AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ತಾರಾಗಣದ ಸಂಭಾವನೆ ವಿವರಗಳು ವೈರಲ್ ಆಗಿವೆ. ಯಶ್ 50 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದ್ದು, ಕಿಯಾರಾ ಅಡ್ವಾಣಿ ಹಾಗೂ ನಯನತಾರಾ ಭಾರಿ ಸಂಭಾವನೆ ಪಡೆದಿದ್ದಾರೆ. ಈ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರವು ಆಗಸ್ಟ್ 26, 2026 ರಂದು ಬಿಡುಗಡೆಯಾಗಲಿದೆ.

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು?
ಯಶ್
ರಾಜೇಶ್ ದುಗ್ಗುಮನೆ
| Edited By: |

Updated on:Aug 11, 2026 | 10:21 AM

Share

ಮುಖ್ಯಾಂಶಗಳು

  • ಯಶ್ ಸಂಭಾವನೆ ಮತ್ತು ಪಾತ್ರ
  • ತಾರಾಗಣದ ಭಾರಿ ಸಂಭಾವನೆ
  • ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಟ್ರೇಲರ್ ಲಾಂಚ್ ಬಳಿಕ ನಿರೀಕ್ಷೆ ಹೆಚ್ಚಾಗಿದೆ. ಈಗ ಚಿತ್ರದ ತಾರಾಗಣದ ಸಂಭಾವನೆ ವಿವರಗಳು ಹೊರಬಿದ್ದಿವೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಚಿತ್ರದಲ್ಲಿ ಯಶ್ ಪಡೆದಿರುವ ಸಂಭಾವನೆ ಮತ್ತು ಇತರ ನಟಿಯರು ಜೇಬಿಗೆ ಇಳಿಸಿಕೊಂಡಿದ್ದರ ಬಗ್ಗೆ ಈಗ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಆಗಿದೆ.

ಯಶ್ ಸಂಭಾವನೆ ಮತ್ತು ಪಾತ್ರ

ಮಾಧ್ಯಮಗಳ ವರದಿ ಪ್ರಕಾರ ಯಶ್ ಈ ಚಿತ್ರಕ್ಕಾಗಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅವರು ರಾಯ ಮತ್ತು ಟಿಕೆಟ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನೆಯ ಜೊತೆಗೆ ಯಶ್ ಈ ಚಿತ್ರಕ್ಕೆ ಸಹ-ಬರಹಗಾರ ಮತ್ತು ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆ ಪ್ರಮುಖವಾಗಿದೆ. ಯಶ್ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದ ಲಾಭದಲ್ಲಿ ಅವರಿಗೂ ಪಾಲು ಸಿಗಲಿದೆ ಎನ್ನಲಾಗಿದೆ.

ತಾರಾಗಣದ ಭಾರಿ ಸಂಭಾವನೆ

ಚಿತ್ರದಲ್ಲಿ ಅಭಿನಯಿಸಿರುವ ನಟಿಯರಿಗೂ ದೊಡ್ಡ ಮಟ್ಟದ ಸಂಭಾವನೆ ನೀಡಲಾಗಿದೆ. ನಾಯಕಿ ಕಿಯಾರಾ ಅಡ್ವಾಣಿ 15 ಕೋಟಿ ರೂಪಾಯಿ ಪಡೆದಿದ್ದಾರೆ. ನಯನತಾರಾ ಅವರಿಗೆ 12 ರಿಂದ 18 ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿದೆ. ‘ಕಾಂತಾರ 1’ ಯಶಸ್ಸಿನ ನಂತರ ರುಕ್ಮಿಣಿ ವಸಂತ್ 3 ರಿಂದ 5 ಕೋಟಿ ಪಡೆದಿದ್ದಾರೆ. ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ತಲಾ 2 ರಿಂದ 3 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಯಶ್ ಈಗಾಗಲೇ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಟಾಕ್ಸಿಕ್ ಬಗ್ಗೆ ಅಜಯ್ ರಾವ್ ಮಾತು

ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆ

ಈ ಸಂಭಾವನೆಯ ವಿವರಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಮೊದಲು ಈ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್ 4 ಕ್ಕೆ ಮುಂದೂಡಲಾಗಿತ್ತು. ಈಗ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಆಗಸ್ಟ್ 26ರ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಡಿಸ್ಕ್ಲೇಮರ್: ಈ ಲೇಖನದಲ್ಲಿರುವ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳು ಮತ್ತು ಮೂರನೇ ವ್ಯಕ್ತಿಗಳ ಹೇಳಿಕೆಗಳನ್ನು ಆಧರಿಸಿದ್ದು, ಕೇವಲ ಮಾಹಿತಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದರಲ್ಲಿ ಹೇಳಲಾದ ವಿವರಗಳನ್ನು ಸಂಬಂಧಪಟ್ಟವರು ಅಧಿಕೃತಪಡಿಸಿಲ್ಲ. ಈ ಲೇಖನವು ಯಾವುದೇ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುವ ಅಥವಾ ಸತ್ಯವನ್ನು ತಿರಚುವ ಉದ್ದೇಶವನ್ನು ಹೊಂದಿಲ್ಲ. ಯಾವುದೇ ಮಾಹಿತಿಯನ್ನು ಸಂಪೂರ್ಣವಾಗಿ ನಂಬುವ ಮೊದಲು ಸ್ವತಂತ್ರವಾಗಿ ಪರಿಶೀಲಿಸಲು ಓದುಗರಿಗೆ ಸಲಹೆ ನೀಡಲಾಗುತ್ತದೆ. ಈ ವಿಷಯದಲ್ಲಿನ ಯಾವುದೇ ದೋಷಗಳು ಅಥವಾ ಅಪೂರ್ಣತೆಗಳಿಗೆ ‘ಟಿವಿ9 ಕನ್ನಡ’ ಜವಾಬ್ದಾರಿಯಲ್ಲ.

ಪ್ರಶ್ನೆ: ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಪಾತ್ರದ ಹೆಸರೇನು?

ಉತ್ತರ: ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಪಾತ್ರದ ಹೆಸರು ರಾಯ ಹಾಗೂ ಟಿಕೆಟ್

ಪ್ರಶ್ನೆ: ಟಾಕ್ಸಿಕ್ ರಿಲೀಸ್ ದಿನಾಂಕ ಏನು?

ಉತ್ತರ: ಟಾಕ್ಸಿಕ್ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ

ಪ್ರಶ್ನೆ: ಟಾಕ್ಸಿಕ್ ಚಿತ್ರದ ನಿರ್ದೇಶಕರು ಯಾರು?

ಉತ್ತರ: ಟಾಕ್ಸಿಕ್ ಚಿತ್ರದ ನಿರ್ದೇಶಕರು ಗೀತು ಮೋಹನ್​ ದಾಸ್

Published On - 9:44 am, Tue, 11 August 26

Follow Us
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ