ಮನೆ ಮುಂದೆ ರಂಗೋಲಿ ಹಾಕುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಇವೆ! ಜೊತೆಗೆ ಗ್ರಹದೋಷ ನಿವಾರಣೆಯಾಗುತ್ತದೆ!
ರಂಗೋಲಿ ಹಾಕುವುದು ಅಂದರೆ ಅದು ಕೇವಲ ಪ್ರದರ್ಶನವಲ್ಲ. ರಂಗೋಲಿ ಹಾಕುವುದರ ಹಿಂದೆ ಯಾವಾಗಲೂ ಒಳ್ಳೆಯ, ಉದಾತ್ತ ಆಶಯ, ಉದ್ದೇಶವಿರುತ್ತದೆ. ಅದಕ್ಕೇ ಆಗಿನ ಕಾಲದಲ್ಲಿ ರಂಗೋಲಿಯನ್ನು ಅಕ್ಕಿ ಹಿಟ್ಟಿನಲ್ಲಿ ಹಾಕುತ್ತಿದ್ದರು. ನಮ್ಮ ಸುತ್ತಲಿನ ಎಲ್ಲಾ ಜೀವಿಗಳು ನಮ್ಮಂತೆಯೇ ಎಂದು ನಂಬಿರುವ ಧರ್ಮ ನಮ್ಮದು.
ಮನೆ ಮುಂದೆ ರಂಗೋಲಿ (rangoli) ಹಾಕುವುದು ಯಾಕೆ? ರಂಗೋಲಿ ಹಾಕುವ ಉದ್ದೇಶವೇನು ಗೊತ್ತಾ? ರಂಗೋಲಿಯ ಉದ್ದೇಶ ಮನ-ಮನೆಯನ್ನು ಸುಂದರಗೊಳಿಸುವುದಷ್ಟೇ ಅಲ್ಲ. ಸುಂದರ ರಂಗೋಲಿ ಹಾಕುವುದರ ಹಿಂದೆ ಹಲವು ಕಾರಣಗಳಿವೆ ಎನ್ನುತ್ತಾರೆ ತಜ್ಞರು. ಮಹಿಳೆಯರು ಮುಂಜಾನೆ ತಮ್ಮ ಮನೆಯಂಗಳ, ಮನೆ ಮುಂದಿನ ಜಾಗವನ್ನು ಗುಡಿಸಿ, ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಾರೆ. ಅದಾದ ಮೇಲೆ ಸುಂದರವಾದ ರಂಗೋಲಿಯನ್ನು ಬಿಡಿಸುವುದು ಸಾಮಾನ್ಯ. ಕೆಲವೊಂದು ದಿನ ದೊಡ್ಡ ರಂಗೋಲಿಯನ್ನು ಹಾಕಿದರೆ.. ಕೆಲವೊಮ್ಮೆ ಚಿಕ್ಕ ಚಿಕ್ಕ ರಂಗೋಲಿಯನ್ನು ಹಾಕುತ್ತಾರೆ.. ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ರಂಗುರಂಗಿನ ಬಣ್ಣಗಳಿಂದ ರಂಗೋಲಿ ಅಲಂಕರಿಸುತ್ತಾರೆ (spiritual).
ಕೆಲವು ರಂಗೋಲಿಗಳಲ್ಲಿ ಪಕ್ಷಿಗಳು, ಪ್ರಾಣಿಗಳು ಇತ್ಯಾದಿಗಳ ಚಿತ್ರಣಗಳೂ ಮೂಡಿಬರುತ್ತವೆ. ಇನ್ನು ಕೆಲವು ಸಂಕೀರ್ಣವಾದ ರೇಖೆಗಳಿಂದ ಮಾಡಲ್ಪಟ್ಟಿರುತ್ತವೆ. ಒಟ್ಟಿನಲ್ಲಿ ರಂಗೋಲಿಯು ಮನೆ ಮುಂದಿನ ಬಾಗಿಲನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ನಮ್ಮಲ್ಲಿ ಪುರಾತನ ಕಾಲದಿಂದಲೂ ಮನೆ ಮುಂದೆ ರಂಗೋಲಿ ಹಾಕುವುದು ವಾಡಿಕೆ. ಮನುಷ್ಯ ಗುಹೆಗಳಲ್ಲಿ ವಾಸಿಸುತ್ತಿದ್ದ ಕಾಲದಿಂದಲೂ ಗುಹೆ ಮುಂದೆ ರಂಗೋಲಿ ಚಿತ್ತಾರ ಬಿಡಿಸುವ ವಾಡಿಕೆಯಿದೆಯಂತೆ.
ನಾಟ್ಯಶಾಸ್ತ್ರ, ರಾಮಾಯಣ, ಭಾಗವತ ಮತ್ತು ಮಹಾಭಾರತದಲ್ಲಿಯೂ ರಂಗೋಲಿ ಚಿತ್ತಾರವನ್ನು ಉಲ್ಲೇಖಿಸಲಾಗಿದೆ. ಮನೆ ಮುಂದೆ ರಂಗೋಲಿ ಯಾಕುವುದು ಯಾಕೆ? ರಂಗೋಲಿ ಹಾಕುವ ಉದ್ದೇಶವೇನು ಗೊತ್ತಾ? ರಂಗೋಲಿಯ ಉದ್ದೇಶ ಮನೆಯನ್ನು ಸುಂದರಗೊಳಿಸುವುದಷ್ಟೇ ಅಲ್ಲ. ಸುಂದರ ರಂಗೋಲಿ ಹಾಕುವುದರ ಹಿಂದೆ ಹಲವು ಕಾರಣಗಳಿವೆ ಎನ್ನುತ್ತಾರೆ ಹಿರಿಯರು. ಚಿತ್ತಾಕರ್ಷಕ ರಂಗೋಲಿಯಿಂದ ಅನೇಕ ಆರೋಗ್ಯ ಪ್ರಯೋಜನಗಳೂ (health benefits) ಇವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ…
ಸಂಪತ್ತು, ಸೌಂದರ್ಯದ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸುವಾಗ, ಮನೆಯು ಸ್ವಚ್ಛವಾಗಿ ಮತ್ತು ಸುಂದರವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಲಕ್ಷ್ಮಿ ದೇವಿಯನ್ನು ನಮ್ಮ ಮನೆಗೆ ಸ್ವಾಗತಿಸಲು ರಂಗೋಲಿಯಿಂದ ಸಿಂಗರಿಸಲಾಗುತ್ತದೆ. ಬಣ್ಣಗಳು, ಸ್ವಸ್ತಿಕ, ಗೋಪದ್ಮ, ಶಂಖದಂತಹ ವಿನ್ಯಾಸಗಳನ್ನು ನೋಡಿದಾಗ ವ್ಯಕ್ತಿಯ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಮನುಷ್ಯ ಸಕಾರಾತ್ಮಕ ಆಲೋಚನೆಗಳೊಂದಿಗೆ ಮನೆಯನ್ನು ಪ್ರವೇಶಿಸುತ್ತಾನೆ. ಇದರಿಂದ ಅವನ ಮನ:ಸ್ಥಿತಿಯನ್ನು ಸುಧಾರಿಸುತ್ತದೆ.
ರಂಗೋಲಿ ಹಾಕುವುದು ಅಂದರೆ ಅದು ಕೇವಲ ಪ್ರದರ್ಶನವಲ್ಲ. ರಂಗೋಲಿ ಹಾಕುವುದರ ಹಿಂದೆ ಯಾವಾಗಲೂ ಒಳ್ಳೆಯ, ಉದಾತ್ತ ಆಶಯ, ಉದ್ದೇಶವಿರುತ್ತದೆ. ಅದಕ್ಕೇ ಆಗಿನ ಕಾಲದಲ್ಲಿ ರಂಗೋಲಿಯನ್ನು ಅಕ್ಕಿ ಹಿಟ್ಟಿನಲ್ಲಿ ಹಾಕುತ್ತಿದ್ದರು. ನಮ್ಮ ಸುತ್ತಲಿನ ಎಲ್ಲಾ ಜೀವಿಗಳು ನಮ್ಮಂತೆಯೇ ಎಂದು ನಂಬಿರುವ ಧರ್ಮ ನಮ್ಮದು. ಅದಕ್ಕೇ ಮನೆಯ ಮುಂದೆ ಅಕ್ಕಿಹಿಟ್ಟು, ಅದರ ಉಂಡೆಗಳನ್ನು ಹಾಕಿ ಹಕ್ಕಿ, ಕಾಗೆ, ಅಳಿಲು, ಇರುವೆ, ಗುಬ್ಬಚ್ಚಿ, ಪಾರಿವಾಳ ಮತ್ತಿತರ ಕೀಟಗಳ ಹೊಟ್ಟೆ ತುಂಬಿಸುತ್ತಿದ್ದರು. ರಂಗೋಲಿ ಎಂಬುದು ಹಂಚಿ ತಿನ್ನುವ ಉದಾತ್ತ ಉದ್ದೇಶದ ಕನ್ನಡಿಯಂತಿದೆ. ಹೀಗೆ ಮಾಡುವುದರಿಂದ ಸಮಾಜಸೇವೆಯ ಜೊತೆಗೆ ಒಂದಕ್ಕೊಂದು ಕೊಂಡಿಯಾಗಿ ಗ್ರಹದೋಷಗಳೂ ದೂರವಾಗುತ್ತವೆ. ಮನೆ ಮುಂದೆ ಸ್ವಚ್ಛತೆ ಜೊತೆಗೆ ವಾತಾವರಣವನ್ನು ಆಹ್ಲಾದಕರವಾಗಿಟ್ಟುಕೊಳ್ಳಬಹುದು.
ಮಹಿಳೆಯರ ಮೆದುಳನ್ನು ಚುರುಕಾಗಿಡುವಲ್ಲಿ ಆರು ಗಣಿತ ಕೌಶಲ್ಯಗಳನ್ನು ಒಳಗೊಂಡಿದೆ. ಆ ಆರು ಯಾವುವೆಂದರೆ – ಎಣಿಕೆ, ಅಳತೆ, ವಿನ್ಯಾಸ, ಗುರುತಿಸುವಿಕೆ, ಪ್ರಯೋಗ ಮತ್ತು ವಿವರಿಸುವುದು. ಸುಂದರವಾದ ಜ್ಯಾಮಿತೀಯ ಮಾದರಿಗಳನ್ನು ರಚಿಸಲು ಚುಕ್ಕೆಗಳು, ಶೃಂಗಗಳು, ಛಾಪುಗಳು, ಪಂಕ್ತಿಗಳು, ರೇಖೆಗಳ ಎಣಿಕೆಯನ್ನು ಇಡಬೇಕು. ಇದೆಲ್ಲವೂ ಮೆದುಳಿಗೆ ಪ್ರಚೋದಕದ ಉತ್ತಮ ವ್ಯಾಯಾಮವಾಗಿದೆ. ಸುಂದರವಾದ ರಂಗೋಲಿ ನೋಡಿದಾಗ ಅದು ನಮ್ಮ ಮನಸ್ಸನ್ನು ಆಹ್ಲಾದಕರವಾಗಿಸುತ್ತದೆ/ ಪ್ರಫುಲ್ಲಗೊಳಿಸುತ್ತದೆ. ಬೆಳಗ್ಗೆ ಏಳುವುದು ಮಹಿಳೆಯರಿಗೆ ದೈಹಿಕ ವ್ಯಾಯಾಮದ ಜೊತೆಗೆ ಮಾನಸಿಕ ವ್ಯಾಯಾಮವೂ ಆಗುತ್ತದೆ ಎಂಬುದನ್ನು ಮರೆಯಬಾರದು.
ಇನ್ನು ತ್ರಿಕೋನಗಳ ಜ್ಯಾಮಿತೀಯ ರಂಗೋಲಿ ವಿನ್ಯಾಸವು ದುಷ್ಟಶಕ್ತಿಗಳನ್ನು ಓಡಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸಂಪತ್ತಿನ ಸಂಕೇತವಾದ ಲಕ್ಷ್ಮಿ ದೇವಿಯನ್ನು ಮನೆಗೆ ಸ್ವಾಗತಿಸುತ್ತದೆ ಎಂಬ ನಂಬಿಕೆಯಿದೆ. ರಂಗೋಲಿ ಹಾಕುವುದನ್ನು ಉತ್ತಮ ದೈಹಿಕ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ರಂಗೋಲಿ ಬಿಡಿಸಲು ದೇಹವನ್ನು ಬಗ್ಗಿಸಬೇಕು. ಈ ಅಭ್ಯಾಸವು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಸೊಂಟಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ರಂಗೋಲಿಯಲ್ಲಿ ತ್ರಿಕೋನಗಳನ್ನು ಚಿತ್ರಿಸಲು ಹೆಚ್ಚಿನ ಗಮನ ಮತ್ತು ತಾಳ್ಮೆ ಅಗತ್ಯವಿರುತ್ತದೆ.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ