ಕೊರತೆ ಮಳೆ ವರ್ಷವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ, ತಮಿಳುನಾಡು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ: ಡಿವಿ ಸದಾನಂದ ಗೌಡ, ಕೇಂದ್ರ ಸಚಿವ

ಕೊರತೆ ಮಳೆ ವರ್ಷವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ, ತಮಿಳುನಾಡು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ: ಡಿವಿ ಸದಾನಂದ ಗೌಡ, ಕೇಂದ್ರ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 23, 2023 | 3:07 PM

ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಗಣಿತದ ಲೆಕ್ಕಾಚಾರದ ಮೂಲಕ ಹೇಳಲಾಗದು, ಅದಕ್ಕಾಗಿ ಬೇರೆ ವಿಧಾನ ಅನುಸರಿಸಬೇಕು ಅಂತ ಅಪೆಕ್ಸ್ ಕೋರ್ಟ್​ಗೆ ಮನವಿ ಸಲ್ಲಿಸಬೇಕೆಂದು ಕೇಂದ್ರ ಸಚಿವ ಹೇಳಿದರು. ತಮಿಳುನಾಡು ರಾಜ್ಯದಲ್ಲಿರುವ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ, ಅವರು ಎಷ್ಟು ಪ್ರಮಾಣದಲ್ಲಿ ನೀರು ಬಳಸಿಕೊಂಡಿದ್ದಾರೆ, ಲಭ್ಯವಿರುವ ನೀರಿನ ಪ್ರಮಾಣ ಎಷ್ಟು ಅನ್ನೋದು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲ ಎಂದು ಸದಾನಂದ ಗೌಡ ಹೇಳಿದರು,

ಬೆಂಗಳೂರು: ತಮಿಳುನಾಡುಗೆ ಕಾವೇರಿ ನದಿ ನೀರು (Cauvery River Water) ಬಿಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಕರೆದ ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಡನೆ ಮಾತಾಡಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ (DV Sadananda Gowda), ಸುಪ್ರೀಮ್ ಕೋರ್ಟ್ ಆದೇಶವನ್ನು ಪಾಲಿಸುವುದು ಎಲ್ಲರ ಕರ್ತವ್ಯ ನಿಜವಾದರೂ, ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಬೇಕೆನ್ನುವುದು ಸರ್ವರೂ ಒಪ್ಪಿತ ಅಂಶವಾಗಿದೆ. ಬೆಂಗಳೂರಿನ 1.3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುವ ಅಂಶಕ್ಕೆ ಸರಕಾರ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. ಮಳೆ ಕೊರತೆ ವರ್ಷದ (ಡಿಸ್ಟ್ರೆಸ್ ಈಯರ್) ವ್ಯಾಖ್ಯಾನ ಸರಿಯಿಲ್ಲ, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಗಣಿತದ ಲೆಕ್ಕಾಚಾರದ ಮೂಲಕ ಹೇಳಲಾಗದು, ಅದಕ್ಕಾಗಿ ಬೇರೆ ವಿಧಾನ ಅನುಸರಿಸಬೇಕು ಅಂತ ಅಪೆಕ್ಸ್ ಕೋರ್ಟ್​ಗೆ ಮನವಿ ಸಲ್ಲಿಸಬೇಕೆಂದು ಕೇಂದ್ರ ಸಚಿವ ಹೇಳಿದರು. ತಮಿಳುನಾಡು ರಾಜ್ಯದಲ್ಲಿರುವ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ, ಅವರು ಎಷ್ಟು ಪ್ರಮಾಣದಲ್ಲಿ ನೀರು ಬಳಸಿಕೊಂಡಿದ್ದಾರೆ, ಲಭ್ಯವಿರುವ ನೀರಿನ ಪ್ರಮಾಣ ಎಷ್ಟು ಅನ್ನೋದು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲ, ಈ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಸದಾನಂದ ಗೌಡ ಹೇಳಿದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ