AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ

Daily Horoscope: ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ

ಗಂಗಾಧರ​ ಬ. ಸಾಬೋಜಿ
|

Updated on: Jun 16, 2025 | 6:43 AM

ಜೂನ್ 16ರ ದಿನದ ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಯವರಿಗೆ ಈ ದಿನ ಹೇಗೆ ಇರಲಿದೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಅವರು ನೀಡಿದ್ದಾರೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ ಮತ್ತು ಮಂತ್ರವನ್ನು ಸಹ ಸೂಚಿಸಲಾಗಿದೆ.

ಬೆಂಗಳೂರು, ಜೂನ್​ 16: ಈ ದಿನ ವಿಶ್ವಾವಸು ಸಂವತ್ಸರ, ಉತ್ತರಾಯಣ, ಜೈಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಪಂಚಮಿ, ಧನಿಷ್ಠಾ ನಕ್ಷತ್ರ, ವೈದೃತಿ ಯೋಗ ಮತ್ತು ತೈತಲ ಕರಣ. ರಾಹುಕಾಲ ಬೆಳಗ್ಗೆ 7:31 ರಿಂದ 9:06 ರವರೆಗೆ. ಸಂಕಲ್ಪಕಾಲ 9:06 ರಿಂದ 10:43 ರವರೆಗೆ ಶುಭಕರವಾಗಿದೆ. ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ ಮಾಡುತ್ತಿದೆ. ಕೆಲಸಗಳಲ್ಲಿ ಧೈರ್ಯದಿಂದ ಮುನ್ನಡೆದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಆದರೆ ಊಟೋಪಚಾರದಲ್ಲಿ ಜಾಗ್ರತೆ ಅಗತ್ಯ. ಗಂಡ-ಹೆಂಡತಿಯರ ನಡುವೆ ಕಲಹ ಸಾಧ್ಯತೆಯಿದೆ. “ಓಂ ನಮೋ ಭಗವತೇ ರುದ್ರಾಯ” ಮಂತ್ರ ಜಪಿಸುವುದು ಶುಭಕರ.