Baba Vanga Predictions ಬಾಬಾ ವಂಗಾ ಭವಿಷ್ಯ ನುಡಿ: ಭಾರತದಲ್ಲಿ ಏರಿಕೆಯಾಗಲಿದೆ ತಾಪಮಾನ, ಜಗತ್ತಿಗೆ ಮತ್ತೊಂದು ವೈರಸ್ ಆತಂಕ
ಭಾರತದಲ್ಲಿ ತಾಪಮಾನ 50 ಡಿಗ್ರಿಗೆ ಏರಿಕೆ ಆಗಲಿದ್ದು, ಬೆಳೆಗಳಿಗೆ ಮಿಡತೆ ಕಾಟ ಕಂಡುಬರುತ್ತದೆ. ಕ್ಷಾಮದ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರವಾಹ ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ...
ಬಾಲ್ಕನ್ ಪ್ರದೇಶದ ನಾಸ್ಟ್ರಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ (Baba Vanga) ನುಡಿದ ಭವಿಷ್ಯವಾಣಿಗಳಲ್ಲಿ ಶೇ 85ರಷ್ಟು ಭವಿಷ್ಯವಾಣಿ ನಿಜವಾಗಿದೆ. ಚರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾಳ ಮರಣ ಮತ್ತು ಸೋವಿಯತ್ ಒಕ್ಕೂಟದ ವಿಸರ್ಜನೆ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗಿತ್ತು. 1996ರಲ್ಲಿ ಬಾಬಾ ವಂಗಾ ಸಾವಿಗೀಡಾಗಿದ್ದರೂ ಆಕೆ ನುಡಿದ ಭವಿಷ್ಯವಾಣಿಗಳು ನಿಜವಾಗುತ್ತವೆ ಎಂದು ಬಹುತೇಕ ಜನರು ಈಗಲೂ ನಂಬುತ್ತಿದ್ದಾರೆ. ಬಾಬಾ ವಂಗಾ ಅವರ ಮುಂದಿನ ಭವಿಷ್ಯವಾಣಿ (Baba Vanga’s predictions) ಜಗತ್ತಿಗೆ ಕೆಟ್ಟದ್ದು ಸಂಭವಿಸುತ್ತದೆ ಎಂಬುದರ ಬಗ್ಗೆಯಾಗಿದೆ. 2022ರಲ್ಲಿನ ಭವಿಷ್ಯ ನುಡಿ ವರ್ಚುವಲ್ ರಿಯಾಲಿಟಿ ಬಗ್ಗೆ ಆಗಿದ್ದು ಜನರು ಹೆಚ್ಚಿನ ಸಮಯವನ್ನು ಸ್ಕ್ರೀನ್ ಮುಂದೆ ಕಳೆಯಲಿದ್ದಾರೆ ಎಂಬುದಾಗಿತ್ತು. ಈಗ ನೋಡಿದರೆ ಈ ಭವಿಷ್ಯವಾಣಿ ನಿಜವೇ ಆಗಿದೆ. ಬಾಬಾ ವಂಗಾ ಅವರ ನಿಜನಾಮ ವಂಜೆಲಿಯಾ ಗುಸ್ಟೆರೋವಾ (Vangelia Gushterova). ಈಕೆ ಇನ್ನೊಂದು ಸಾಂಕ್ರಾಮಿಕ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಹೆಪ್ಪುಗಟ್ಟಿದ ವೈರಸ್ನಿಂದ ಈ ರೋಗ ಉಂಟಾಗಲಿದ್ದು ಇದು ಸೈಬಿರಿಯಾದಲ್ಲಿ ಪತ್ತೆಯಾಗುತ್ತದೆ ಎಂದಿದ್ದರು. 2021 ಜುಲೈ ತಿಂಗಳಲ್ಲಿ ಸಂಶೋಧಕರ ತಂಡ ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಪ್ರಾಚೀನ ವೈರಸ್ಗಳಿಂದ ಹೆಪ್ಪುಗಟ್ಟಿದ ವೈರಸ್ಗಳನ್ನು ಪತ್ತೆ ಮಾಡಿದ್ದು, ಇವುಗಳು ಹಿಂದೆಂದೂ ಪತ್ತೆಯಾಗದವುಗಳಾಗಿವೆ. 2015ರಲ್ಲಿ ಸಂಗ್ರಹಿಸಲಾದ ಮಂಜುಗಡ್ಡೆಗಳಲ್ಲಿ ಕನಿಷ್ಠ ಪಕ್ಷ 14,400 ವರ್ಷಗಳ ಹಿಂದೆ ಹೆಪ್ಪುಗಟ್ಟಿದ ವೈರಸ್ ಗಳಾಗಿವೆ ಇವು ಎಂದು ಸಂಶೋಧಕರು ಮನಗಂಡಿದ್ದಾರೆ.
ವಿಶ್ಲೇಷಣೆ ನಡೆಸಿದಾಗ ಮಂಜುಗಡ್ಡೆಯಲ್ಲಿ 33 ವೈರಲ್ ಜೆನೆಟಿಕ್ ಕೋಡ್ಗಳು ಪತ್ತೆಯಾಗಿವೆ. ಈ ಪೈಕಿ 4ರಲ್ಲಿ ಇರುವ ಜೆನೆಟಿಕ್ ಕೋಡ್ಗಳು ಬ್ಯಾಕ್ಟೀರಿಯಾ ಮೇಲೆ ದಾಳಿ ನಡೆಸುವ ವೈರಸ್ ಕುಟುಂಬಕ್ಕೆ ಸೇರಿದವುಗಳಾಗಿವೆ ಎಂದು ಗುರುತಿಸಲಾಗಿದ. 28 ವೈರಸ್ಗಳು ನೋವೆಲ್ ವೈರಸ್ಗಳಾಗಿದ್ದು, ಹಿಂದೆಂದೂ ಪತ್ತೆಯಾಗದವುಗಳಾಗಿವೆ. ಬಾಬಾ ವಂಗಾ ಅವರ ಭವಿಷ್ಯ ನುಡಿ ಪ್ರಕಾರ ದೇಶಗಳು ಪರ್ಯಾಯ ವ್ಯವಸ್ಥೆ ಹುಡುಕಲೇ ಬೇಕಾದ ಪರಿಸ್ಥಿತಿ ಬರುತ್ತದೆ. ಹೆಚ್ಚಿನ ನಗರಗಳು ನೀರಿನ ಕೊರತೆ ಅನುಭವಿಸಲಿದ್ದು ಇದು ರಾಜಕೀಯ ಮೇಲೆ ಪ್ರಭಾವ ಬೀರುತ್ತದೆ. ಅದೇ ವೇಳೆ ಗ್ರಹಗಳ ಮೇಲೆ ಅನ್ಯಗ್ರಹ ಜೀವಿಗಳು ದಾಳಿ ಮಾಡಲಿವೆ.
ಭಾರತದಲ್ಲಿ ತಾಪಮಾನ 50 ಡಿಗ್ರಿಗೆ ಏರಿಕೆ ಆಗಲಿದ್ದು, ಬೆಳೆಗಳಿಗೆ ಮಿಡತೆ ಕಾಟ ಕಂಡುಬರುತ್ತದೆ. ಕ್ಷಾಮದ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರವಾಹ ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ ಭೂಕಂಪ ಮತ್ತು ಸುನಾಮಿ ಕಂಡುಬರಲಿದೆ ಎಂದು ವಂಗಾ ಭವಿಷ್ಯವಾಣಿ ಇದೆ. ಬಾಬಾ ವಂಗಾ ಅವರು ಅಂಗಾಗ ಕಸಿ ತಂತ್ರಜ್ಞಾನದ ಬಗ್ಗೆಯೂ ಹೇಳಿದ್ದು 2046ರಲ್ಲಿ ಮನುಷ್ಯರು 100 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ ಎಂದಿದ್ದಾರೆ. 2100ರಲ್ಲಿ ಅಂಧಕಾರ ಮಾಯವಾಗಿ ಭೂಮಿಯ ಇನ್ನೊಂದು ಪ್ರದೇಶ ಕೃತಕ ಸೂರ್ಯನ ಬೆಳಕಿನಿಂದ ಬೆಳಗಲಿದೆ ಎಂದಿದ್ದಾರೆ. 2023ರಲ್ಲಿ ಭೂಮಿಯ ಕಕ್ಷೆ ಬದಲಾವಣೆ ಆಗಲಿದೆ , 2028ರಲ್ಲಿ ಮನುಷ್ಯರು ಶುಕ್ರನಲ್ಲಿಗೆ ಹೋಗಲಿದ್ದಾರೆ, 2043ರಲ್ಲಿ ಮುಸ್ಲಿಮರು ಯುರೋಪ್ ನಲ್ಲಿ ಅಧಿಕಾರಕ್ಕೆ ಬರಲಿದ್ದಾರೆ ಮತ್ತು 5079ರಲ್ಲಿ ಜಗತ್ತು ಅಂತ್ಯವಾಗಲಿದೆ ಎಂದು ವಂಗಾ ಭವಿಷ್ಯವಾಣಿ ಇದೆ.