Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ; ಬಡತನದಲ್ಲಿ ಇಳಿಮುಖ: ವಿಶ್ವಸಂಸ್ಥೆ ಯುಎನ್​ಡಿಪಿ ವರದಿಯಲ್ಲಿ ಇನ್ನೂ ಕೆಲ ಕುತೂಹಲಕಾರಿ ಸಂಗತಿ

UNDP Report: ಭಾರತದಲ್ಲಿ 2000ರಲ್ಲಿ 442 ಡಾಲರ್ ಇದ್ದ ತಲಾದಾಯ 2022ರಲ್ಲಿ 2,389 ಡಾಲರ್​ಗೆ ಏರಿದೆ. ಇನ್ನೊಂದೆಡೆ, 2004ರಲ್ಲಿ ಶೇ. 40ರಷ್ಟಿದ್ದ ಬಡತನ ದರ 2019ರಲ್ಲಿ ಶೇ. 10ಕ್ಕೆ ಇಳಿದಿದೆ ಎಂದು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಸಂಪತ್ತು ಹಂಚಿಕೆಯಲ್ಲಿ ಬಹಳ ಹೆಚ್ಚು ಅಸಮಾನತೆ ಸೃಷ್ಟಿಯಾಗಿರುವುದನ್ನೂ ಅದು ಗುರುತಿಸಿದೆ. ಬಹುಸ್ತರದ ಬಡತನದಲ್ಲಿ ವಾಸಿಸುತ್ತಿರುವ ಜನಸಂಖ್ಯೆಯ ಪ್ರಮಾಣ 2015-16ರಲ್ಲಿ ಶೇ. 25ರಷ್ಟು ಇದ್ದದ್ದು 2019-21ರಲ್ಲಿ ಶೇ. 15ಕ್ಕೆ ಇಳಿದಿದೆ ಎನ್ನುವಂತಹ ಸಮಾಧಾನಕರ ಸಂಗತಿಯನ್ನೂ ಅದು ಹೇಳಿದೆ.

ಭಾರತದಲ್ಲಿ ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ; ಬಡತನದಲ್ಲಿ ಇಳಿಮುಖ: ವಿಶ್ವಸಂಸ್ಥೆ ಯುಎನ್​ಡಿಪಿ ವರದಿಯಲ್ಲಿ ಇನ್ನೂ ಕೆಲ ಕುತೂಹಲಕಾರಿ ಸಂಗತಿ
ಬಡತನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2023 | 10:08 AM

ನವದೆಹಲಿ, ನವೆಂಬರ್ 7: ಕಳೆದ ಕೆಲ ವರ್ಷದಲ್ಲಿ ಭಾರತದಲ್ಲಿ ಬಡತನದ ಪ್ರಮಾಣ ಕಡಿಮೆ ಆಗಿದೆ. ಆದರೆ, ಆರ್ಥಿಕ ಅಸಮಾನತೆ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ (UNDP- United Nations Development Programme) ಸಂಸ್ಥೆಯ ಹೊಸ ವರದಿಯೊಂದು ಹೇಳಿದೆ. 2024ರ ಏಷ್ಯಾ ಪೆಸಿಫಿಕ್ ಹ್ಯೂಮನ್ ಡೆವಲಪ್ಮೆಂಟ್ ರಿಪೋರ್ಟ್​ನಲ್ಲಿ (Asia Pacific Human Development Report) ಭಾರತದಲ್ಲಿ ದೂರಗಾಮಿಯಾಗಿ ಯೋಜಿಸಲಾದ ಪ್ರಗತಿಯತ್ತ ಬೆಳಕು ಚೆಲ್ಲಿದೆ. ಅದೇ ವೇಳೆ ಸಂಪತ್ತು ಹಂಚಿಕೆಯಲ್ಲಿ ಬಹಳ ಹೆಚ್ಚು ಅಸಮಾನತೆ ಸೃಷ್ಟಿಯಾಗಿರುವುದನ್ನೂ ಅದು ಗುರುತಿಸಿದೆ. ಬಹುಸ್ತರದ ಬಡತನದಲ್ಲಿ ವಾಸಿಸುತ್ತಿರುವ ಜನಸಂಖ್ಯೆಯ ಪ್ರಮಾಣ 2015-16ರಲ್ಲಿ ಶೇ. 25ರಷ್ಟು ಇದ್ದದ್ದು 2019-21ರಲ್ಲಿ ಶೇ. 15ಕ್ಕೆ ಇಳಿದಿದೆ ಎನ್ನುವಂತಹ ಸಮಾಧಾನಕರ ಸಂಗತಿಯನ್ನೂ ಅದು ಹೇಳಿದೆ.

ಭಾರತದಲ್ಲಿ 2000ರಲ್ಲಿ 442 ಡಾಲರ್ ಇದ್ದ ತಲಾದಾಯ 2022ರಲ್ಲಿ 2,389 ಡಾಲರ್​ಗೆ ಏರಿದೆ. ಇನ್ನೊಂದೆಡೆ, 2004ರಲ್ಲಿ ಶೇ. 40ರಷ್ಟಿದ್ದ ಬಡತನ ದರ 2019ರಲ್ಲಿ ಶೇ. 10ಕ್ಕೆ ಇಳಿದಿದೆ ಎಂದು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ಸಂಸ್ಥೆ ತನ್ನ ವರದಿಯಲ್ಲಿ (‘Making our Future: New Directions for Human Development in Asia and the Pacific’ ತಿಳಿಸಿದೆ.

ಇದನ್ನೂ ಓದಿ: ವಿಶ್ವದಲ್ಲಿ ಅತಿಹೆಚ್ಚು ಹೊತ್ತು ಕೆಲಸ ಮಾಡುವವರಲ್ಲಿ ಭಾರತೀಯರು; ಸಿರಿವಂತ ದೇಶಗಳಲ್ಲಿ ಕೆಲಸ ಅವಧಿ ಕಡಿಮೆ

2015ರಿಂದ 2021ರವರೆಗೆ ಬಹುಸ್ತರದ ಬಡತನ ಶೇ. 25ರಿಂದ ಶೇ. 15ಕ್ಕೆ ಇಳಿದಿದೆಯಾದರೂ ಬಡತನ ಕೆಲ ಪ್ರಮುಖ ರಾಜ್ಯಗಳಲ್ಲಿ ಹೆಚ್ಚಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 45ರಷ್ಟಿರುವ ಈ ಕೆಲ ರಾಜ್ಯಗಳಲ್ಲಿ ಬಡತನ ಪ್ರಮಾಣ ಮಾತ್ರ ಶೇ. 62ರಷ್ಟಿದೆ ಎಂಬ ಸಂಗತಿಯನ್ನು ಯುಎನ್​ಡಿಪಿ ಎತ್ತಿತೋರಿಸಿದೆ.

ಬಡತನ ರೇಖೆಗಿಂತ ತುಸು ಮೇಲೆ ಇರುವ ಜನರ ಪ್ರಮಾಣ ಹೆಚ್ಚಿದೆ. ಇವರೆಲ್ಲರೂ ಕೂಡ ಬಡತನದ ಕತ್ತಿಯ ಮೇಲೆ ತೂಗುತ್ತಿದ್ದಾರೆ. ಯಾವಾಗ ಬೇಕಾದರೂ ಬಡತನಕ್ಕೆ ಜಾರಬಹುದು. ಅದರಲ್ಲೂ ಮಹಿಳೆಯರು, ಅಸಂಘಟಿತ ಉದ್ಯಮಗಳ ಕಾರ್ಮಿಕರು, ಅಂತರರಾಜ್ಯ ವಲಸಿಗರು ಹೆಚ್ಚು ಅಪಾಯದಲ್ಲಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Carl-Gustaf M4 Rockets: ರಕ್ಷಣಾ ಕ್ಷೇತ್ರದಲ್ಲಿ ಮೊದಲ ಬಾರಿ 100 ಪ್ರತಿಶತ ವಿದೇಶೀ ಹೂಡಿಕೆಗೆ ಅನುಮತಿ; ಸ್ವೀಡನ್ ಸಾಬ್​ನಿಂದ ರಾಕೆಟ್ ಘಟಕ ಸ್ಥಾಪನೆಗೆ ಯೋಜನೆ

ಆದರೆ ಈ ವರದಿ ಒಂದು ಗಮನಾರ್ಹ ಮತ್ತು ಆತಂಕಕಾರಿ ಸಂಗತಿಯತ್ತ ಬೊಟ್ಟು ಮಾಡಿದೆ. ಜನರ ಆಶೋತ್ತರಗಳು ಈಡೇರಿಕೆಯಾಗದೇ ಸೃಷ್ಟಿಯಾದ ಹತಾಶೆಗಳು, ಹೆಚ್ಚಿದ ಅಭದ್ರತೆ, ಅನಿಶ್ಚಿತ ಭವಿಷ್ಯ ಇವೆಲ್ಲವೂ ಕೂಡ ತುರ್ತು ಬದಲಾವಣೆಯ ಅಗತ್ಯತೆ ಇರುವುದನ್ನು ಸೂಚಿಸುತ್ತವೆ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ