ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿ; ಸಿಆರ್ಪಿಎಫ್ ಅಧಿಕಾರಿ ಹುತಾತ್ಮ
ಪುಲ್ವಾಮದ ಗಂಗೂ ಕ್ರಾಂಸಿಂಗ್ನಲ್ಲಿ ಉಗ್ರರು ದಾಳಿ ನಡೆಸಿದ್ದು ಸಿಆರ್ ಪಿಎಫ್ ಸಹಾಯಕ ಸಬ್ಇನ್ಸ್ಪೆಕ್ಟರ್ ವಿನೋದ್ ಕುಮಾರ್ಗೆ ಗಂಭೀರ ಗಾಯಗಳಾಗಿತ್ತು
ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ(Pulwama) ಭಾನುವಾರ ಉಗ್ರರು ನಡೆಸಿದ ದಾಳಿಯಲ್ಲಿ (terror attack) ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿ ಹುತಾತ್ಮರಾಗಿದ್ದಾರೆ. ಪುಲ್ವಾಮದ ಗಂಗೂ ಕ್ರಾಂಸಿಂಗ್ನಲ್ಲಿ ಉಗ್ರರು ದಾಳಿ ನಡೆಸಿದ್ದು ಸಿಆರ್ ಪಿಎಫ್ ಸಹಾಯಕ ಸಬ್ಇನ್ಸ್ಪೆಕ್ಟರ್ ವಿನೋದ್ ಕುಮಾರ್ಗೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅವರು ಅಲ್ಲಿ ಸಾವಿಗೀಡಾಗಿದ್ದರೆ. ಇಡೀ ಪ್ರದೇಶವವನ್ನು ನಾವು ಸುತ್ತುವರಿದಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಜುಲೈ 12ರಂದು ಶ್ರೀನಗರದ ಲಾಲ್ ಬಜಾರ್ ಚೆಕ್ ಪೋಸ್ಟ್ ಬಳಿ ಉಗ್ರರು ನಡೆಸಿದ ದಾಳಿಯಲ್ಲಿ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಪಡೆಯ ಎಎಸ್ಐ ಮುಶ್ತಾಕ್ ಅಹ್ಮದ್ ಹುತಾತ್ಮರಾಗಿದ್ದಕು, ಈ ವರ್ಷ ಉಗ್ರರು ನಡೆಸಿದ ದಾಳಿಗಳಲ್ಲಿ ಸಾವಿಗೀಡಾದ 9ನೇ ಪೊಲೀಸ್ ಅಧಿಕಾರಿಯಾಗಿದ್ದಾರೆ ಅಹಮದ್.
Terrorists attacked police and CRPF personnel in the Gangoo area of Pulwama today. One CRPF jawan was injured in the attack. The area has been cordoned off: Jammu & Kashmir Police
Details awaited.
— ANI (@ANI) July 17, 2022
ಜುಲೈ 11ರಂದು ಜೈಷ್ ಎ ಮೊಹಮ್ಮದ್ ಕಮಾಂಡರ್ ಕೈಸೆರ್ ಕೊಕಾ ಸೇರಿದಂತೆ ಇಬ್ಬರು ಉಗ್ರರನ್ನು ರಕ್ಷಣಾ ಪಡೆ ಹತ್ಯೆ ಮಾಡಿತ್ತು. ಉಗ್ರ ಕೃತ್ಯಗಳ ಆರೋಪಿ ಕೋಕಾ ಮೋಸ್ಟ್ ವಾಂಟೆಡ್ ಉಗ್ರ ಆಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.