Margaret Alva ಉಪರಾಷ್ಟ್ರಪತಿ ಹುದ್ದೆಗೆ ವಿಪಕ್ಷಗಳ ಅಭ್ಯರ್ಥಿ, ಕರ್ನಾಟಕದ ಮಾರ್ಗರೇಟ್ ಆಳ್ವ ಕಿರುಪರಿಚಯ
ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ನನ್ನ ಹೆಸರನ್ನು ನಾಮನಿರ್ದೇಶನ ಮಾಡಿರುವುದು ಗೌರವ. ಈ ನಾಮನಿರ್ದೇಶನವನ್ನು ನಾನು ವಿನಯದಿಂದ ಒಪ್ಪಿಕೊಂಡಿದ್ದು, ನನ್ನ ಮೇಲೆ ಭರವಸೆ ಇರಿಸಿದ ವಿಪಕ್ಷದ ನೇತಾರರಿಗೆ ಧನ್ಯವಾದಗಳು ಎಂದು ಆಳ್ವ ಟ್ವೀಟ್.
ಉಪರಾಷ್ಟ್ರಪತಿ ಚುನಾವಣೆ (vice presidential elections) ಆಗಸ್ಟ್ 6ರಂದು ನಡೆಯಲಿದ್ದು ರಾಜಸ್ಥಾನದ ಮಾಜಿ ಗವರ್ನರ್ ಮಾರ್ಗರೇಟ್ ಆಳ್ವ(Margaret Alva) ಅವನ್ನು ಭಾನುವಾರ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಘೋಷಿಸಿವೆ. 80ರ ಹರೆಯದ ಆಳ್ವ ಅವರ ವಿರುದ್ಧ ಆಡಳಿತಾರೂಢ ಎನ್ಡಿಎ ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಜಗದೀಪ್ ಧನ್ಖರ್ (Jagdeep Dhankhar) ಅವರನ್ನು ಕಣಕ್ಕಿಳಿಸಿದೆ. ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ನನ್ನ ಹೆಸರನ್ನು ನಾಮನಿರ್ದೇಶನ ಮಾಡಿರುವುದು ಗೌರವ. ಈ ನಾಮನಿರ್ದೇಶನವನ್ನು ನಾನು ವಿನಯದಿಂದ ಒಪ್ಪಿಕೊಂಡಿದ್ದು, ನನ್ನ ಮೇಲೆ ಭರವಸೆ ಇರಿಸಿದ ವಿಪಕ್ಷದ ನೇತಾರರಿಗೆ ಧನ್ಯವಾದಗಳು ಎಂದು ಆಳ್ವ ಟ್ವೀಟ್ ಮಾಡಿದ್ದಾರೆ.
It is a privilege and an honour to be nominated as the candidate of the joint opposition for the post of Vice President of India. I accept this nomination with great humility and thank the leaders of the opposition for the faith they’ve put in me.
Jai Hind ??
— Margaret Alva (@alva_margaret) July 17, 2022
ಉಪರಾಷ್ಟ್ರಪತಿ ಹುದ್ದೆಗೆ ಕಣದಲ್ಲಿರುವ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ಕಿರುಪರಿಚಯ
- ಏಪ್ರಿಲ್ 14, 1942ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮಾರ್ಗರೇಟ್ ಆಳ್ವ ಬಿಎ ಪದವಿ ನಂತರ ಬೆಂಗಳೂರಿನ ಮೌಂಟ್ ಕ್ಯಾರಮೆಲ್ ಕಾಲೇಜು ಮತ್ತು ಸರ್ಕಾರಿ ಲಾ ಕಾಲೇಜಿನಿಂದ ಎಲ್ಎಲ್ ಬಿ ಪದವಿ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಿ ಸಕ್ರಿಯರಾಗಿದ್ದ ಆಳ್ವ, ವಿದ್ಯಾರ್ಥಿ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದರು.
- ವಕೀಲರಾಗಿ ವೃತ್ತಿ ಜೀವನ ಆರಂಭ. 1964ರಲ್ಲಿ ನಿರಂಜನ್ ಆಳ್ವ ಜತೆ ವಿವಾಹ. ಈ ದಾಂಪತ್ಯದಲ್ಲಿ ಒಬ್ಬ ಮಗಳು ಮತ್ತು ಮೂವರು ಪುತ್ರರಿದ್ದಾರೆ. ಅನಾರೋಗ್ಯದಿಂದಾಗಿ 2018ರಲ್ಲಿ ಅವರ ಪತಿ ಮೃತಪಟ್ಟಿದ್ದರು.
- ನಾಲ್ಕು ಬಾರಿ ರಾಜ್ಯಸಭೆ ಮತ್ತು ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 1999ರಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು.
- 1974ರಲ್ಲಿ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
- 42ನೇ ಹರೆಯಲ್ಲಿ ಕೇಂದ್ರ ಸಚಿವೆ. ರಾಜೀವ್ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.
- 2008ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಟಿಕೆಟ್ ಮಾರಾಟವಾಗಿದೆ ಎಂದು ಹೇಳುವ ಮೂಲಕ ವಿವಾದವೆಬ್ಬಿಸಿದ್ದರು. ಆ ಹೊತ್ತಲ್ಲಿ ಅವರ ಮಗನೂ ಆಕಾಂಕ್ಷಿಯಾಗಿದ್ದ. ಆದರೆ ಕರ್ನಾಟಕದಲ್ಲಿ ನಾಯಕರ ಸಂಬಂಧಿಕರಿಗೆ ಟಿಕೆಟ್ ನೀಡಬಾರದು ಎಂಬುದನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೂ ಮಧ್ಯಪ್ರದೇಶ, ಚತ್ತೀಸಗಢ, ರಾಜಸ್ಥಾನದಲ್ಲಿ ಇದನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದರು.
- ಗೋವಾ, ರಾಜಸ್ಥಾನ, ಗುಜರಾತ್ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿಯೂ ಆಳ್ವ ಸೇವೆ ಸಲ್ಲಿಸಿದ್ದಾರೆ.
Published On - 6:50 pm, Sun, 17 July 22