ಹೊಸ ದಾಖಲೆ; ಅಕ್ಟೋಬರ್ ತಿಂಗಳಲ್ಲಿ ಯುಪಿಐ ಮೂಲಕ ಆದ ವಹಿವಾಟು ಮೌಲ್ಯ 17.16 ಲಕ್ಷಕೋಟಿ ರೂ

New UPI Transactions Record: ಅಕ್ಟೋಬರ್​ನಲ್ಲಿ ಆಗಿರುವ 17.16 ಲಕ್ಷ ಕೋಟಿ ಮೊತ್ತದ ಯುಪಿಐ ವಹಿವಾಟು ಹೊಸ ದಾಖಲೆಯಾಗಿದೆ. ಇದೂವರೆಗೆ ಯಾವುದೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಯುಪಿಐ ಮೂಲಕ ಹಣದ ವಹಿವಾಟು ಆಗಿರಲಿಲ್ಲ. ಪ್ರತೀ ತಿಂಗಳು ವಹಿವಾಟು ಪ್ರಮಾಣ ಹೆಚ್ಚುತ್ತಲೇ ಇದೆ. ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿಗೆ 1,000 ಕೋಟಿ ವಹಿವಾಟು ಸಂಖ್ಯೆ ತಲುಪಿತ್ತು. ಅದಾದ ಬಳಕ ಸತತವಾಗಿ ವಹಿವಾಟು ಸಂಖ್ಯೆ 1,000 ಕೋಟಿಗಿಂತ ಮೇಲೆಯೇ ಇದೆ.

ಹೊಸ ದಾಖಲೆ; ಅಕ್ಟೋಬರ್ ತಿಂಗಳಲ್ಲಿ ಯುಪಿಐ ಮೂಲಕ ಆದ ವಹಿವಾಟು ಮೌಲ್ಯ 17.16 ಲಕ್ಷಕೋಟಿ ರೂ
ಯುಪಿಐ ವಹಿವಾಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2023 | 5:49 PM

ನವದೆಹಲಿ, ನವೆಂಬರ್ 2: ಭಾರತದಲ್ಲಿ ಬಹಳ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಾದ ಯುಪಿಐ ಮೂಲಕ ಅಕ್ಟೋಬರ್ ತಿಂಗಳಲ್ಲಿ 17.16 ಕೋಟಿ ರೂ ಮೊತ್ತದಷ್ಟು ಹಣವಹಿವಾಟು ಆಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ (NPCI) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ 1,141 ಕೋಟಿ ವಹಿವಾಟುಗಳಾಗಿವೆ. ಹಬ್ಬದ ಸೀಸನ್ ಇರುವುದರಿಂದ ಅಕ್ಟೋಬರ್ ತಿಂಗಳಲ್ಲಿ ಬಹಳ ಹೆಚ್ಚು ವಹಿವಾಟುಗಳು (UPI transactions) ನಡೆದಿವೆ. ಸೆಪ್ಟೆಂಬರ್ ತಿಂಗಳಲ್ಲಿ 1056 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದವು. ಅಕ್ಟೋಬರ್​ನಲ್ಲಿ ಈ ಪ್ರಮಾಣವು ಶೇ. 8ರಷ್ಟು ಹೆಚ್ಚಾಗಿದೆ.

ಅಕ್ಟೋಬರ್​ನಲ್ಲಿ ಆಗಿರುವ 17.16 ಲಕ್ಷ ಕೋಟಿ ಮೊತ್ತದ ಯುಪಿಐ ವಹಿವಾಟು ಹೊಸ ದಾಖಲೆಯಾಗಿದೆ. ಇದೂವರೆಗೆ ಯಾವುದೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಯುಪಿಐ ಮೂಲಕ ಹಣದ ವಹಿವಾಟು ಆಗಿರಲಿಲ್ಲ. ಪ್ರತೀ ತಿಂಗಳು ವಹಿವಾಟು ಪ್ರಮಾಣ ಹೆಚ್ಚುತ್ತಲೇ ಇದೆ. ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿಗೆ 1,000 ಕೋಟಿ ವಹಿವಾಟು ಸಂಖ್ಯೆ ತಲುಪಿತ್ತು. ಅದಾದ ಬಳಕ ಸತತವಾಗಿ ವಹಿವಾಟು ಸಂಖ್ಯೆ 1,000 ಕೋಟಿಗಿಂತ ಮೇಲೆಯೇ ಇದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ

ವಿವಿಧ ತಿಂಗಳಲ್ಲಿ ಆದ ಯುಪಿಐ ವಹಿವಾಟು

  • ಅಕ್ಟೋಬರ್ ತಿಂಗಳಲ್ಲಿ ವಹಿವಾಟು ಮೊತ್ತ 17.16 ಲಕ್ಷ ಕೋಟಿ ರೂ; ವಹಿವಾಟು ಸಂಖ್ಯೆ 1,141 ಕೋಟಿ.
  • ಸೆಪ್ಟೆಂಬರ್ ತಿಂಗಳಲ್ಲಿ ವಹಿವಾಟು ಮೊತ್ತ 15.80 ಲಕ್ಷ ಕೋಟಿ ರೂ; ವಹಿವಾಟು ಸಂಖ್ಯೆ 1,056 ಕೋಟಿ.
  • ಆಗಸ್ಟ್ ತಿಂಗಳಲ್ಲಿ ಯುಪಿಐ ವಹಿವಾಟು ಮೊತ್ತ 15.76 ಲಕ್ಷ ಕೋಟಿ ರೂ; ವಹಿವಾಟು ಸಂಖ್ಯೆ 1,058 ಕೋಟಿ.

ಇನ್ನೊಂದು ಮುಖ್ಯ ಸಂಗತಿ ಎಂದರೆ ಯುಪಿಐಗೆ ಜೋಡಿಸಿಕೊಂಡಿರುವ ಬ್ಯಾಂಕುಗಳ ಸಂಖ್ಯೆ ಸುಮಾರು 500ರಷ್ಟಿದೆ. 2016ರಲ್ಲಿ ಯುಪಿಐ ಆರಂಭವಾದ 21 ಬ್ಯಾಂಕುಗಳಷ್ಟೇ ಯುಪಿಐಗೆ ತೆರೆದುಕೊಂಡಿದ್ದವು.

ಇದನ್ನೂ ಓದಿ: US Interest Rates: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; ಭಾರತೀಯ ಮಾರುಕಟ್ಟೆ ಮೇಲೇನು ಪರಿಣಾಮ?

2017ರ ಜನವರಿ ತಿಂಗಳಲ್ಲಿ ಯುಪಿಐ ಮೂಲಕ 44.6 ಕೋಟಿ ವಹಿವಾಟುಗಳಾಗಿದ್ದವು. 1,696 ಕೋಟಿ ರೂ ಮೊತ್ತದ ಹಣವನ್ನು ಯುಪಿಐ ಮೂಲಕ ವಹಿವಾಟು ಮಾಡಲಾಗಿತ್ತು. ಈ ಆರೇಳು ವರ್ಷದಲ್ಲಿ ಯುಪಿಐ ಬಳಕೆ ಅದ್ವಿತೀಯವಾಗಿ ಬೆಳೆದಿದೆ. 2020ರ ಏಪ್ರಿಲ್ ಬಳಿಕ ಯುಪಿಐ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್