AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲಿನಲ್ಲಿ ಭೋಜ್​ಪುರಿ ಹಾಡಿಗೆ ಯುವತಿಯ ನೃತ್ಯ; ರೋಸಿಹೋದ ನೆಟ್ಟಿಗರು

Dance Reels : ರೀಲಿಗಾಗಿ ರೈಲುಗಳಲ್ಲಿ ಡ್ಯಾನ್ಸ್ ಮಾಡುವವರಿಗೆ ವಿಶೇಷ ಶುಲ್ಕ ವಿಧಿಸಬೇಕು ಎಂದು ಕೆಲವರು. ಉಚಿತ ಮನೋರಂಜನೆ ಕೊಡುವವರನ್ನುಅಭಿನಂದಿಸಬೇಕು ಎಂದು ಇನ್ನೂ ಕೆಲವರು. ಒಟ್ಟಾರೆಯಾಗಿ ಈ ಟ್ರೆಂಡ್ ಅನ್ನು ನಿಷೇಧಿಸಬೇಕು ಎಂದು ಹಲವರು. ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ. ಆಗಾಗ ಇಂಥ ವಿಡಿಯೋಗಳನ್ನು ನೋಡಿ ಬೇಸರ ಬಂದಿಲ್ಲವೆ?

Viral Video: ರೈಲಿನಲ್ಲಿ ಭೋಜ್​ಪುರಿ ಹಾಡಿಗೆ ಯುವತಿಯ ನೃತ್ಯ; ರೋಸಿಹೋದ ನೆಟ್ಟಿಗರು
ಭೋಜಪುರಿ ಹಾಡಿಗೆ ತುಂಬಿದ ರೈಲು ಕೋಚಿನಲ್ಲಿ ರೀಲಿಗಾಗಿ ಡ್ಯಾನ್ಸ್ ಮಾಡುತ್ತಿರುವ ಯುವತಿ
ಶ್ರೀದೇವಿ ಕಳಸದ
|

Updated on: Nov 08, 2023 | 3:49 PM

Share

Bhojpuri: ಮೆಟ್ರೋದಲ್ಲಿ, ರೈಲಿನಲ್ಲಿ ರೀಲಿಗಾಗಿ ಡ್ಯಾನ್ಸ್ ಮಾಡುವವರ ಹಾವಳಿ ಇನ್ನೂ ನಿಂತಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಕಿಕ್ಕಿರಿದ ರೈಲಿನಲ್ಲಿ ಈ ಯುವತಿ ಭೋಜ್​ಪುರಿ (Bhojpuri) ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ಇದರಿಂದ ಕಿರಿಕಿರಿಗೊಂಡ ನೆಟ್ಟಿಗರು, ಈ ಟ್ರೆಂಡ್​ಗೆ ಬ್ರೇಕ್ ಹಾಕಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚಲಿಸುವ ರೈಲಿನ ಕೋಚ್​ನೊಳಗೆ ಈ ಯುವತಿ ಭೋಜಪುರಿಯ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಈಕೆಯನ್ನು ಕೊಲ್ಕತ್ತೆಯ ಸಹೇಲಿ ರುದ್ರ ಎಂದು ಗುರುತಿಸಲಾಗಿದೆ. ಇನ್​ಸ್ಟಾಗ್ರಾಮಿನಲ್ಲಿ ಈಕೆ 8,400ಕ್ಕೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದ್ದಾಳೆ.

ಇದನ್ನೂ ಓದಿ : Viral Video: ಹಗ್ಗ ಬಿಚ್ಚಿ ಕೋತಿಯನ್ನು ರಕ್ಷಿಸಿದವನನ್ನೇ ಅನುಮಾನಿಸಿದ ನೆಟ್ಟಿಗರು; ನೀವೇನಂತೀರಿ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೈಲಿನಲ್ಲಿ ಕೆಲವರು ಆಕೆಯ ನೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ ಇನ್ನೂ ಕೆಲವರು ಕುತೂಹಲದಿಂದ ಆಕೆಯನ್ನು ನೋಡುತ್ತಿದ್ದಾರೆ. ಉಳಿದವರು ತಮಗಿದೇನೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ಆದರೆ ಸಾರ್ವಜನಿಕರಿಗೆ ಈಕೆಯಿಂದ ತೊಂದರೆ ಉಂಟಾಗುತ್ತಿದೆ ಎಂದು ನೆಟ್ಟಿಗರು ಕುಪಿತಗೊಂಡಿದ್ದಾರೆ.

ಭೋಜ್​​ಪುರಿ ಹಾಡಿಗೆ ನರ್ತಿಸುತ್ತಿರುವ ಯುವತಿ

6 ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಈತನಕ 11 ಮಿಲಿಯನ್​ ಜನರು ನೋಡಿದ್ದಾರೆ. 2.5 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕೆಲವರು ಆಕೆಯ ವಿಶ್ವಾಸವನ್ನು ಹೊಗಳಿದ್ದಾರೆ. ಇನ್ನೂ ಕೆಲವರು ರೀಲ್ ಮಾಡಲು ಬೇರೆ ಜಾಗ ಸಿಗಲಿಲ್ಲವೇ? ಎಂದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇದೊಂದು ಹೊಸ ಉಪದ್ರವವಾಗಿ ಪರಿಗಣಿಸಿದೆ ಇದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ ಕೆಲವರು.

ಇದನ್ನು ಓದಿ : Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್​ ಮಾಡಿದ ವಿಡಿಯೋ ವೈರಲ್

ರೈಲುಗಳಲ್ಲಿ ರೀಲ್​ ಮಾಡುವುದನ್ನು ನಿಷೇಧಿಸಬೇಕು ಎಂದು ಮತ್ತೂ ಕೆಲವರು ಹೇಳಿದ್ದಾರೆ. ಪ್ರಯಾಣಿಕರಿಗೆ ಉಚಿತ ಮನರಂಜನೆ ಒದಗಿಸಿದ್ದಕ್ಕೆ ಮತ್ತು ಭಾರತೀಯ ರೈಲ್ವೆ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಮತ್ತೊಂದಿಷ್ಟು ಜನ. ರೈಲ್ವೆ ಇಲಾಖೆಯು ಇಂಥವರಿಗೆ ಶುಲ್ಕವನ್ನು ನಿಗದಿಪಡಿಸಬೇಕು. ಆಗಲಾದರೂ ಭಯಪಟ್ಟು ದೂರ ಸರಿಯುತ್ತಾರೋ ನೋಡಬೇಕು ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​