Carl-Gustaf M4 Rockets: ರಕ್ಷಣಾ ಕ್ಷೇತ್ರದಲ್ಲಿ ಮೊದಲ ಬಾರಿ 100 ಪ್ರತಿಶತ ವಿದೇಶೀ ಹೂಡಿಕೆಗೆ ಅನುಮತಿ; ಸ್ವೀಡನ್ ಸಾಬ್​ನಿಂದ ರಾಕೆಟ್ ಘಟಕ ಸ್ಥಾಪನೆಗೆ ಯೋಜನೆ

Sweden's Saab To Manufacture Rockets In India: ಭಾರತದ ರಕ್ಷಣಾ ವಲಯದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ಎಫ್​ಡಿಐಗೆ ಸರ್ಕಾರ ಅನುಮತಿಸಿದೆ. ಸ್ವೀಡನ್​ನ ಸಾಬ್ ಸಂಸ್ಥೆ ಭಾರತದಲ್ಲಿ ರಾಕೆಟ್ ಉತ್ಪಾದಿಸಲು ಭಾರತ ಅವಕಾಶ ಕೊಟ್ಟಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಸಾಬ್ ಕಂಪನಿಯ ಪ್ರಸ್ತಾಪಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿರುವುದು ತಿಳಿದುಬಂದಿದೆ. ಹರ್ಯಾಣದಲ್ಲಿ ಮುಂದಿನ ವರ್ಷದಿಂದ ಸಾಬ್​ನ ಕಾರ್ಲ್ ಗುಸ್ತಾಫ್ ಎಂ4 ರಾಕೆಟ್ ಸಿಸ್ಟಂನ ಉತ್ಪಾದನೆ ಆಗಲಿದೆ.

Carl-Gustaf M4 Rockets: ರಕ್ಷಣಾ ಕ್ಷೇತ್ರದಲ್ಲಿ ಮೊದಲ ಬಾರಿ 100 ಪ್ರತಿಶತ ವಿದೇಶೀ ಹೂಡಿಕೆಗೆ ಅನುಮತಿ; ಸ್ವೀಡನ್ ಸಾಬ್​ನಿಂದ ರಾಕೆಟ್ ಘಟಕ ಸ್ಥಾಪನೆಗೆ ಯೋಜನೆ
ಕಾರ್ಲ್ ಗುಸ್ತಾಫ್ ಎಂ4 ಸಿಸ್ಟಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2023 | 3:25 PM

ನವದೆಹಲಿ, ನವೆಂಬರ್ 6: ಭಾರತದ ರಕ್ಷಣಾ ವಲಯದಲ್ಲಿ (defense sector) ಮೊದಲ ಬಾರಿಗೆ ಪೂರ್ಣಪ್ರಮಾಣದ ಎಫ್​ಡಿಐಗೆ (100% FDI) ಸರ್ಕಾರ ಅನುಮತಿಸಿದೆ. ಸ್ವೀಡನ್​ನ ಸಾಬ್ ಸಂಸ್ಥೆ ಭಾರತದಲ್ಲಿ ರಾಕೆಟ್ ಉತ್ಪಾದಿಸಲು ಭಾರತ ಅವಕಾಶ ಕೊಟ್ಟಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಸಾಬ್ ಕಂಪನಿಯ (Sweden’s Saab) ಪ್ರಸ್ತಾಪಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿರುವುದು ತಿಳಿದುಬಂದಿದೆ. ಇದೂವರೆಗೂ ವಿದೇಶೀ ಕಂಪನಿಗೂ ಭಾರತದಲ್ಲಿ ರಕ್ಷಣಾ ವಲಯದಲ್ಲಿ ಪೂರ್ಣ ಹೂಡಿಕೆ ಮಾಡಲು ಅನುಮತಿ ಸಿಕ್ಕಿರಲಿಲ್ಲ.

ಭಾರತದಲ್ಲಿ ಸದ್ಯ ಇರುವ ನಿಯಮದ ಪ್ರಕಾರ, ರಕ್ಷಣಾ ವಲಯದಲ್ಲಿ ಶೇ. 74ರವರೆಗೆ ಎಫ್​ಡಿಐಗೆ ಅನುಮತಿ ಇದೆ. ಅದಾದ ಬಳಿಕ ಯೋಜನೆ ಆಧಾರವಾಗಿ ಪೂರ್ಣ ಹೂಡಿಕೆ ಬೇಕೆಂದರೆ ಅದನ್ನು ಪರಿಗಣಿಸುವ ಅವಕಾಶವೂ ಕಾನೂನಿನಲ್ಲಿ ಇದೆ. ಆದರೆ, ನೂರು ಪ್ರತಿಶತದಷ್ಟು ಹೂಡಿಕೆ ಇದುವರೆಗೆ ಸಾಧ್ಯವಾಗಿರಲಿಲ್ಲ. ಈಗ ಸ್ವೀಡನ್​ನ ಸಾಬ್​ಗೆ ಈ ಭಾಗ್ಯ ಸಿಕ್ಕಿದೆ.

ಸ್ವೀಡನ್ ದೇಶದ ಸಾಬ್ ಕಂಪನಿ ಹರ್ಯಾಣದಲ್ಲಿ ತನ್ನ ರಾಕೆಟ್​ಗಳನ್ನು ತಯಾರಿಸಲಿದೆ. ಸಾಬ್ ಎಫ್​ಎಫ್​ವಿ ಇಂಡಿಯಾ (Saab FFV India) ಎಂಬ ಹೊಸ ಉಪಸಂಸ್ಥೆಯನ್ನು ನೊಂದಣಿ ಮಾಡಲಾಗಿದೆ. ಹೆಗಲ ಮೇಲೆ ಇಟ್ಟು ಹೊಡೆಯಬಹುದಾದ ಕಾರ್ಲ್ ಗುಸ್ತಾಫ್ ಎಂ4 ಸಿಸ್ಟಂನ ಇತ್ತೀಚಿನ ರಾಕೆಟ್​ಗಳನ್ನು ಹರ್ಯಾಣದ ಘಟಕದಲ್ಲಿ ತಯಾರಿಸಲಾಗುತ್ತದೆ. ಇದಕ್ಕೆ ಸುಮಾರು 500 ಕೋಟಿ ರೂನಷ್ಟು ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ. ಕುತೂಹಲವೆಂದರೆ ಕಾರ್ಲ್ ಗುಸ್ತಾಫ್ ಎಂ4 ಸಿಸ್ಟಂ ಅನ್ನು ಸ್ವೀಡನ್ ದೇಶದಿಂದ ಹೊರಗೆ ತಯಾರಿಸಲಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಇದನ್ನೂ ಓದಿ: ಅತಿಹೆಚ್ಚು ಸರಕು ನಿರ್ವಹಣೆ, ಮುಂದ್ರಾ ಪೋರ್ಟ್ ಹೊಸ ದಾಖಲೆ; ಅದಾನಿ ಪೋರ್ಟ್ ಷೇರಿಗೆ ಹೆಚ್ಚಿದ ಬೇಡಿಕೆ

ಮುಂದಿನ ವರ್ಷದಿಂದ ಹರ್ಯಾಣದ ಘಟಕದಲ್ಲಿ ಸಾಬ್ ತನ್ನ ಹೊಸ ರಾಕೆಟ್​ಗಳ ಉತ್ಪಾದನೆ ಶುರು ಮಾಡಲಿದೆ. ಇವೇ ರಾಕೆಟ್​ಗಳನ್ನು ಭಾರತೀಯ ಸೇನೆಯಲ್ಲಿ ಹೆಚ್ಚೆಚ್ಚು ಬಳಸಲಾಗುತ್ತಿದೆ. ಇಷ್ಟು ದಿನ ಇವುಗಳನ್ನು ಸ್ವೀಡನ್​ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಭಾರತದಲ್ಲೇ ಈ ರಾಕೆಟ್​ಗಳು ತಯಾರಾಗುತ್ತಿವೆ. ಭಾರತೀಯ ಸೇನೆಗೆ ಮಾತ್ರವಲ್ಲ, ಇವುಗಳನ್ನು ಬೇರೆ ದೇಶಕ್ಕೆ ರಫ್ತು ಮಾಡಲೂ ಸಾಬ್ ಆಲೋಚಿಸುತ್ತಿದೆ. ಕಾರ್ಲ್ ಗುಸ್ತಾಫ್ ಎಂ4 ರಾಕೆಟ್​​ ಸಿಸ್ಟಂ ಅನ್ನು ಭಾರತೀಯ ಸೇನೆ ಮಾತ್ರವಲ್ಲ, ಅಮೆರಿಕ ಮತ್ತು ಯೂರೋಪಿಯನ್ ದೇಶಗಳೂ ಬಳಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ