ಸಿಡಬ್ಲ್ಯುಎಮ್ಎ ಮುಂದೆ ಸಮರ್ಪಕವಾಗಿ ಸರ್ಕಾರ ವಾದ ಮಂಡಿಸದಿರೋದು ರಾಜ್ಯದ ಜನತೆಗೆ ಮಾರಕವಾಗಿದೆ: ಬಸವರಾಜ ಬೊಮ್ಮಾಯಿ, ಶಾಸಕ
ಭಾಷೆ-ನೆಲ-ಜಲದ ವಿಷಯದಲ್ಲಿ ನಾವೆಲ್ಲ ಒಂದು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ ಮತ್ತು ಮುಂದಿನ ಸಲ ಸಿಡಬ್ಲ್ಯುಎಮ್ ಎ ಎದುರು ವಾದ ಮಾಡುವಾಗ ಯಾವ ಕಾರಣಕ್ಕೂ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಬಾರದು ಅಂತ ಸರ್ಕಾರಕ್ಕೆ ತಾಕೀತು ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರು: ಕಾವೇರಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಹೊರಬಂದ ಬಳಿಕ ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರ (state government) ವಿಫಲವಾಗಿದೆ ಎಂದು ಹೇಳಿದರು. ತಮಿಳುನಾಡುಗೆ ನೀರು ಕಾವೇರಿ ನದಿ ನೀರನ್ನು ಬಿಡುವ ವಿಚಾರದಲ್ಲಿ ಸರ್ಕಾರ; ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದೊಂದಿಗೆ ವಾದಿಸುವಾಗ ಕರ್ನಾಟಕ ಜನತೆಯ ಹಿತ್ತಾಸಕ್ತಿಯನ್ನು ಸಮರ್ಪಕವಾಗಿ ಮಂಡಿಸಿಲ್ಲ, ಹಾಗಾಗಿ ಹತ್ತು ಸಾವಿರ ಕ್ಯೂಸೆಕ್ಸ್ ನಷ್ಟು ನೀರು ನೆರೆರಾಜ್ಯಕ್ಕೆ ಹರಿದು ಹೋಗಿದ್ದು ರಾಜ್ಯಕ್ಕೆ ಮಾರಕವಾಗಲಿದೆ ಎಂದು ಬೊಮ್ಮಾಯಿ ಹೇಳಿದರು. ಭಾಷೆ-ನೆಲ-ಜಲದ ವಿಷಯದಲ್ಲಿ ನಾವೆಲ್ಲ ಒಂದು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ ಮತ್ತು ಮುಂದಿನ ಸಲ ಸಿಡಬ್ಲ್ಯುಎಮ್ ಎ ಎದುರು ವಾದ ಮಾಡುವಾಗ ಯಾವ ಕಾರಣಕ್ಕೂ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಬಾರದು ಅಂತ ಸರ್ಕಾರಕ್ಕೆ ತಾಕೀತು ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ