ಭಾರತದ ವಿಮಾ ಮಾರುಕಟ್ಟೆಗೆ ಸ್ವಿಸ್ ಸಂಸ್ಥೆ ಆಗಮನ; ಕೋಟಕ್ ಇನ್ಷೂರೆನ್ಸ್ ಖರೀದಿಸಿದ ಜುರಿಚ್
Zurich Insurance Enters Indian Market: ಸ್ವಿಟ್ಜರ್ಲೆಂಡ್ ದೇಶದ ಜುರಿಚ್ ಇನ್ಷೂರೆನ್ಸ್ ಸಂಸ್ಥೆ ಕೋಟಕ್ ಜನರಲ್ ಇನ್ಷೂರೆನ್ಸ್ ಕಂಪನಿಯ ಬಹು ಪಾಲನ್ನು ಖರೀದಿಸಿದೆ. 4,051 ಕೋಟಿ ರೂ ಮೊತ್ತಕ್ಕೆ ಶೇ. 51ರಷ್ಟು ಪಾಲನ್ನು ಖರೀದಿಸಿದೆ. ಕೋಟಕ್ ಜನರಲ್ ಇನ್ಷೂರೆನ್ಸ್ನ ಮಾಲಕ ಸಂಸ್ಥೆ ಕೋಟಕ್ ಮಹೀಂದ್ರ ಬ್ಯಾಂಕ್ ಈ ವಿಚಾರವನ್ನು ರೆಗುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಈ 51 ಪ್ರತಿಶತ ಪಾಲು ಖರೀದಿಸಿದ ಬಳಿಕ 3 ವರ್ಷದಲ್ಲಿ ಇನ್ನೂ ಶೇ. 19ರಷ್ಟು ಷೇರುಗಳನ್ನು ಜುರಿಚ್ ಇನ್ಷೂರೆನ್ಸ್ ಖರೀದಿಸಲಿದೆ.
ನವದೆಹಲಿ, ನವೆಂಬರ್ 2: ಎಂಟು ವರ್ಷದ ಬಳಿಕ ಭಾರತದ ಇನ್ಷೂರೆನ್ಸ್ ವಲಯದಲ್ಲಿ ಮೊದಲ ಬಾರಿಗೆ ವಿದೇಶೀ ಹೂಡಿಕೆ (foreign investment) ಆಗುತ್ತಿದೆ. ಸ್ವಿಟ್ಜರ್ಲೆಂಡ್ ದೇಶದ ಜುರಿಚ್ ಇನ್ಷೂರೆನ್ಸ್ (Zurich Insurance) ಸಂಸ್ಥೆ ಕೋಟಕ್ ಜನರಲ್ ಇನ್ಷೂರೆನ್ಸ್ ಕಂಪನಿಯ ಬಹು ಪಾಲನ್ನು ಖರೀದಿಸಿದೆ. 4,051 ಕೋಟಿ ರೂ ಮೊತ್ತಕ್ಕೆ ಶೇ. 51ರಷ್ಟು ಪಾಲನ್ನು ಖರೀದಿಸಿದೆ. ಕೋಟಕ್ ಜನರಲ್ ಇನ್ಷೂರೆನ್ಸ್ನ ಮಾಲಕ ಸಂಸ್ಥೆ ಕೋಟಕ್ ಮಹೀಂದ್ರ ಬ್ಯಾಂಕ್ ಈ ವಿಚಾರವನ್ನು ರೆಗುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಈ 51 ಪ್ರತಿಶತ ಪಾಲು ಖರೀದಿಸಿದ ಬಳಿಕ 3 ವರ್ಷದಲ್ಲಿ ಇನ್ನೂ ಶೇ. 19ರಷ್ಟು ಷೇರುಗಳನ್ನು ಜುರಿಚ್ ಇನ್ಷೂರೆನ್ಸ್ ಖರೀದಿಸಲಿದೆ.
ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಮತ್ತು ಸಲಹೆಗಾರನಾಗಿ ಮಾರ್ಗನ್ ಸ್ಟಾನ್ಲೀ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಜುರಿಚ್ ಇನ್ಷೂರೆನ್ಸ್ ಸ್ವಿಟ್ಜರ್ಲ್ಯಾಂಡ್ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾಗಿದೆ. ಪ್ರೀಮಿಯಮ್ ಲೆಕ್ಕಾಚಾರದಲ್ಲಿ ವಿಶ್ವದ 21ನೇ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯೂ ಹೌದು. ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಸಾಮಾನ್ಯ ವಿಮಾ ಸಂಸ್ಥೆಗಳ ಪೈಕಿ ಜುರಿಚ್ ಇನ್ಷೂರೆನ್ಸ್ 7ನೇ ಸ್ಥಾನದಲ್ಲಿದೆ. ಇದರ ಒಟ್ಟಾರೆ ಷೇರುಸಂಪತ್ತು 67 ಬಿಲಿಯನ್ ಡಾಲರ್ (6 ಲಕ್ಷ ಕೋಟಿ ರೂಗೂ ಅಧಿಕ) ಇದೆ.
ಇನ್ನು, ಕೋಟಕ್ ಮಹೀಂದ್ರ ಲೈಫ್ ಇನ್ಷೂರೆನ್ಸ್ ಕಂಪನಿ 2001ರಲ್ಲಿ ಆರಂಭವಾಗಿದ್ದು ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಭಾರತದಾದ್ಯಂತ 4 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ಹೆಲ್ತ್ ಇನ್ಷೂರೆನ್ಸ್ ಮತ್ತು ಮೋಟಾರ್ ಇನ್ಷೂರೆನ್ಸ್ ವಿಭಾಗದಲ್ಲಿ ಅದರ ಕವರೇಜ್ ಇದೆ. ಅದರಲ್ಲೂ ಅದರ ಆರೋಗ್ಯ ವಿಮೆಗಳ ಒಟ್ಟು ಪ್ರೀಮಿಯಮ್ ಮೊತ್ತ 57.1 ಕೋಟಿ ರೂನಷ್ಟಿದೆ.
‘ವಿಶ್ವದ ಮುಖ್ಯ ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ ಭಾರತವೂ ಇದೆ. ಕೋಟಕ್ ಮಹೀಂದ್ರ ಗ್ರೂಪ್ಗೆ ಭಾರತೀಯ ಹಣಕಾಸು ಸೇವಾ ಕ್ಷೇತ್ರದಲ್ಲಿ ಪರಿಣಿತಿ ಇದೆ. ಜುರಿಚ್ ಇನ್ಷೂರೆನ್ಸ್ ಸಂಸ್ಥೆ ರೀಟೆಲ್ ಮತ್ತು ಕಮರ್ಷಿಯಲ್ ಇನ್ಷೂರೆನ್ಸ್ನಲ್ಲಿ ಸಮರ್ಥವಾಗಿದೆ. ಈ ಪಾಲುದಾರಿಕೆಯು ಭಾರತೀಯ ವಿಮಾ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗ್ರಾಹಕ ಅನುಭವ ತರಬಲ್ಲುದು,’ ಎಂದು ಜುರಿಚ್ ಇನ್ಷೂರೆನ್ಸ್ ಕಂಪನಿಯ ಏಷ್ಯಾ ಪೆಸಿಫಿಕ್ ವಿಭಾಗದ ಸಿಇಒ ತುಳಸಿ ನಾಯ್ಡು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Thu, 2 November 23