ಜೂನ್ ನಿಂದ ಆಗಸ್ಟ್ ವರೆಗೆ ಕಾವೇರಿ ನದಿ ನೀರನ್ನು ಸುಪ್ರೀಮ್ ಕೋರ್ಟ್ ಆದೇಶಕ್ಕಿಂತ ಬಹಳ ಕಡಿಮೆ ಪ್ರಮಾಣ ತಮಿಳುನಾಡುಗೆ ಬಿಡಲಾಗಿದೆ: ಸಿದ್ದರಾಮಯ್ಯ, ಸಿಎಂ

ಜೂನ್ ನಿಂದ ಆಗಸ್ಟ್ ವರೆಗೆ ಕಾವೇರಿ ನದಿ ನೀರನ್ನು ಸುಪ್ರೀಮ್ ಕೋರ್ಟ್ ಆದೇಶಕ್ಕಿಂತ ಬಹಳ ಕಡಿಮೆ ಪ್ರಮಾಣ ತಮಿಳುನಾಡುಗೆ ಬಿಡಲಾಗಿದೆ: ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2023 | 4:28 PM

ಜುಲೈ ಹೊರತುಪಡಿಸಿದರೆ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕ್ಯಾಚ್ಮೆಂಟ್ ಕ್ಷೇತ್ರಗಳಲ್ಲಿ ಮಳೆಯ ಕೊರತೆಯಿಂದಾಗಿ ಕೆಅರ್ ಎಸ್, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ನೀರು ಕಡಿಮೆ ಹರಿದುಬಂದಿದೆ, ವಾಯ್ನಾಡ್ ನಲ್ಲೂ ಮಳೆಯ ಅಭಾವದ ಕಾರಣ ಕಬಿನಿ ಜಲಾಶಯದಲ್ಲಿ ನೀರು ಶೇಖರಣೆಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಕಾವೇರಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ, ಇಂದು ಸರ್ವಪಕ್ಷ ಸಭೆ (all party meet) ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ತಮಿಳುನಾಡುಗೆ 2018 ರ ಸುಪ್ರೀಮ್ ಕೋರ್ಟ್ ಕಾವೇರಿ ನದಿ ನೀರು ಹಂಚಿಕೆ ತೀರ್ಪಿನ (Cauvery River Water Distribution Verdict) ಪ್ರಕಾರ ಎಷ್ಟು ನೀರು ಬಿಡಬೇಕಿತ್ತು ಮತ್ತು ವಾಸ್ತವದಲ್ಲಿ ಎಷ್ಟು ಬಿಡಲಾಗಿದೆ ಅನ್ನೋದನ್ನು ವಿವರಿಸಿದರು. ಈ ಬಾರಿ ಮಳೆ ಕೊರತೆಯಿಂದಾಗಿ ತೀರ್ಪಿನ ಅನ್ವಯ ನೀರು ಬಿಡಲಾಗಿಲ್ಲ ಎಂದ ಮುಖ್ಯಮಂತ್ರಿ, ಜೂನ್ ತಿಂಗಳಲ್ಲಿ ತಮಿಳುನಾಡುಗೆ 9.19 ಟಿಎಂಸಿ ನೀರು ಬಿಡಬೇಕಿತ್ತು ಅದರೆ ಕರ್ನಾಟಕ 2.8 ಟಿಎಂಸಿ ನೀರನ್ನು ಮಾತ್ರ ಬಿಟ್ಟಿದೆ. ಹಾಗೆಯೇ, ಜುಲೈನಲ್ಲಿ 31.24 ಟಿಎಂಸಿ ಬದಲಿಗೆ 8.74 ಟಿಎಂಸಿ ನೀರು ಮತ್ತು ಆಗಸ್ಟ್ 22 ರವರೆಗೆ 45.95 ಟಿಎಂಸಿ ನೀರಿನ ಬದಲು 26.7 ಟಿಎಂಸಿ ನೀರನ್ನು ಮಾತ್ರ ಬಿಡಲಾಗಿದೆ ಎಂದು ಹೇಳಿದರು. ಜುಲೈ ಹೊರತುಪಡಿಸಿದರೆ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕ್ಯಾಚ್ಮೆಂಟ್ ಕ್ಷೇತ್ರಗಳಲ್ಲಿ ಮಳೆಯ ಕೊರತೆಯಿಂದಾಗಿ ಕೆಅರ್ ಎಸ್, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ನೀರು ಕಡಿಮೆ ಹರಿದುಬಂದಿದೆ, ವಾಯ್ನಾಡ್ ನಲ್ಲೂ ಮಳೆಯ ಅಭಾವದ ಕಾರಣ ಕಬಿನಿ ಜಲಾಶಯದಲ್ಲಿ ನೀರು ಶೇಖರಣೆಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ