Easy rangoli ideas: ಸುಲಭವಾಗಿ ರಂಗೋಲಿ ಹಾಕಲು ಕಲಿಯಬೇಕಾ? ಹಾಗಾದರೆ ತಪ್ಪದೆ ಈ ವಿಡಿಯೋ ನೋಡಿ!

ರಂಗೋಲಿ ಹಾಕುವ ಸಂಪ್ರದಾಯವನ್ನು ಇನ್ನೂ ಕೂಡ ಪಾಲಿಸಿಕೊಂಡು ಬರಲಾಗುತ್ತಿದೆ. ಮೊದಲು ಹಿಟ್ಟನ್ನು ಬಳಸಿ ಸುಂದರವಾದ ಚಿತ್ರ ಬಿಡಿಸುತ್ತಿದ್ದರು ಈಗ ರಂಗೋಲಿ ಪುಡಿಯನ್ನು ಬಳಸುತ್ತಾರೆ. ಹಾಗಾಗಿ ಪ್ರತಿ ದಿನ ಮನೆ ಮುಂದೆ ಸುಂದರವಾದ ರಂಗೋಲಿ ಹಾಕುವವರಿಗೆ ಎಷ್ಟು ರೀತಿಯ ಡಿಸೈನ್ ಗೊತ್ತಿದ್ದರೂ ಸಾಲುವುದಿಲ್ಲ. ಅದಕ್ಕಾಗಿಯೇ ಸುಲಭ ಮತ್ತು ಸರಳವಾಗಿ ಇರುವಂತ ರಂಗೋಲಿಯನ್ನು ಮನೆ ಮುಂದೆ ಹಾಕಲು ಹೆಂಗಳೆಯರು ಇಷ್ಟ ಪಡುತ್ತಾರೆ.

Easy rangoli ideas: ಸುಲಭವಾಗಿ ರಂಗೋಲಿ ಹಾಕಲು ಕಲಿಯಬೇಕಾ? ಹಾಗಾದರೆ ತಪ್ಪದೆ ಈ ವಿಡಿಯೋ ನೋಡಿ!
Easy rangoli ideasImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Nov 05, 2023 | 2:26 PM

ಹಿಂದಿನ ಕಾಲದಿಂದಲೂ ಇಂದಿನವರೆಗೂ ರಂಗೋಲಿ ಹಾಕುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಮೊದಲು ಹಿಟ್ಟನ್ನು ಬಳಸಿ ಸುಂದರವಾದ ಚಿತ್ರ ಬಿಡಿಸುತ್ತಿದ್ದರು ಈಗ ರಂಗೋಲಿ ಪುಡಿಯನ್ನು ಬಳಸುತ್ತಾರೆ. ಹಾಗಾಗಿ ಪ್ರತಿ ದಿನ ಮನೆ ಮುಂದೆ ಸುಂದರವಾದ ರಂಗೋಲಿ ಹಾಕುವವರಿಗೆ ಎಷ್ಟು ರೀತಿಯ ಡಿಸೈನ್ ಗೊತ್ತಿದ್ದರೂ ಸಾಲುವುದಿಲ್ಲ. ಅದಕ್ಕಾಗಿಯೇ ಸುಲಭ ಮತ್ತು ಸರಳವಾಗಿ ಇರುವಂತ ರಂಗೋಲಿಯನ್ನು ಮನೆ ಮುಂದೆ ಹಾಕಲು ಹೆಂಗಳೆಯರು ಇಷ್ಟ ಪಡುತ್ತಾರೆ. ಅಂತವರಿಗಾಗಿ ಹಲವು ರೀತಿಯ ವಿಡಿಯೋ ಲಭ್ಯವಿದ್ದರೂ ಕೂಡ, ಕಷ್ಟಕರವಲ್ಲದ ಹಾಗೂ ಸುಂದರವಾಗಿ ಸರಳವಾಗಿ ಹಾಕುವ ರಂಗೋಲಿ ಎಲ್ಲರ ಮನಗೆಲ್ಲುತ್ತದೆ.

ಇಷ್ಟೆಲಾ ಪೀಠಿಕೆ ಹಾಕಿದ ಮೇಲೆ ವಿಷಯ ಏನೆಂದು ಹೇಳಲೇಬೇಕಲ್ಲವೇ! @RutusRangoli ಎಂಬ ಯೂಟ್ಯೂಬ್​​​​​​ ಶಾರ್ಟ್ಸ್​​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದ ಹಲವಾರು ರೀತಿಯ ರಂಗೋಲಿ ಹಾಕುವ ವಿಧಾನಗಳನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಏನಿದೆ ವಿಶೇಷ ಅಂತೀರಾ. ನೀವು ಕೈಯಲ್ಲಿ ಚುಕ್ಕೆ ಇಡುವ ಕೆಲಸವಿಲ್ಲ. ಗೆರೆ ಉದ್ದ ಗಿಡ್ಡ, ಚುಕ್ಕೆ ಆಚೆ ಈಚೆ ಆಯಿತು ಎಂಬ ಚಿಂತೆ ಬೇಕಾಗಿಲ್ಲ. ಹಾಗಾದರೆ ಇನ್ನು ಹೇಗೆ ರಂಗೋಲಿ ಹಾಕಬೇಕು ಅಂದುಕೊಳ್ಳುತ್ತೀರಾ? ಎಣ್ಣೆ, ಪೆಟ್ರೋಲ್ ಸೋರದಂತೆ ತಡೆಯಲು ಒಂದು ರೀತಿಯ ಕೊಳವೆಯಾಕೃತಿಯ ಪುನಯಲ್ (ಆಡು ಭಾಷೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ) ಬಳಸಲಾಗುತ್ತದೆ ಅದರಲ್ಲಿ ರಂಗೋಲಿ ಹಿಟ್ಟನ್ನು ತುಂಬಿ, ಅದು ಕೆಳಗೆ ಬೀಳದಂತೆ ಒಂದು ಬೆರಳನ್ನು ಅಡ್ಡವಾಗಿ ಹಿಡಿದುಕೊಳ್ಳಬೇಕು. ಬಳಿಕ ನಿಮಗೆ ಬೇಕಾದ ಡಿಸೈನ್ ಗಳನ್ನೂ ಯಾವುದೇ ಚುಕ್ಕಿಯ ಸಹಾಯವಿಲ್ಲದೆ ಬಿಡಿಸಬಹುದು. ಹೇಗೆ ಮಾಡಬೇಕು ಎಂಬುದನ್ನು ನೀವು ಶಾರ್ಟ್ಸ್ ನೋಡುವ ಮೂಲಕ ಕಲಿಯಬಹುದು. ಹಾಗಾದರೆ ಇನ್ನೇನು ತಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.

ಇದನ್ನೂ ಓದಿ: ದೀಪಾವಳಿಗೆ ಮನೆ ಶುಚಿಗೊಳಿಸುವಾಗ ಈ ವಸ್ತುಗಳನ್ನು ಹೊರಗೆ ಎಸೆಯಬೇಡಿ

ಈ ಶಾರ್ಟ್ಸ್ 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಹಲವಾರು ಜನ ಈ ರಂಗೋಲಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರಂಗೋಲಿ ದೀಪಾವಳಿಗೆ ನಿಮ್ಮ ಮನೆ ಮುಂದೆ ಹಾಕಲು ಪ್ರಶಸ್ತವಾಗಿದೆ ಎಂಬುದು ಕೆಲವರ ಅಭಿಪ್ರಾಯ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 2:21 pm, Sun, 5 November 23

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ