AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕೇವಲ ಶುಭ ಕಾರ್ಯಗಳಿಗೆ ಮಾತ್ರವಲ್ಲ, ದೈನಂದಿನ ಜೀವನದಲ್ಲಿ ಅಕ್ಷತೆಯ ಪ್ರಾಮುಖ್ಯತೆ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ಅಕ್ಷತೆಯ ಅಪಾರ ಮಹತ್ವವನ್ನು ವಿವರಿಸಿದ್ದಾರೆ. ಮನೆಯಲ್ಲಿ ಅಕ್ಷತೆ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಪ್ರಯಾಣದ ಸಮಯದಲ್ಲಿ ಅಕ್ಷತೆ ಒಯ್ಯುವುದು ಶುಭ ಎಂದು ನಂಬಲಾಗಿದೆ. ವಿವಿಧ ಮಠಗಳಿಂದ ಪಡೆದ ಅಕ್ಷತೆಯನ್ನು ಸೇರಿಸಿಡುವುದರಿಂದ ಪ್ರಭಾವ ಹೆಚ್ಚಾಗುತ್ತದೆ. ಆಚಾರ-ವಿಚಾರ ಪಾಲನೆ ಮತ್ತು ಭಕ್ತಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

Daily Devotional: ಕೇವಲ ಶುಭ ಕಾರ್ಯಗಳಿಗೆ ಮಾತ್ರವಲ್ಲ, ದೈನಂದಿನ ಜೀವನದಲ್ಲಿ ಅಕ್ಷತೆಯ ಪ್ರಾಮುಖ್ಯತೆ
Akshate's Significance
ಅಕ್ಷತಾ ವರ್ಕಾಡಿ
|

Updated on: Jun 15, 2025 | 9:22 AM

Share

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅಕ್ಷತೆಯ ಅಪಾರ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಅಕ್ಷತೆ ಎಂದರೆ ಪೂಜೆಯಲ್ಲಿ ಬಳಸುವ ಅಕ್ಕಿ. ಇವುಗಳನ್ನು ಹಿಂದೂ ಸಂಸ್ಕೃತಿಯಲ್ಲಿ ಶುಭಕಾರ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಅಕ್ಷತೆಯನ್ನು ಕೇವಲ ಶುಭಕಾರ್ಯಗಳಿಗೆ ಮಾತ್ರ ಸೀಮಿತಗೊಳಿಸದೆ, ದೈನಂದಿನ ಜೀವನದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಗುರೂಜಿ ಹೇಳುವಂತೆ, ಮನೆಯಲ್ಲಿ ಅಕ್ಷತೆಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಅಕ್ಷತೆಯನ್ನು ಇಟ್ಟುಕೊಳ್ಳುವುದರಿಂದ ಮಾನಸಿಕ ಶಾಂತಿಯನ್ನು ಪಡೆಯಬಹುದು ಮತ್ತು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಬಹುದು ಎಂಬ ನಂಬಿಕೆಯಿದೆ.

ವಿಡಿಯೋ ಇಲ್ಲಿದೆ ನೋಡಿ:

ಪ್ರಯಾಣದ ಸಮಯದಲ್ಲಿ ಅಥವಾ ಪರೀಕ್ಷೆಗಳ ಸಮಯದಲ್ಲಿ ಅಕ್ಷತೆಯನ್ನು ಒಯ್ಯುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅಕ್ಷತೆಯನ್ನು ಬಳಸುವುದರಿಂದ ಅವರ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಕೂಡ ಇದೆ. ಪುಸ್ತಕಗಳನ್ನು ಇಟ್ಟಿರುವ ಸ್ಥಳದಲ್ಲಿ ಅಕ್ಷತೆಯನ್ನು ಇಟ್ಟುಕೊಂಡರೆ ಅಧ್ಯಯನಕ್ಕೆ ಉತ್ತೇಜನ ದೊರೆಯುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ವಿವಿಧ ಮಠಗಳಿಂದ ಪಡೆದ ಅಕ್ಷತೆ ಮತ್ತು ರಾಯರ ಅಕ್ಷತೆಯನ್ನು ಸೇರಿಸಿ ಇಟ್ಟುಕೊಳ್ಳುವುದರಿಂದ ಅದರ ಪ್ರಭಾವ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಆಚಾರ-ವಿಚಾರ, ಸಂಸ್ಕೃತಿಯನ್ನು ಪಾಲಿಸುವುದು ಮತ್ತು ದೈವಭಕ್ತಿಯಿಂದ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ