Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್​ಗಳಿಂದ ಉದ್ಯೋಗಿಗಳಿಗೆ 2,500 ರೂವರೆಗೆ ದೀಪಾವಳಿ ಗಿಫ್ಟ್ ಬಿಡುಗಡೆ

Deepavali Gifts: ಸ್ಟೇಟ್ ಬ್ಯಾಂಕ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಓವರ್​ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ಸರ್ಕಾರಿ ಬ್ಯಾಂಕುಗಳಲ್ಲಿ ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿತಿಂಡಿ ಇತ್ಯಾದಿ ಗಿಫ್ಟ್​​ಗಾಗಿ ಪ್ರತಿಯೊಬ್ಬ ಉದ್ಯೋಗಿಗೂ 2,500 ರೂವರೆಗೆ ಹಣವನ್ನು ವ್ಯಯಿಸಲಾಗುತ್ತಿದೆ. ಎಸ್​ಬಿಐ ಮತ್ತು ಕೆನರಾ ಬ್ಯಾಂಕುಗಳಲ್ಲಿ ಗರಿಷ್ಠ ಹಣ ಬಿಡುಗಡೆ ಆಗಿದೆ.

ಎಸ್​ಬಿಐ ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್​ಗಳಿಂದ ಉದ್ಯೋಗಿಗಳಿಗೆ 2,500 ರೂವರೆಗೆ ದೀಪಾವಳಿ ಗಿಫ್ಟ್ ಬಿಡುಗಡೆ
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2023 | 10:28 AM

ನವದೆಹಲಿ, ನವೆಂಬರ್ 8: ಈ ವರ್ಷದ ದೀಪಾವಳಿ ಹಬ್ಬಕ್ಕೆ ಹರ್ಯಾಣದ ಒಂದು ಕಂಪನಿ ತನ್ನ ಹಲವು ಉದ್ಯೋಗಿಗಳಿಗೆ ಕಾರ್ ಗಿಫ್ಟ್ ಕೊಟ್ಟಿದ್ದ ಸುದ್ದಿ ಓದಿದ್ದೇವೆ. ತಮಿಳುನಾಡಿನ ಟೀ ಎಸ್ಟೇಟ್ ಮಾಲೀಕರು ತಮ್ಮ ಕೆಲ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್ ಬೈಕ್​ಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದೇ ವೇಳೆ ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳಿಗೂ (PSU Banks Employees) ಗಿಫ್ಟ್ ಸಿಗುತ್ತಿದೆ. 2,500 ರೂವರೆಗೆ ಹಣವನ್ನು ಎಲ್ಲಾ ಉದ್ಯೋಗಿಗಳಿಗೂ ನೀಡಲಾಗುತ್ತಿದೆ. ನವೆಂಬರ್ 10ರಿಂದ 14ರವರೆಗೆ ಇರುವ ದೀಪಾವಳಿ ಹಬ್ಬಕ್ಕೆ ಮನೆಗೆ ಸಿಹಿತಿಂಡಿ, ಬಟ್ಟೆ ವಗೈರೆ ಖರೀದಿಸಲು ಸಹಾಯವಾಗಿ ಹಣ ಬಿಡುಗಡೆ ಮಾಡಲಾಗಿದೆ.

ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್​ಬಿಐ (State Bank of India) ತನ್ನ ಪ್ರತಿಯೊಬ್ಬ ಉದ್ಯೋಗಿಗೂ 2,500 ರೂಗಳಷ್ಟು ದೀಪಾವಳಿ ಬೋನಸ್ ಅನ್ನು ಘೋಷಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಲಕ್ಷ ಉದ್ಯೋಗಿಗಳಿದ್ದಾರೆ. ಸಿಹಿ ತಿಂಡಿ, ಡ್ರೈಫ್ರೂಟ್ ಇತ್ಯಾದಿ ಖರೀದಿಸಿ ಉದ್ಯೋಗಿಗಳಿಗೆ ವಿತರಿಸಲಾಗುತ್ತಿದೆ.

ಇದನ್ನೂ ಓದಿ: ಇವರೇ ಸ್ಟಾರ್​​ಗಳು..! ದೀಪಾವಳಿ ಹಬ್ಬಕ್ಕೆ ಕಾರು, ಬುಲೆಟ್ ಬೈಕ್ ಉಡುಗೊರೆ; ಉದ್ಯೋಗಿಗಳಿಗೆ ಅಚ್ಚರಿ

‘ಎಲ್ಲಾ ಉದ್ಯೋಗಿಗಳಿಗೂ ಸಿಹಿ ತಿಂಡಿ ಅಥವಾ ಡ್ರೈ ಫ್ರೂಟ್​ಗಳನ್ನು ಹಂಚಲು ಪ್ರತಿಯೊಬ್ಬರಿಗೆ 2,500 ರೂನಂತೆ ಹಣ ಬಿಡುಗಡೆ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಮುನ್ನ ಸಿಹಿ ಡಬ್ಬಿಗಳನ್ನು ಉದ್ಯೋಗಿಗಳಿಗೆ ಹಂಚಬೇಕೆಂದು ಸೂಚನೆ ನೀಡಲಾಗಿದೆ,’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಿಹಿತಿಂಡಿಯ ಜೊತೆಗೆ ಎಲ್ಲಾ ಎಸ್​ಬಿಐ ಉದ್ಯೋಗಿಗಳಿಗೂ ಗ್ರೀಟಿಂಗ್ ಕಾರ್ಡ್ ಕೂಡ ನೀಡಲಾಗುತ್ತಿದೆ.

ಕೆನರಾ ಬ್ಯಾಂಕ್ ಕೂಡ ತನ್ನ ಉದ್ಯೋಗಿಗಳಿಗೆ 2,500 ರೂ ನೀಡಿದೆ. ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನ ಉದ್ಯೋಗಿಗಳಿಗೆ 2,000 ರೂ ಜಮೆ ಆಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತಿಯೊಬ್ಬ ಉದ್ಯೋಗಿಗೂ 1,500 ರೂ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ವಿಷುವಲ್ ಎಫೆಕ್ಟ್ಸ್ ಕೊಡಲು ಬಾಹುಬಲಿಯಂಥ ಸಿನಿಮಾ ಬರಲಿಲ್ಲ: ಸ್ಪಿರಿಟ್ ಮೀಡಿಯಾ ಮುಚ್ಚಲು ಕಾರಣ ತಿಳಿಸಿದ ರಾನಾ ದಗ್ಗುಬಾಟಿ

ಎಸ್​ಬಿಐ ಬಳಿಕ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಉದ್ಯೋಗಿಗಳಿಗೆ 1,000 ರೂ ಮೌಲ್ಯದ ಸಿಹಿ ತಿಂಡಿಯನ್ನು ದೀಪಾವಳಿ ಗಿಫ್ಟ್ ಆಗಿ ನೀಡಲು ನಿರ್ಧರಿಸಲಾಗಿರುವುದು ತಿಳಿದುಬಂದಿದೆ.

ಕಾರ್ಪೊರೇಟ್ ಕಂಪನಿಗಳೂ ಕೂಡ ತಮ್ಮ ಉದ್ಯೋಗಿಗಳಿಗೆ ಡ್ರೈಫ್ರೂಟ್ ಇತ್ಯಾದಿ ಉಡುಗೊರೆಗಳನ್ನು ನೀಡುತ್ತವೆ. ಕೆಲ ಕಂಪನಿಗಳು ಬೆಳ್ಳಿ ಕಾಯಿನ್ ಇತ್ಯಾದಿ ಕೊಡುವುದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ