೇನು? ಇಲ್ಲಿದೆ ಡೀಟೇಲ್ಸ್
ಭಾರತೀಯ ಸೈನಿಕರು ಗಡಿ ಕಾಯುತ್ತಿರುವುದು.
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2025 | 4:21 PM

ಪಾಕಿಸ್ತಾನದ ಗಡಿ ವಿಚಾರಕ್ಕೆ ಬಂದಾಗ ನೀವು ಕೆಲವೊಮ್ಮೆ ಎಲ್​​ಒಸಿ ಅಥವಾ ಲೈನ್ ಆಫ್ ಕಂಟ್ರೋಲ್ (LoC) ಪದ ಬಳಕೆ ಆಗುವುದನ್ನು ಕೇಳಿರಬಹುದು. ಚೀನಾದ ಗಡಿವಿವಾದ ಬಂದಾಗ ಎಲ್​​ಎಸಿ (LAC) ಪದ ಬಳಕೆ ಆಗುವುದನ್ನು ಕೇಳಿರಬಹುದು. ಇನ್ನುಳಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಅಂತಾರಾಷ್ಟ್ರೀಯ ಗಡಿ, ಹಾಗೂ ಭಾರತ ಚೀನಾ ಅಂತಾರಾಷ್ಟ್ರೀಯ ಗಡಿ ಇರುವುದನ್ನು ನೀವು ಗಮನಿಸಿರಬಹುದು. ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು ಗಡಿ ವಿವಾದಗಳಿವೆ. ಭಾರತ ಮತ್ತು ಚೀನಾ ನಡುವೆಯೂ ಗಡಿ ವಿವಾದಗಳಿವೆ. ಇವು ಪೂರ್ಣ ಇತ್ಯರ್ಥ ಆಗುವವರೆಗೂ ಎಲ್​​ಒಸಿ, ಎಲ್​​ಎಸಿ ಗಡಿಗಳು ಅಸ್ತಿತ್ವದಲ್ಲಿ ಇರುತ್ತವೆ.

ಅಂತರರಾಷ್ಟ್ರೀಯ ಗಡಿ ಎಂದರೇನು?

ಎರಡು ನೆರೆಯ ದೇಶಗಳನ್ನು ಸ್ಪಷ್ಟವಾಗಿ ಬೇರ್ಪಡಿಸುವ ಗಡಿಯನ್ನು ಅಂತರರಾಷ್ಟ್ರೀಯ ಗಡಿ ಎಂದು ಕರೆಯಲಾಗುತ್ತದೆ. ಈ ಗಡಿಯನ್ನು ಪ್ರಪಂಚದಾದ್ಯಂತ ಮಾನ್ಯ ಮಾಡಲಾಗಿರುತ್ತದಾದ್ದರಿಂದ ಇದನ್ನು ಅಂತರರಾಷ್ಟ್ರೀಯ ಗಡಿ ಎಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಗಡಿಗೆ ಸಂಬಂಧಿಸಿದಂತೆ ಎರಡು ನೆರೆಯ ದೇಶಗಳ ನಡುವೆ ಯಾವುದೇ ವಿವಾದ ಇರುವುದಿಲ್ಲ. ಭಾರತದ ಅಂತರರಾಷ್ಟ್ರೀಯ ಗಡಿ ಗುಜರಾತ್ ಸಮುದ್ರದಿಂದ ಪ್ರಾರಂಭವಾಗಿ ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನವರೆಗೆ ವಿಸ್ತರಿಸುತ್ತದೆ. ಇನ್ನೊಂದೆಡೆ, ಚೀನಾ, ನೇಪಾಳ ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಭೂತಾನ್‌ಗಳೊಂದಿಗೂ ಭಾರತ ಗಡಿ ಹಂಚಿಕೊಳ್ಳುತ್ತದೆ. ಸೇರುತ್ತದೆ. ಭಾರತದ ಗುಜರಾತ್ ಮತ್ತು ರಾಜಸ್ಥಾನ ಮತ್ತು ಪಾಕಿಸ್ತಾನದ ಸಿಂಧ್ ಅನ್ನು ಬೇರ್ಪಡಿಸುವ ಶೂನ್ಯ ಬಿಂದುವೂ ಇದೆ.

ಇದನ್ನೂ ಓದಿ: ದೇಶದೊಳಗೆ ನುಗ್ಗಲು ಬಂದ ಪಾಕಿಸ್ತಾನದ ಮೇಲೆ ಭಾರತ ದಾಳಿ; ಲಾಹೋರ್​ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ವಾಸ್ತವಿಕ ನಿಯಂತ್ರಣ ರೇಖೆ (LAC)

ಭಾರತ ಮತ್ತು ಚೀನಾ ಮಧ್ಯೆ ಬಹಳ ಸುದೀರ್ಘ ಗಡಿ ಇದೆ. ಇದರಲ್ಲಿ ಹೆಚ್ಚಿನದು ಇನ್ನೂ ಇತ್ಯರ್ಥ ಆಗಿಲ್ಲ. ಸುಮಾರು 4,000 ಕಿಮೀಯಷ್ಟು ಗಡಿ ವಿವಾದ ಇದೆ. ಭಾರತದ ಕಾಶ್ಮೀರ, ಲಡಾಖ್, ಅರುಣಾಚಲ, ಉತ್ತರಾಖಂಡ್, ಹಿಮಾಚಲ, ಸಿಕ್ಕಿಮ್ ರಾಜ್ಯಗಳ ಗಡಿಯೊಂದಿಗೆ ಚೀನಾದ ತಕರಾರು ಇದೆ. ಸಾಕಷ್ಟು ಪ್ರದೇಶಗಳನ್ನು ಚೀನಾ ತನ್ನದೆಂದು ಹೇಳಿಕೊಳ್ಳುತ್ತದೆ. ಹೀಗಾಗಿ, ಚೀನಾ ಪದೇ ಪದೇ ಗಡಿ ತಂಟೆಗೆ ಬರುವುದುಂಟು.

ಒಂದು ಇತ್ಯರ್ಥಕ್ಕೆ ಬರುವವರೆಗೂ ಭಾರತ ಮತ್ತು ಚೀನಾದ ಈಗಿರುವ ನಿಯಂತ್ರಣ ಗಡಿಭಾಗದ ಅಗಲವನ್ನು 50-100 ಕಿಮೀ ಅಂತರ ಇಟ್ಟುಕೊಳ್ಳಲಾಗಿದೆ. ಈ ಗಡಿ ಪ್ರದೇಶಕ್ಕೆ ಎರಡೂ ದೇಶಗಳ ಸೈನಿಕರು ಬರುವಂತಿಲ್ಲ. ಗಾಲ್ವನ್ ಕಣಿವೆಯಲ್ಲಿ ಚೀನಾದವರು 2020ರಲ್ಲಿ ಈ ನಿಯಮ ಉಲ್ಲಂಘಿಸಲು ಯತ್ನಿಸಿದ್ದುಂಟು.

1914ರ ಶಿಮ್ಲಾ ಸಭೆಯಲ್ಲಿ ನಿರ್ಧಾರವಾದ ಗಡಿಯನ್ನು ಭಾರತ ಅನುಸರಿಸುತ್ತದೆ. ಆದರೆ, ಚೀನಾ 1959ರಲ್ಲಿ ಪ್ರಸ್ತಾಪವಾದ ಗಡಿಯನ್ನು ಅನುಸರಿಸುತ್ತದೆ. ಹೀಗಾಗಿ, ಎರಡೂ ದೇಶಗಳ ಸೈನಿಕರ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಹಾಗೆಯೇ, ಚೀನಾದವರು ಇಡೀ ಅರುಣಾಚಲಪ್ರದೇಶವೇ ತನ್ನದು ಎಂದು ವಾದಿಸುತ್ತದೆ.

ಇದನ್ನೂ ಓದಿ: 12 ಡ್ರೋನ್​ಗಳನ್ನು ಹೊಡೆದುರುಳಿಸಲಾಗಿದೆ ಎಂದ ಪಾಕ್ ಸೇನೆ: ಭಾರತ ಹೇಳಿದ್ದೇನು?

ಎಲ್​ಒಸಿ ಎಂದರೇನು?

ಎಲ್​ಒಸಿ ಎಂದರೆ ಲೈನ್ ಆಫ್ ಕಂಟ್ರೋಲ್. ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನ್​​ನ ಪ್ರದೇಶಗಳು ಹಾಗೂ ಜಮ್ಮು, ಲಡಾಖ್ ಹಾಗೂ ಕಾಶ್ಮೀರದ ಪ್ರದೇಶಗಳನ್ನು ಬೇರ್ಪಡಿಸುವ ಗಡಿಯು ಎಲ್​​ಒಸಿ ಆಗಿದೆ. ಇವಿನ್ನೂ ಪೂರ್ಣವಾಗಿ ಇತ್ಯರ್ಥವಾಗದ ಪ್ರದೇಶಗಳಾಗಿವೆ. ಪಾಕಿಸ್ತಾನವು ಇಡೀ ಜಮ್ಮು ಮತ್ತು ಕಾಶ್ಮೀರ ಹಾಗು ಲಡಾಖ್ ಅನ್ನು ತನ್ನ ಪ್ರದೇಶವೆಂದು ಹೇಳಿಕೊಳ್ಳುತ್ತದೆ.

ಹಾಗೆಯೇ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಪ್ರದೇಶಗಳು ತಮಗೆ ವಾಪಸ್ ಬರಬೇಕು ಎಂಬುದು ಭಾರತದ ನಿಲುವು. ಈ ವಿವಾದದ ಮಧ್ಯೆ ಕೆಲ ಒಪ್ಪಂದಗಳಿಂದ ಲೈನ್ ಆಫ್ ಕಂಟ್ರೋಲ್ ಅನ್ನು ರಚಿಸಲಾಗಿದೆ. ಒಟ್ಟಾರೆ 776 ಕಿಮೀಯಷ್ಟು ಎಲ್​ಒಸಿ ಇದೆ. ಇದಿನ್ನೂ ಅಧಿಕೃತ ಗಡಿಯಲ್ಲ. ಹೀಗಾಗಿ ಗಡಿ ಭಾಗದಲ್ಲಿ ಫೈರಿಂಗ್ ಇತ್ಯಾದಿ ಸಂಘರ್ಷಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ