Chandrayaana 3: ಬಣ್ಣದ ರಂಗೋಲಿಯಲ್ಲಿ ಅರಳಿದ ‘ವಿಕ್ರಮ್ ಲ್ಯಾಂಡರ್’; ಇಲ್ಲಿದೆ ನೋಡಿ

Chandrayaana 3: ಬಣ್ಣದ ರಂಗೋಲಿಯಲ್ಲಿ ಅರಳಿದ ‘ವಿಕ್ರಮ್ ಲ್ಯಾಂಡರ್’; ಇಲ್ಲಿದೆ ನೋಡಿ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 23, 2023 | 4:52 PM

ಹುಬ್ಬಳ್ಳಿಯ ಶಾಂತಿನಗರ ನಿವಾಸಿ ದಿನೇಸ್​ ಎಂಬುವವರು ರಂಗೋಲಿಯಲ್ಲಿ ಚಂದ್ರಯಾನ3ರ ಚಿತ್ತಾರ ಅರಳಿಸಿದ್ದಾರೆ. ಹೌದು, ಇನ್ನೇನು ಕೆಲ ಹೊತ್ತಿನಲ್ಲಿಯೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದ್ದು, ಬಣ್ಣ ಬಣ್ಣದ ಚಿತ್ತಾರದಲ್ಲಿ ರೋವರ್ ರಂಗವಲ್ಲಿ ಬಿಡಿಸಿ ವಿಭಿನ್ನವಾಗಿ ಇಸ್ರೊ ವಿಜ್ಞಾನಿಗಳಿಗೆ ಶುಭ ಹಾರೈಸಿದ್ದಾರೆ.

ಹುಬ್ಬಳ್ಳಿ, ಆ.23: ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ (Vikram lander) ಇಳಿಯಲಿದೆ.​ ಇದನ್ನು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ವೀಕ್ಷಣೆ ಮಾಡಲಿದ್ದಾರೆ. ಇನ್ನು ಹುಬ್ಬಳ್ಳಿಯ ಶಾಂತಿನಗರ ನಿವಾಸಿ ದಿನೇಶ್ ಎಂಬುವವರು ರಂಗೋಲಿಯಲ್ಲಿ ಚಂದ್ರಯಾನ3ರ ಚಿತ್ತಾರ ಬಿಡಿಸುವ ಮೂಲಕ ವಿಭಿನ್ನವಾಗಿ ಹಾರೈಸಿದ್ದಾರೆ. ಬಣ್ಣ ಬಣ್ಣದ ಚಿತ್ತಾರದಲ್ಲಿ ರೋವರ್ ರಂಗವಲ್ಲಿ ಬಿಡಿಸಿ ವಿಭಿನ್ನವಾಗಿ ಇಸ್ರೊ ವಿಜ್ಞಾನಿಗಳಿಗೆ ಶುಭಹಾರೈಸಿದ್ದು, ತಮ್ಮ ಮನೆಯ ಆವರಣದಲ್ಲಿ ರೋವರ್, ಚಂದ್ರ ಹಾಗೂ ದೇವಿಯ ರಂಗವಲ್ಲಿ ಚಿತ್ರಬಿಡಿಸಿದ ದಿನೇಶ್, ತಮ್ಮ ಕಲೆಯ ಮೂಲಕ ಚಂದ್ರಯಾನ3 ಕ್ಕೆ ಶುಭಹಾರೈಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ