ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಪ್ರೀತಿಸಿ ವಿವಾಹವಾಗಿದ್ದ ಮಗಳನ್ನು ಪೋಷಕರು ಹೊತ್ತೊಯ್ದಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥವಾಗಿದ್ದು, ಅಂತಿಮವಾಗಿ ಪೋಷಕರು, ಸುಷ್ಮಾ ತನ್ನ ಪತಿ ನಿರಂಜನ್ ಜೊತೆ ಜೀವನ ನಡೆಸಲು ಒಪ್ಪಿದ್ದಾರೆ. ನಿರಂಜನ, ಸುಷ್ಮಾ 8 ವರ್ಷ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2 ವರ್ಷದ ಹಿಂದೆ ಗದಗದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ, ಪತಿ ನಿರಂಜನ್ ನನ್ನು ನೋಡಲು ಸುಷ್ಮಾ ನಿನ್ನೆ ಮನೆಗೆ ಬಂದಿದ್ದಳು. ಆಗ ನಿರಂಜನ್ ಮನಗೆ ನುಗ್ಗಿ ಪೋಷಕರು ಸುಷ್ಮಾಳನ್ನು ಹೊತ್ತೊಯ್ದಿದ್ದರು
ಹುಬ್ಬಳ್ಳಿ, ಜೂನ್ 15): ಪ್ರೀತಿಸಿ ವಿವಾಹವಾಗಿದ್ದ ಮಗಳನ್ನು ಪೋಷಕರು ಹೊತ್ತೊಯ್ದಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥವಾಗಿದ್ದು, ಅಂತಿಮವಾಗಿ ಪೋಷಕರು, ಸುಷ್ಮಾ ತನ್ನ ಪತಿ ನಿರಂಜನ್ ಜೊತೆ ಜೀವನ ನಡೆಸಲು ಒಪ್ಪಿದ್ದಾರೆ. ನಿರಂಜನ, ಸುಷ್ಮಾ 8 ವರ್ಷ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2 ವರ್ಷದ ಹಿಂದೆ ಗದಗದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ, ಪತಿ ನಿರಂಜನ್ ನನ್ನು ನೋಡಲು ಸುಷ್ಮಾ ನಿನ್ನೆ ಮನೆಗೆ ಬಂದಿದ್ದಳು. ಆಗ ನಿರಂಜನ್ ಮನಗೆ ನುಗ್ಗಿ ಪೋಷಕರು ಸುಷ್ಮಾಳನ್ನು ಹೊತ್ತೊಯ್ದಿದ್ದರು. ಸುಷ್ಮಾ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲವೆಂದು ನಿರಂಜನ್ ಗೆ ಧಮ್ಕಿ ಹಾಕಿದ್ದರು. ಈ ಸಂಬಂಧ ನಿರಂಜನ್ ನವನಗರ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಸುಷ್ಮಾ ಪೋಷಕರನ್ನು ಠಾಣೆಗೆ ಕರೆಯಿಸಿ ವಿಚಾರನೆ ನಡೆಸಿದ್ದಾರೆ. ಈ ವೇಳೆ ಸುಷ್ಮಾ, ನಿರಂಜನ್ ಜೊತೆಗೆ ಹೋಗುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಕೊನೆ ಸುಷ್ಮಾಳ ನಿರ್ಧಾರಕ್ಕೆ ತಂದೆ ಪರಶುರಾಮ್ ಮತ್ತಿತರರು ಸಮ್ಮತಿಸಿದ್ದು, ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ.
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
