AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರುನಲ್ಲಿ ಭಾರೀ ಮಳೆ, ಜೂನ್ 13 ಮತ್ತು 14ರಂದು ರೆಡ್ ಅಲರ್ಟ್ ಘೋಷಣೆ

ಚಿಕ್ಕಮಗಳೂರುನಲ್ಲಿ ಭಾರೀ ಮಳೆ, ಜೂನ್ 13 ಮತ್ತು 14ರಂದು ರೆಡ್ ಅಲರ್ಟ್ ಘೋಷಣೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 11, 2025 | 7:33 PM

Share

ಬೆಂಗಳೂರು ನಗರರಲ್ಲಿ ನಿನ್ನೆ ಸಾಯಂಕಾಲದಿಂದ ಮಳೆ ಆಗುತ್ತಿದೆ, ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಶುರುವಾದ ಮಳೆ 11 ಗಂಟೆಯವರೆಗೆ ಸುರಿಯಿತು. ಭಾರೀ ಅಲ್ಲದಿದ್ದರೂ ಮಳೆ ಚೆನ್ನಾಗೇ ಆಯಿತು. ಇವತ್ತು ನಗರದಲ್ಲಿ ಎರಡೆರಡು ಬಾರಿ ಮಳೆಯಾಗಿದೆ. ಮಧ್ಯಾಹ್ನ ಸುರಿದ ಮಳೆ ಚಿಕ್ಕ ವಿರಾಮ ತೆಗೆದುಕೊಂಡು ಸಾಯಂಕಾಲ ಪುನಃ ಸುರಿಯಲು ಆರಂಭಿಸಿತು.

ಚಿಕ್ಕಮಗಳೂರು, ಜೂನ್ 11: ಇನ್ನು ಈ ಮಳೆಗಳನ್ನು ಅಕಾಲಿಕ (untimely rains) ಎನ್ನಲಾಗದು ಯಾಕೆಂದರೆ ಮಾನ್ಸೂನ್ ಸೀಸನ್ ಈಗಾಗಲೇ ಶುರುವಾಗಿದೆ. ಕಳೆದ ಐದಾರು ದಿನಗಳಿಂದ ಮಳೆಯಾಗಿರಲಿಲ್ಲ. ಚಿಕ್ಕಮಗಳೂರು ನಗರ ಮತ್ತು ಜಿಲ್ಲೆಯ ಹಲವಾರು ಭಾಗಗಳಲ್ಲಿ ಇವತ್ತು ಭರ್ಜರಿ ಮಳೆಯಾಗುತ್ತಿದೆ. ಸುರಿಯುತ್ತಿರುವ ಮಳೆಯಂತೂ ವಿಡಿಯೋದಲ್ಲಿ ಕಾಣುತ್ತಿದೆ, ಅದರೆ ಶುಕ್ರವಾರ ಮತ್ತು ಶನಿವಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ ಮತ್ತು ರೆಡ್ ಅಲರ್ಟ್​ ಸಹ ಘೋಷಿಸಿದೆ. ಇದೇ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದೆ.

ಇದನ್ನೂ ಓದಿ:  ಬೆಂಗಳೂರಿಗೆ ರಾತ್ರೋರಾತ್ರಿ ಮಳೆ ಎಂಟ್ರಿ: ರಸ್ತೆಗಳಲ್ಲಿ ನಿಂತ ನೀರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More