ಚಿಕ್ಕಮಗಳೂರು: ‘ಹಕ್ಕಿ ಹಾರುತಿದೆ ನೋಡಿದಿರಾ’ ಪದ್ಯವನ್ನು ನೆನಪಿಸಿದ ಉಕ್ಕಿ ಹರಿವ ಭದ್ರೆಯಲ್ಲಿ ಮೀನುಗಳ ಹಾರಾಟ!
ಪಶ್ಚಿಮಘಟ್ಟಗಳ ಸಾಲಿನಲ್ಲಿ ಮಳೆ ಸುರಿಯಲಾರಂಭಿಸಿದರೆ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯಾಗುತ್ತಿದೆ ಅಂತಲೇ ಅರ್ಥ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ ಮತ್ತು ಭದ್ರಾ ನದಿ ತುಂಬಿ ಹರಿಯಯುತ್ತಿದೆ. ಮಳೆಯ ಆರ್ಭಟ ಕಡಿಮೆಯಾಗದ ಕಾರಣ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕಳಸ, ಕೊಪ್ಪ ಮತ್ತು ಎನ್ ಆರ್ ಪುರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರು, ಜೂನ್ 16: ಹಕ್ಕಿ ಹಾರುತಿದೆ ನೋಡಿದಿರಾ ಪದ್ಯ ಬಹಳಷ್ಟು ಕನ್ನಡಿಗರಿಗೆ ಗೊತ್ತು. ದ ರಾ ಬೇಂದ್ರೆ (DR Bendre) ಅವರ ಗರಿ ಕವನ ಸಂಕಲನದಲ್ಲಿ ಈ ಪದ್ಯ ನಮಗೆ ಸಿಗುತ್ತದೆ. ಈ ಪದ್ಯ ನೆನಪಾಗಲು ಕಾರಣ ಇಲ್ಲಿರುವ ವಿಡಿಯೋ. ತುಂಬಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಮೀನುಗಳು ಹಾರುತ್ತಿವೆ! ಓಕೆ ಮೀನುಗಳು ಹಾರಲಾರವು; ಆದರೆ ನೀರಿನಲ್ಲಿ ಅವುಗಳ ಜಿಗಿತ ಹಾರಿದಂತೆ ಕಾಣುತ್ತದೆ. ಭಾರೀ ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಕಲ್ಲು ಬಂಡೆಯೊಂದನ್ನ ಹಾರಿ ನೀರು ಬರುತ್ತಿರುವ ದಿಕ್ಕಿನೆಡೆ ನೆಗೆಯುವ ವ್ಯರ್ಥ ಪ್ರಯತ್ನವನ್ನು ಮೀನುಗಳು ಮಾಡುತ್ತಿವೆ. ಮೀನುಗಳ ಹಾರಾಟ ವ್ಯರ್ಥವೋ ಅಥವಾ ಸಾರ್ಥಕವೋ ಆದರೆ ದೃಶ್ಯ ಮಾತ್ರ ಭೋರ್ಗರೆಯುವ ನೀರಲ್ಲಿ ಸುಂದರವಾಗಿ ಕಾಣುತ್ತದೆ.
ಇದನ್ನೂ ಓದಿ: ಚಿಕ್ಕಮಗಳೂರುನಲ್ಲಿ ಭಾರೀ ಮಳೆ, ಜೂನ್ 13 ಮತ್ತು 14ರಂದು ರೆಡ್ ಅಲರ್ಟ್ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ