AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ, ಇಲ್ಲಿದೆ ವಿವರ

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 11: ರಾಜ್ಯದ ಪ್ರಮುಖ ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರಿನ ಒಳಹರಿವು ಮುಂದುವರಿದಿದೆ. ಕೆಆರ್‌ಎಸ್‌ನಲ್ಲಿ 30.905 ಟಿಎಂಸಿ, ಕಬಿನಿಯಲ್ಲಿ 18.71 ಟಿಎಂಸಿ ಹಾಗೂ ಹೇಮಾವತಿಯಲ್ಲಿ 31.53 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳ ನೀರಿನ ಮಟ್ಟವೂ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

Karnataka Dam Water Level: ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ, ಇಲ್ಲಿದೆ ವಿವರ
ಕಬಿನಿ ಡ್ಯಾಂ (ಸಂಗ್ರಹ ಚಿತ್ರ)Image Credit source: tv9
ಗಣಪತಿ ಶರ್ಮಾ
|

Updated on:Aug 11, 2026 | 10:34 AM

Share

ಮುಖ್ಯಾಂಶಗಳು

  • ಕೆಆರ್‌ಎಸ್‌ನಲ್ಲಿ 30.905 ಟಿಎಂಸಿ ನೀರು ಸಂಗ್ರಹ
  • ಗರಿಷ್ಠ ಮಟ್ಟದ ಸಮೀಪಕ್ಕೆ ಕಬಿನಿ ಜಲಾಶಯ
  • ಆಲಮಟ್ಟಿ, ಬಸವಸಾಗರದಲ್ಲೂ ಭಾರಿ ಒಳಹರಿವು

ಬೆಂಗಳೂರು, ಆಗಸ್ಟ್ 11: ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರಿದಿದ್ದು, ಕೆಆರ್‌ಎಸ್, ಕಬಿನಿ, ಹೇಮಾವತಿ, ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ಉತ್ತಮ ಪ್ರಮಾಣದ ನೀರು (Dam Water Level) ಸಂಗ್ರಹವಾಗಿದೆ. ಕೆಆರ್‌ಎಸ್‌ನಲ್ಲಿ ಇಂದಿನ ನೀರಿನ ಮಟ್ಟ 109.08 ಅಡಿಯಷ್ಟಿದ್ದು, ಕಬಿನಿ ಜಲಾಶಯವೂ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ. ಇಂದಿನ ನೀರಿನ ಮಟ್ಟ 109.08 ಅಡಿ ಇದ್ದು, ಜಲಾಶಯಕ್ಕೆ 8,357 ಕ್ಯೂಸೆಕ್ ಒಳಹರಿವು ಇದೆ. 2,325 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಸದ್ಯ 30.905 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯ ನೀರಿನ ಮಟ್ಟ

ಮೈಸೂರು ಭಾಗದ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ 82.76 ಅಡಿ ತಲುಪಿದೆ. ಇದರ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಜಲಾಶಯದಲ್ಲಿ 18.71 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ. ಜಲಾಶಯಕ್ಕೆ 9,660 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 11,583 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಸದ್ಯ ನೀರು ಹರಿಸಲಾಗುತ್ತಿಲ್ಲ. ಜಲಾನಯನ ಪ್ರದೇಶದಲ್ಲಿ 5 ಮಿ.ಮೀ. ಮಳೆ ದಾಖಲಾಗಿದೆ.

ಹೇಮಾವತಿ ಜಲಾಶಯ ನೀರಿನ ಮಟ್ಟ

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ). ಇಂದಿನ ನೀರಿನ ಮಟ್ಟ 2915.43 ಅಡಿ, ಜಲಾಶಯದಲ್ಲಿ 31.53 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 3,117 ಕ್ಯೂಸೆಕ್ ಒಳಹರಿವು ಇದ್ದು, 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿಲ್ಲ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2921.95 ಅಡಿ (37.055 ಟಿಎಂಸಿ) ನೀರು ಸಂಗ್ರಹವಾಗಿತ್ತು. ಆಗ ಒಳಹರಿವು 7,398 ಕ್ಯೂಸೆಕ್ ಹಾಗೂ ನದಿಗೆ 2,875 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಕಾಲುವೆಗಳಿಗೆ 4,800 ಕ್ಯೂಸೆಕ್ ನೀರು ಹರಿಸಲಾಗಿತ್ತು.

ಆಲಮಟ್ಟಿ ಜಲಾಶಯ ನೀರಿನ ಮಟ್ಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದಲ್ಲೂ ನೀರಿನ ಮಟ್ಟ ಗರಿಷ್ಠ ಮಟ್ಟದ ಸಮೀಪದಲ್ಲಿದೆ. ಆಲಮಟ್ಟಿಯ ಗರಿಷ್ಠ ನೀರಿನ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ಮಟ್ಟ 519.46 ಮೀಟರ್. ಜಲಾಶಯಕ್ಕೆ 69,104 ಕ್ಯೂಸೆಕ್ ಒಳಹರಿವು ಇದ್ದು, 61,280 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಬಸವಸಾಗರದಲ್ಲೂ ಭಾರಿ ಒಳಹರಿವು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್. ಇಂದಿನ ನೀರಿನ ಮಟ್ಟ 492.22 ಮೀಟರ್ ದಾಖಲಾಗಿದೆ. ಜಲಾಶಯಕ್ಕೆ ಸುಮಾರು 75 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, 69 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲೂ ನೀರಿನ ಮಟ್ಟ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

ಲಿಂಗನಮಕ್ಕಿ ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆ

ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲೂ ನೀರಿನ ಒಳಹರಿವು ಮುಂದುವರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಹಾಗೂ ಸಂಗ್ರಹದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿದೆ.

  • ಜಲಾಶಯದ ಇಂದಿನ ನೀರಿನ ಮಟ್ಟ – 1792.15 ಅಡಿ
  • ಕಳೆದ 24 ಗಂಟೆಗಳಲ್ಲಿ 0.60 ಅಡಿ ನೀರಿನ ಮಟ್ಟ ಏರಿಕೆ
  • ಜಲಾಶಯಕ್ಕೆ ಸದ್ಯ 16,259 ಕ್ಯೂಸೆಕ್ ನೀರಿನ ಒಳಹರಿವು
  • ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದರೆ ಸದ್ಯ 51.05% ನೀರು ಸಂಗ್ರಹ
  • ಕಳೆದ ವರ್ಷದ ಇದೇ ದಿನ ನೀರಿನ ಮಟ್ಟ 1811.90 ಅಡಿ ಇದ್ದು, 84.78% ನೀರು ಸಂಗ್ರಹವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 am, Tue, 11 August 26

Follow Us
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?