AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಭರಣ ಪ್ರೀಯರೇ, ಚಿನ್ನ ಯಾವ ರೀತಿ ತಯಾರಿ ಆಗುತ್ತೆ ನೋಡಿ

ಮಹಿಳೆಯರಿಗೆ ಬಂಗಾರದ ಆಭರಣಗಳೆಂದರೆ ಬಲು ಪ್ರೀತಿ. ಹಳೆ ಕಾಲದ ಒಡವೆ, ಈಗಿನ ಕಾಲದ ವೆರೈಟಿ ಡಿಸೈನ್ ಎಲ್ಲವೂ ನಮ್ಮ ಬಳಿ ಇರಬೇಕೆಂದು ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಇಲ್ಲೊಬ್ಬ ಕಲಾವಿದ ಬಂಗಾರದ ಕಿವಿಯೋಲೆ ತಯಾರಿ ಮಾಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಜನರು ಮೆಚ್ಚುಗೆ ಗಳಿಸಿದ್ದಾನೆ.

ಆಭರಣ ಪ್ರೀಯರೇ, ಚಿನ್ನ ಯಾವ ರೀತಿ ತಯಾರಿ ಆಗುತ್ತೆ ನೋಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 04, 2023 | 3:43 PM

ಸಾಮಾನ್ಯವಾಗಿ ಚಿನ್ನ ಇಷ್ಟಪಡದವರು ಯಾರಿದ್ದಾರೆ ಹೇಳಿ! ಅದರಲ್ಲಂತೂ ಮಹಿಳೆಯರಿಗೆ ಆಭರಣಗಳೆಂದರೆ ಬಲು ಪ್ರೀತಿ. ಹಳೆ ಕಾಲದ ಒಡವೆ, ಈಗಿನ ಕಾಲದ ವೆರೈಟಿ ಡಿಸೈನ್ ಎಲ್ಲವೂ ನಮ್ಮ ಬಳಿ ಇರಬೇಕೆಂದು ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಅದರಲ್ಲಂತೂ ಪ್ರಪಂಚದ ಇತಿಹಾಸದಲ್ಲಿ ಆಭರಣಗಳ ಮೂಲವನ್ನು ಕಂಡು ಹಿಡಿಯುವುದು ಕಷ್ಟ. ಇವುಗಳ ಬಳಕೆ ಶಿಲಾಯುಗದಲ್ಲೂ ಇತ್ತು. ಕಂಚಿನ ಯುಗಕ್ಕೂ ಮೊದಲು ಚಿನ್ನದ ಒಡವೆಗಳು ಪ್ರಚಲಿತವಾಗಿದ್ದವು ಎಂದು ತಿಳಿದು ಬಂದಿದೆ. ಹಾಗಾಗಿ ನಾವು ಮಾತ್ರವಲ್ಲ ಎಷ್ಟೋ ತಲೆಮಾರುಗಳಿಂದ ಚಿನ್ನವನ್ನು ಪ್ರೀತಿಸುತ್ತಾ ಬಂದವರಿದ್ದಾರೆ. ಈಗಂತೂ ಚಿನ್ನದ ಅಂಗಡಿಗಳಿಗೆ ಬರವಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ನೀವು ಆಭರಣಗಳನ್ನು ಮಾಡಿಸಿಕೊಳ್ಳಬಹುದು.

ಆದರೆ ಎಂದಾದರೂ ಈ ಆಭರಣಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ನೋಡಿದ್ದೀರಾ? ನೋಡಿದರೆ ನೀವು ದಂಗಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮತ್ತು ಚಿನ್ನವನ್ನು ಕೊಳ್ಳುವ ಕೆಲವರಿಗೆ ಈ ಬಗ್ಗೆ ಮಾಹಿತಿ ಇರಬಹುದು ಆದರೆ ಎಲ್ಲರಿಗೂ ಅದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಬಂಗಾರದ ಮಾಟ, ಅದರ ನೋಟ ಇಷ್ಟ ಪಟ್ಟು ತರುತ್ತೇವೆ ಆದರೆ ಅದರ ಹಿಂದಿನ ಶ್ರಮವನ್ನು ನಾವು ಗಮನಿಸಿರುವುದಿಲ್ಲ. ಒಂದು ಅಂದವಾದ ಆಭರಣ ತೊಟ್ಟಾಗ, ಎಲ್ಲರೂ ಆ ಆಭರಣವನ್ನು ಹೊಗಳುವಾಗ ಒಮ್ಮೆಯಾದರೂ ಇದನ್ನು ತಯಾರಿಸುವವನಿಗೆ ಧನ್ಯವಾದ ಹೇಳಲೇಬೇಕು. ಹಾಗಾದರೆ ಇದನ್ನು ಹೇಗೆ ತಯಾರಿಸುತ್ತಾರೆ? ಡಿಸೈನ್ ಗಳನ್ನೂ ಯಾವ ರೀತಿ ಮಾಡಬಹುದು ಎಂಬ ಕುತೂಹಲ ನಿಮಗಿದ್ದಲ್ಲಿ ಈ ವಿಡಿಯೋವನ್ನು ತಪ್ಪದೇ ನೋಡಿ.

ಇದನ್ನೂ ಓದಿ: ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸಿದ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ: ಬಿಜೆಪಿ ನಾಯಕಿಯ ಬಂಧನ

ವಿಡಿಯೋ ಇಲ್ಲಿದೆ ನೋಡಿ

ಕಾರ್ತಿಕ್ ಮೊಂಡಲ್ (Kartick Mondal (Gold)) ಎಂಬ ಯೂಟ್ಯೂಬ್​​​​​​ ಶಾರ್ಟ್ಸ್​​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು 171 ಸಾವಿರಕ್ಕೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ. ಈ ವಿಡಿಯೋದಲ್ಲಿ ಕಿವಿಯೋಲೆ ಮಾಡುತ್ತಿದ್ದು ಸುಂದರವಾದ ವಿನ್ಯಾಸದಲ್ಲಿ ಮೂಡಿ ಬಂದಿದೆ. ಚಿನ್ನದ ಓಲೆ ಇಷ್ಟಪಡುವವರು ಅದನ್ನು ತಯಾರಿಸುವ ರೀತಿಯನ್ನೂ ನೋಡಬಹುದಾಗಿದೆ. ಈ ಶಾರ್ಟ್ಸ್​​​ಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಈ ರೀತಿಯ ಇನ್ನು ಹೆಚ್ಚಿನ ವಿಡಿಯೋ ಬರಲಿ ಎಂದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:42 pm, Sat, 4 November 23

ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ