ಕೆರೆ ಕೋಡಿ ಹರಿದಾಗ ಮೇಲಕ್ಕೆ ಚಿಮ್ಮಿದ ಮೀನುಗಳನ್ನು ಹಿಡಿಯಲು ಮುಗಿಬಿದ್ದರು ಬೆಳಗುಲಿ ಗ್ರಾಮಸ್ಥರು!
ಕೆರೆ ಕೋಡಿ ಹರಿದು ನೋಡುವವರು ರೋಮಾಂಚನಗೊಳ್ಳುವ ರೀತಿಯಲ್ಲಿ ಹಾರುತ್ತಿವೆ. ಗ್ರಾಮಸ್ಥರು ಹಾರುವ ಮೀನುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಯಶ ಕಂಡರೆ ಉಳಿದವರಿಗೆ ನಿರಾಶೆ.
ತುಮಕೂರು: ಕೈಗೆ ಸಿಕ್ಕಷ್ಟು ಬಾಚಿಕೋ ಅಂತ ಹೇಳ್ತೀವಲ್ಲ, ಅದಕ್ಕಿಲ್ಲಿದೆ ಉದಾಹರಣೆ. ಆದರೆ ಇಲ್ಲಿ ಕೈಗೆ ಸಿಗದಂತೆ ನೆಗೆನೆಗೆದು ಜಾರಿ ಹೋಗುತ್ತಿರೋದು ಮೀನುಗಳು (fishes). ಈ ದೃಶ್ಯ ನಮಗೆ ನೋಡ ಸಿಕ್ಕಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ (Chikkanayakanahalli) ಬೆಳಗುಲಿ ಗ್ರಾಮದ ಕೆರೆಯಲ್ಲಿ. ಕೆರೆ ಕೋಡಿ ಹರಿದು ನೋಡುವವರು ರೋಮಾಂಚನಗೊಳ್ಳುವ ರೀತಿಯಲ್ಲಿ ಹಾರುತ್ತಿವೆ. ಗ್ರಾಮಸ್ಥರು (residents) ಹಾರುವ ಮೀನುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಯಶ ಕಂಡರೆ ಉಳಿದವರಿಗೆ ನಿರಾಶೆ. ವಾರದ ಹಿಂದೆ ಕೂಡ ಇದೇ ರೀತಿ ಮೀನುಗಳು ಕಾಣಿಸಿಕೊಂಡಿದ್ದವು ಅಂತ ಊರವರು ಹೇಳಿದ್ದಾರೆ.
Latest Videos