Baba Vanga’s Predictions 2024: ರಷ್ಯಾದ ಅಧ್ಯಕ್ಷರ ಹತ್ಯೆ, 2024ರಲ್ಲಿ ನಡೆಯುತ್ತೆ ಭಯಾನಕ ಘಟನೆ: ಬಾಬಾ ವಂಗಾ ಭವಿಷ್ಯವಾಣಿ 

ಬಾಬಾ ವಂಗಾ ಭವಿಷ್ಯ ನುಡಿ: ಬಲ್ಗೇರಿಯಾದ ಬಾಬಾ ವಂಗಾ ಅವರ ಸ್ಪೋಟಕ ಭವಿಷ್ಯವಾಣಿಗಳ ಕುರಿತ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅವರು ನುಡಿದ ಭವಿಷ್ಯವಾಣಿಗಳು ಶೇಕಡಾ 85% ರಷ್ಟು ನಿಜವಾಗಿದೆ ಎಂದು ಹಲವು ವರದಿಗಳು ಹೇಳಿವೆ.  ಇದೀಗ ಬಾಬಾ ವಂಗಾ ಅವರು  2024 ರಲ್ಲಿ ಘಟಿಸಬಹುದಾದ ಕೆಲವು  ಘಟನೆಗಳ ಬಗ್ಗೆ ನುಡಿದ ಭವಿಷ್ಯವಾಣಿಯ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ. 

Baba Vanga’s Predictions 2024: ರಷ್ಯಾದ ಅಧ್ಯಕ್ಷರ ಹತ್ಯೆ, 2024ರಲ್ಲಿ ನಡೆಯುತ್ತೆ ಭಯಾನಕ ಘಟನೆ: ಬಾಬಾ ವಂಗಾ ಭವಿಷ್ಯವಾಣಿ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 06, 2023 | 6:17 PM

ಬಾಬಾ ವಂಗಾ (Baba Vanga) ಅವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಅವರು ನುಡಿಯುವ ಸ್ಪೋಟಕ ಭವಿಷ್ಯವಾಣಿಯಿಂದಲೇ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಬಾಲ್ಕನ್ ಪ್ರದೇಶದ  ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ತನ್ನ 12 ನೇ ವಯಸ್ಸಿನಲ್ಲಿ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡ ಬಾಬಾ ವಂಗಾ ಅವರಿಗೆ  ಆ ನಂತರ  ಭವಿಷ್ಯ ನುಡಿಯುವ ಶಕ್ತಿ ಒಳಿಯಿತು ಎಂದು ಹೇಳಲಾಗುತ್ತದೆ. ಅವರು ನುಡಿದಿರುವ ಭವಿಷ್ಯವಾಣಿಗಳಲ್ಲಿ ಶೇಕಡಾ 85% ರಷ್ಟು ನಿಜವಾಗಿದೆ ಎಂದು ವರದಿಗಳು ಹೇಳಿವೆ.  ಅಮೇರಿಕಾದ 9/11 ಭಯೋತ್ಪಾದಕ ದಾಳಿ, ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನ ಸಾವು, ಸೋವಿಯತ್ ಒಕ್ಕೂಟದ ಪತನ ಹೀಗೆ ಅವರು ನುಡಿದ ಹಲವು ಭವಿಷ್ಯವಾಣಿಗಳು  ನಿಜವಾಗಿದೆ.

ಅವರು 1996 ರಲ್ಲಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು. ಇಂದಿಗೂ ಅವರು ನುಡಿದ ಭವಿಷ್ಯವಾಣಿಗಳು ಸುದ್ದಿಯಾಗುತ್ತಿರುತ್ತವೆ. ಆಸ್ಟ್ರೋಫೇಮ್ ಪ್ರಕಾರ, ಬಾಬಾ ವಂಗಾ  ಮುಂದಿನ ವರ್ಷ  ಅಂದರೆ 2024 ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಯರ್ ಪುಟಿನ್ ಹತ್ಯೆಯಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.  ಇದರ ಹೊರತಾಗಿ  ಬಾಬಾ ವಂಗಾ ಅವರು  2024 ರಲ್ಲಿ ನಡೆಯಬಹುದಾದ    ಘಟನೆಗಳ ಬಗ್ಗೆ ನುಡಿದ ಭವಿಷ್ಯವಾಣಿಯ ಕುರಿತ ಮಾಹಿತಿ ಇಲ್ಲಿದೆ.

ಪುಟಿನ್ ಹತ್ಯೆ:

ರಷ್ಯಾ ಅಧ್ಯಕ್ಷ ವ್ಲಾಡಿಮಿರಿ ಪುಟಿನ್ ಬಗ್ಗೆ ಬಾಬಾ ವಂಗಾ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2024 ರಲ್ಲಿ ಪುಟಿನ್ ಹತ್ಯೆಯಾಗಬಹುದು. ರಷ್ಯಾದ ಪ್ರಜೆಯೇ ಅವರನ್ನು ಸಾಯಿಸಬಹುದು ಎಂಬ ಭವಿಷ್ಯ ನುಡಿದಿದ್ದಾರೆ.

ಯುರೋಪಿನಲ್ಲಿ ಭಯೋತ್ಪಾದಕ ದಾಳಿ:

ಜಗತ್ತಿನಲ್ಲಿ ಭಯೋತ್ಪಾದನೆ ಪ್ರವರ್ಧಮಾನಕ್ಕೆ ಬರಲಿದೆ ಎಂದು ಬಾಬಾ ವಂಗಾ ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ. ಅಲ್ಲದೆ ಭಯೋತ್ಪಾದನೆಯಿಂದ ಯುರೋಪ್ ಖಂಡಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ಅಂದರೆ 2024 ರಲ್ಲಿ ಒಂದು ಪ್ರಮುಖ ರಾಷ್ಟ್ರವು ಜೈವಿಕ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತದೆ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಲಿದೆ. ಅಲ್ಲದೆ ಭಯೋತ್ಪಾದಕರು ಯುರೋಪನ್ನು ಗುರಿಯಾಗಿಟ್ಟುಕೊಂಡು ಹಲವು ದಾಳಿಗಳನ್ನು ಮಾಡಲಿದ್ದಾರೆ ಎಂದು ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ.

ಜಗತ್ತು ಆರ್ಥಿಕ ಬಿಕ್ಕಟ್ಟಿನ ಅಪಾಯವನ್ನು ಎದುರಿಸಲಿದೆ:

ಬಾಬಾ ವಂಗಾ ಮತ್ತೊಂದು ಸ್ಪೋಟಕ ಭವಿಷ್ಯವಾಣಿ ನುಡಿದಿದ್ದು, ವಿಶ್ವದ ಆರ್ಥಿಕತೆ ಕುಸಿಯಬಹುದು ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಸಾಲದ ಮಟ್ಟಗಳು,  ಹಾಗೂ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಅಂಶಗಳು  ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ.

ಭೂಮಿಯ ಹವಾಮಾನ ಬದಲಾವಣೆ:

ಮುಂದಿನ ವರ್ಷ 2024 ರಲ್ಲಿ ಪ್ರಪಂಚವು ನೈಸರ್ಗಿಕ ವಿಕೋಪ ಮತ್ತು ಹವಾಮಾನದ ಪ್ರತಿಕೂಲ ಪರಿಣಾಮವನ್ನು ಎದುರಿಸಲಿದೆ ಎಂದು ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ಬಾಬಾ ವಂಗಾ ಪ್ರಕಾರ 2024 ರಲ್ಲಿ ಭೂಮಿಯ ಕಕ್ಷೆಯಲ್ಲಿ ಬದಲಾವಣೆಗಳು ಉಂಟಾಗುತ್ತದೆ. ಇದರಿಂದಾಗಿ ಭೂಮಿಯು ಹವಾಮಾನದ ಬದಲಾವಣೆಯ ಬೀಕರ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.

ಸೈಬರ್ ದಾಳಿ:

ಬಾಬಾ ವಂಗಾ ತಮ್ಮ ಭವಿಷ್ಯವಾಣಿಯ ಮೂಲಕ ಜಗತ್ತು ಸೈಬರ್ ದಾಳಿಯ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಸೈಬರ್ ದಾಳಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಹ್ಯಾಕರ್ಗಳು ಪವರ್ ಗ್ರಿಡ್ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯವನ್ನು ನಾಶ ಪಡಿಸುವ ಗುರಿಯನ್ನು ಹೊಂದಿದ್ದಾರೆ. ಇದು ರಾಷ್ಟ್ರದ ಭದ್ರತೆಗೆ ಅಪಾಯ ತಂದೊಡ್ಡುತ್ತದೆ ಎಂಬ ಭವಿಷ್ಯವಾಣಿ ನುಡಿದಿದ್ದಾರೆ.

ಇದನ್ನೂ ಓದಿ: ಬಾಬಾ ವಂಗಾ ಭವಿಷ್ಯ ನುಡಿ: ಭಾರತದಲ್ಲಿ ಏರಿಕೆಯಾಗಲಿದೆ ತಾಪಮಾನ, ಜಗತ್ತಿಗೆ ಮತ್ತೊಂದು ವೈರಸ್ ಆತಂಕ

ಕ್ಯಾನ್ಸರ್ ಔಷಧಿ:

ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ,  2024 ರಲ್ಲಿ ಅಲ್ಝೈಮರ್ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಲಭ್ಯವಾಗಲಿದೆ. ಅಲ್ಲದೆ 2024 ರಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು ಔಷಧಿಗಳನ್ನು ಕಂಡುಹಿಡಿಯಲಾಗುವುದು ಎಂಬ ಭವಿಷ್ಯವನ್ನು ನುಡಿದಿದ್ದಾರೆ.

ತಂತ್ರಜ್ಞಾನದ ಕ್ರಾಂತಿ:

ಕ್ವಾಂಟಮ್ ಕಂಪ್ಯೂಟಿಂಗ್ (ಇದು ಸಾಮಾನ್ಯ ಕಂಪ್ಯೂಟರ್ಗಿಂತ ವೇಗವಾಗಿ ಸಮಸ್ಯೆಗಳನ್ನು ಪರಿಹರಿಸುತ್ತವೆ)  ಮುಂದಿನ ವರ್ಷ ದೊಡ್ಡ ಪ್ರಗತಿಯನ್ನು ಸಾಧಿಸಲಿವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಕ್ವಾಂಟಮ್ ಕಂಪ್ಯೂಟಿಂಗ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ಮೂಲಕ ಸಾಮಾನ್ಯ ಕಂಪ್ಯೂಟರ್ ಬಳಸುವುದಕ್ಕಿಂತಲೂ ಶೀಘ್ರವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಬಾಬಾ ವಂಗಾ ಭವಿಷ್ಯ ನುಡಿಯಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ