Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರೇ ಸ್ಟಾರ್​​ಗಳು..! ದೀಪಾವಳಿ ಹಬ್ಬಕ್ಕೆ ಕಾರು, ಬುಲೆಟ್ ಬೈಕ್ ಉಡುಗೊರೆ; ಉದ್ಯೋಗಿಗಳಿಗೆ ಅಚ್ಚರಿ

Deepavali Gifts: ಹರ್ಯಾಣದ ಫಾರ್ಮಾ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ಕೊಟ್ಟಿದೆ. ಮಿಟ್ಸ್ ಹೆಲ್ತ್​ಕೇರ್ ಸಂಸ್ಥೆ ತನ್ನ ಉದ್ಯೋಗಿಗಳನ್ನು ಸೆಲಬ್ರಿಟಿಗಳಂತೆ ಪರಿಗಣಿಸಿ ಕಾರುಗಳನ್ನು ಕೊಟ್ಟು ಖುಷಿ ಹೆಚ್ಚಿಸಿದೆ. ಹಾಗೆಯೇ, ತಮಿಳುನಾಡಿನ ಟೀ ಎಸ್ಟೇಟ್ ಕಂಪನಿಯೊಂದು ತನ್ನ ಕೆಲ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್ ಬುಲೆಟ್ ಅನ್ನು ದೀಪಾವಳಿ ಗಿಫ್ಟ್ ಆಗಿ ನೀಡಿದೆ.

ಇವರೇ ಸ್ಟಾರ್​​ಗಳು..! ದೀಪಾವಳಿ ಹಬ್ಬಕ್ಕೆ ಕಾರು, ಬುಲೆಟ್ ಬೈಕ್ ಉಡುಗೊರೆ; ಉದ್ಯೋಗಿಗಳಿಗೆ ಅಚ್ಚರಿ
ಕಾರು ಉಡುಗೊರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2023 | 12:34 PM

ನವದೆಹಲಿ, ನವೆಂಬರ್ 5: ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಏನಾದರೊಂದು ಗಿಫ್ಟ್ ನೀಡುತ್ತವೆ. ಕೆಲ ಕಂಪನಿಗಳು ಸ್ವೀಟ್ ಡಬ್ಬಿ ನೀಡುತ್ತವೆ. ಇನ್ನೂ ಕೆಲ ಕಂಪನಿಗಳು ಸೈಟುಗಳು, ಷೇರುಗಳನ್ನು ಉಡುಗೊರೆಯಾಗಿ (deepavali gift) ನೀಡಿದ್ದನ್ನು ನೋಡಿದ್ದೇವೆ. ಹರ್ಯಾಣದ ಫಾರ್ಮಾ ಕಂಪನಿಯೊಂದು ಕೂಡ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ಕೊಟ್ಟಿದೆ. ಮಿಟ್ಸ್ ಹೆಲ್ತ್​ಕೇರ್ ಸಂಸ್ಥೆ ತನ್ನ ಉದ್ಯೋಗಿಗಳನ್ನು ಸೆಲಬ್ರಿಟಿಗಳಂತೆ ಪರಿಗಣಿಸಿ ಕಾರುಗಳನ್ನು ಕೊಟ್ಟು ಖುಷಿ ಹೆಚ್ಚಿಸಿದೆ. ಹಾಗೆಯೇ, ತಮಿಳುನಾಡಿನ ಟೀ ಎಸ್ಟೇಟ್ ಕಂಪನಿಯೊಂದು ತನ್ನ ಕೆಲ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್ ಬುಲೆಟ್ ಅನ್ನು ದೀಪಾವಳಿ ಗಿಫ್ಟ್ ಆಗಿ ನೀಡಿದೆ.

ಹರ್ಯಾಣದ ಮಿಟ್ಸ್ ಹೆಲ್ತ್​ಕೇರ್ ಸಂಸ್ಥೆಯಲ್ಲಿ ಅಂದಾಜು 50 ಮಂದಿ ಕೆಲಸ ಮಾಡುತ್ತಿರಬಹುದು. ಇದರ ಮಾಲೀಕ ಎಂಕೆ ಭಾಟಿಯಾ ಸದ್ಯ ಇಲ್ಲಿ 12 ಮಂದಿಗೆ ಟಾಟಾ ಪಂಚ್ ಕಾರನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಕುತೂಹಲವೆಂದರೆ ಇನ್ನೂ 38 ಮಂದಿಗೂ ಕಾರನ್ನು ಗಿಫ್ಟ್ ಕೊಡಲಿದ್ದಾರೆ. ಕುತೂಹಲವೆಂದರೆ ಕಾರುಗಳನ್ನು ಗಿಫ್ಟ್ ಪಡೆದ ಕೆಲ ಉದ್ಯೋಗಿಗಳಿಗೆ ಕಾರು ಚಲಾಯಿಸುವುದು ಹೇಗೆಂದೇ ಗೊತ್ತಿಲ್ಲ. ಇವೆಲ್ಲರೂ ಕಾರು ಚಲಾಯಿಸುವುದು ಇದೇ ಮೊದಲು.

ಇದನ್ನೂ ಓದಿ: ಇಲಾನ್ ಮಸ್ಕ್ ಮಗನನ್ನು ಶೇಖರ್ ಅಂತ ಕರೀತಾರಂತೆ; ಪುತ್ರನಿಗೆ ಭಾರತೀಯ ಹೆಸರು ಇಟ್ಟಿದ್ಯಾಕೆ ವಿಶ್ವದ ನಂ. 1 ಶ್ರೀಮಂತ?

‘ಕಂಪನಿ ಈ ಮಟ್ಟಕ್ಕೆ ಬೆಳೆಯಲು ಈ ಉದ್ಯೋಗಿಗಳ ಶ್ರಮ ಕಾರಣ. ಇವರೆಲ್ಲರೂ ಹಲವು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪರಿಶ್ರಮ, ಪ್ರಾಮಾಣಿಕತೆಗೆ ಉಡುಗೊರೆ ಈ ಕಾರು. 12 ಮಂದಿ ಸ್ಟಾರ್ ಸೆಲಬ್ರಿಟಿಗಳಿಗೆ ಕಾರು ಗಿಫ್ಟ್ ಕೊಟ್ಟಿದ್ದೇವೆ. ಶೀಘ್ರದಲ್ಲೇ ಇನ್ನೂ 38 ಮಂದಿ ಸ್ಟಾರ್​ಗಳಿಗೆ ಕಾರು ಕೊಡಲಾಗುವುದು’ ಎಂದು ಎಂಕೆ ಭಾಟಿಯಾ ಹೇಳಿದ್ದಾರೆ.

ತಮಗೆ ಕಾರು ಉಡುಗೊರೆಯಾಗಿ ಸಿಗುತ್ತದೆ ಎಂದು ಉದ್ಯೋಗಿಗಳು ಕನಸು ಮನಸಿನಲ್ಲೂ ಎಣಿಸಿರಲಿಲ್ಲವಂತೆ. ಇವರು ತಮ್ಮ ಖುಷಿಯನ್ನು ಹಂಚಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಆಭರಣ ಪ್ರೀಯರೇ, ಚಿನ್ನ ಯಾವ ರೀತಿ ತಯಾರಿ ಆಗುತ್ತೆ ನೋಡಿ

ರಾಯಲ್ ಎನ್​ಫೀಲ್ಡ್ ಬೈಕ್​ಗಳ ಉಡುಗೊರೆ

ತಮಿಳುನಾಡಿನ ಟೀ ಎಸ್ಟೇಟ್ ಮಾಲೀಕರೊಬ್ಬರು ತಮ್ಮ ಕೆಲ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್​ಫೀಲ್ಡ್ ಬೈಕುಗಳನ್ನು ನೀಡಿದ್ದಾರೆ. 600ಕ್ಕೂ ಹೆಚ್ಚು ಉದ್ಯೋಗಿಗಳ ಪೈಕಿ 15 ಮಂದಿಗೆ ಬುಲೆಟ್ ಬೈಕ್ ಸಿಕ್ಕಿದೆ. ಪಿ ಶಿವಕುಮಾರ್ ಎಂಬುವವರು ಈ ಎಸ್ಟೇಟ್ ಮಾಲೀಕರು. ತಮ್ಮ ಎಸ್ಟೇಟ್​ನಲ್ಲಿ ಕೆಲಸ ಮಾಡುವ ಮ್ಯಾನೇಜರ್​ಗಳು, ಸೂಪರ್​ವೈಸರುಗಳು, ಸ್ಟೋರ್​ಕೀಪರುಗಳು, ಕ್ಯಾಷಿಯರ್​ಗಳು, ಫೀಲ್ಡ್ ಸ್ಟ್ಯಾಫ್ ಮತ್ತು ಡ್ರೈವರ್ ಮತ್ತಿತರರಿಗೆ ಈ ಬೈಕ್ ಗಿಫ್ಟ್ ಸಿಕ್ಕಿದೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿ ಪಟ್ಟಣದಲ್ಲಿ ಈ ಟೀ ಎಸ್ಟೇಟ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ