ಈ ಎರಡು ಯುದ್ಧಗಳು ವಿಶ್ವವನ್ನು ಆರ್ಥಿಕ ಹಿಂಜರಿತಕ್ಕೆ ನೂಕುತ್ತಿವೆ: ಜಾಗತಿಕ ಹಣಕಾಸು ತಜ್ಞರು ಕಂಗಾಲು

Experts Predicts Global Recession: ರಷ್ಯಾ ಉಕ್ರನ್ ಯುದ್ಧ, ಇಸ್ರೇಲ್ ಹಮಾಸ್ ಯುದ್ಧ ಜಗತ್ತಿಗೆ ಮಾರಕವಾಗಿವೆ. ದೀರ್ಘಕಾಲ ಇರಲಿರುವ ಈ ಬಿಕ್ಕಟ್ಟು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಎಡೆ ಮಾಡಿಕೊಡುವುದು ನಿಶ್ಚಿತ ಎನ್ನುತ್ತಾರೆ ಆರ್ಥಿಕ ತಜ್ಞರು. ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜರ್ ಎನಿಸಿದ ಬ್ಲ್ಯಾಕ್​ರಾಕ್​ನ ಸಿಇಒ ಲ್ಯಾರಿ ಫಿಂಕ್ ಮತ್ತು ಜೆಪಿ ಮಾರ್ಗನ್ ಸಂಸ್ಥೆಯ ಛೇರ್ಮನ್ ಜೇಮೀ ಡಿಮೋನ್ ಅವರಿಬ್ಬರೂ ಕೂಡ ಈ ವಾದವನ್ನು ಪುರಸ್ಕರಿಸುತ್ತಾರೆ.

ಈ ಎರಡು ಯುದ್ಧಗಳು ವಿಶ್ವವನ್ನು ಆರ್ಥಿಕ ಹಿಂಜರಿತಕ್ಕೆ ನೂಕುತ್ತಿವೆ: ಜಾಗತಿಕ ಹಣಕಾಸು ತಜ್ಞರು ಕಂಗಾಲು
ಜೇಮೀ ಡಿಮೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2023 | 11:57 AM

ನವದೆಹಲಿ, ನವೆಂಬರ್ 8: ಜಗತ್ತಿನ ಬೆಳವಣಿಗೆ ಸ್ಥಿರತೆ ಮತ್ತು ಶಾಂತಿಯ ಮೇಲೆ ನಿಂತಿದೆ ಎಂಬುದು ತಿಳಿದಿರುವ ಸಂಗತಿ. ಅದೀಗ ಬಾರಿ ಬಾರಿ ರುಜುವಾತಾಗುತ್ತಿದೆ. ಕೋವಿಡ್ ಬಳಿಕ ಇಡೀ ಜಗತ್ತು ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ರಷ್ಯಾ ಮತ್ತು ಉಕ್ರೇನ್ ಯುದ್ಧ (Russia Ukraine war) ಸಂಭವಿಸಿತ್ತು. ಅದು ಇನ್ನೂ ನಿಂತಿಲ್ಲ ಎಂದು ಜಗತ್ತು ಕಳವಳಪಡುತ್ತಿರುವಾಗಲೇ ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ಮೇಲೆ ದಾಳಿ ಮಾಡಿ (hamas attack on Israel) ಹೊಸ ಯುದ್ಧಕ್ಕೆ ಎಡೆ ಮಾಡಿಕೊಟ್ಟರು. ಈ ಎರಡು ಯುದ್ಧಗಳು ಕ್ಷಿಪ್ರವಾಗಿ ನಡೆದು ಮುಗಿದು ಹೋಗುವಂತಹದ್ದಲ್ಲ. ದೀರ್ಘಕಾಲ ಇರಲಿರುವ ಈ ಬಿಕ್ಕಟ್ಟು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಎಡೆ ಮಾಡಿಕೊಡುವುದು ನಿಶ್ಚಿತ ಎನ್ನುತ್ತಾರೆ ಆರ್ಥಿಕ ತಜ್ಞರು. ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜರ್ ಎನಿಸಿದ ಬ್ಲ್ಯಾಕ್​ರಾಕ್​ನ ಸಿಇಒ ಲ್ಯಾರಿ ಫಿಂಕ್ ಮತ್ತು ಜೆಪಿ ಮಾರ್ಗನ್ ಸಂಸ್ಥೆಯ ಛೇರ್ಮನ್ ಜೇಮೀ ಡಿಮೋನ್ (Jamie Dimon) ಅವರಿಬ್ಬರೂ ಕೂಡ ಈ ವಾದವನ್ನು ಪುರಸ್ಕರಿಸುತ್ತಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿ ಹಾಗೂ ಇಸ್ರೇಲ್​ನಿಂದ ಗಾಜಾದಲ್ಲಿ ಪ್ರತಿದಾಳಿ ಆಗಿದ್ದು, ಮತ್ತು ಕಳೆದ ವರ್ಷದಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು ಇವೆಲ್ಲವೂ ಈ ವಿಶ್ವಕ್ಕೆ ಹೊಸ ಭವಿಷ್ಯ ತೆರೆದಿಟ್ಟಿವೆ ಎಂದು ಬ್ಲ್ಯಾಕ್​ರಾಕ್​ನ ಚೀಫ್ ಎಕ್ಸಿಕ್ಯೂಟಿವ್ ಲ್ಯಾರಿ ಫಿಂಕ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Jobs In Israel: ಪ್ಯಾಲೆಸ್ಟೀನೀಯರ ಬದಲು ಭಾರತದಿಂದ 1 ಲಕ್ಷ ಕಾರ್ಮಿಕರನ್ನು ನೇಮಕ ಮಾಡಲಿರುವ ಇಸ್ರೇಲ್

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಲ ಶಾಂತಿಯ ತುಣುಕು ತಪ್ಪಿ ಹೋಗಿತ್ತು. ಜಾಗತಿಕ ರಾಜಕೀಯ ವಿದ್ಯಮಾನಗಳು ನಮ್ಮ ಜೀವನವನ್ನು ದಿಗ್ದರ್ಶಿಸುತ್ತಿವೆ ಎಂದು ಅವರು ಹೇಳಿದ್ದಾರೆ.

‘ವಿಶ್ವಾದ್ಯಂತ ಭರವಸೆ ಕಡಿಮೆ ಆಗುತ್ತಿದೆ, ಭಯ ಹೆಚ್ಚುತ್ತಿದೆ. ಭಯ ಹೆಚ್ಚಾದಾಗ ಜನರು ಖರ್ಚು ಕಡಿಮೆ ಮಾಡುತ್ತಾರೆ. ದೀರ್ಘಕಾಲದಲ್ಲಿ ಈ ಭಯವು ಆರ್ಥಿಕ ಹಿಂಜರಿತವನ್ನು ಹುಟ್ಟುಹಾಕುತ್ತದೆ. ಇದೇ ರೀತಿ ಭಯ ಹೆಚ್ಚುತ್ತಿದ್ದರೆ ಐರೋಪ್ಯ ಹಿಂಜರಿತ ಮತ್ತು ಅಮೆರಿಕದ ಹಿಂಜರಿತ ಹೆಚ್ಚಾಗುತ್ತದೆ,’ ಎಂದು ಲ್ಯಾರಿ ಫಿಂಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ; ಬಡತನದಲ್ಲಿ ಇಳಿಮುಖ: ವಿಶ್ವಸಂಸ್ಥೆ ಯುಎನ್​ಡಿಪಿ ವರದಿಯಲ್ಲಿ ಇನ್ನೂ ಕೆಲ ಕುತೂಹಲಕಾರಿ ಸಂಗತಿ

ಅಮೆರಿಕದ ಅತಿದೊಡ್ಡ ಬ್ಯಾಂಕ್ ಆದ ಜೆಪಿ ಮಾರ್ಗನ್​ನ ಮುಖ್ಯಸ್ಥ ಜೇಮೀ ಡಿಮೋನ್ ಅವರು ಮತ್ತೊಂದು ಸಂದರ್ಶನದಲ್ಲಿ ಈ ಮೇಲಿನ ಭಯದ ವಿಚಾರವನ್ನು ಪುನರುಚ್ಚರಿಸಿದ್ದಾರೆ. ಅವರ ಪ್ರಕಾರ 1938ರ ಬಳಿಕ ಈ ವಿಶ್ವ ಅತಿದೊಡ್ಡ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ