Viral: ಹಾಂಗ್​ಕಾಂಗ್​; ಸ್ನೇಕ್​ ಪಿಝಾ ತಿನ್ನಲು ಯಾರಿಗೆಲ್ಲ ಧೈರ್ಯವಿದೆ?

Snake Pizza: ಯಾರಿಗೆ ಬಾಯಲ್ಲಿ ನೀರೂರುವುದಿಲ್ಲ ಪಿಝಾ ಎಂದರೆ? ನೂರೆಂಟು ಬಗೆಯ ಪಿಝಾಗಳೀಗ ಜಗತ್ತಿನಾದ್ಯಂತ ಲಭ್ಯ. ಆದರೆ ಸ್ನೇಕ್​ ಪಿಝಾ? ಹೌದು ಹಾವಿನ ಮಾಂಸವನ್ನು ಉಪಯೋಗಿಸಿದ ಪಿಝಾ ಹಾಂಗ್​ಕಾಂಗ್​ನಲ್ಲಿ ಲಭ್ಯವಿದೆ. ಮಾಂಸಾಹಾರಿ ಪಿಝಾಪ್ರಿಯರು ಒಮ್ಮೆ ಪ್ರಯತ್ನಿಸಬಹುದೆ? ಭಯವಾಗುತ್ತದೆ ಎಂತಾದರೆ ಬೇಡಬಿಡಿ, ಇಲ್ಲೇ ಕುಳಿತು ಅದರ ಬಗ್ಗೆ ಓದಿ ಮತ್ತು ವಿಡಿಯೋ ನೋಡಿ.

Viral: ಹಾಂಗ್​ಕಾಂಗ್​; ಸ್ನೇಕ್​ ಪಿಝಾ ತಿನ್ನಲು ಯಾರಿಗೆಲ್ಲ ಧೈರ್ಯವಿದೆ?
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Nov 09, 2023 | 12:17 PM

Hong Kong : ಪಿಝಾದಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರದಲ್ಲಿ ನೂರಾರು ಬಗೆಗಳು ಲಭ್ಯ. ಆದರೆ ಈತನಕ ಹಾವಿನ ಮಾಂಸದ ಪಿಝಾ (Snake Pizza) ಬಗ್ಗೆ ಕೇಳಿದ್ದೀರೇ? ಹೋಗಲಿ ಹೀಗೊಂದು ಕಲ್ಪನೆಯಾದರೂ ಇತ್ತೇ? ಕೇಳುವುದು ಮತ್ತು ಕಲ್ಪಿಸಿಕೊಳ್ಳುವುದನ್ನು ಬದಿಗಿಟ್ಟುಬಿಡಿ. ಹಾಂಗ್​ಕಾಂಗ್​ನ ಪಿಝಾ ಹಟ್​ ನಿಮ್ಮ ಮುಂದೆ ಸ್ನೇಕ್​ ಫಿಝಾ ತಂದಿಟ್ಟರೆ ಏನು ಮಾಡುತ್ತೀರಿ? ಹಾಂಗ್​ಕಾಂಗ್​ನಲ್ಲಿರುವ ಸ್ನೇಕ್​ ರೆಸ್ಟೋರೆಂಟ್​​ ಸೆರ್​ ವಾಂಗ್​ ಫನ್​ ಪಿಝಾ ಹಟ್​ ಜೊತೆ  ಒಗ್ಗೂಡಿ ಇದೀಗ ಹೊಸ ನಮೂನೆಯ ಪಿಝಾ ತಯಾರಿಸುತ್ತಿದೆ. ಪಿಝಾದೊಳಗಿನ ಅನಾನಸ್​ ತಿನ್ನುವುದು ಹೇಗೆ ಎಂದು ಜನ ಇನ್ನೂ ಒದ್ದಾಡುತ್ತಿರುವಾಗ ಇದೀಗ ಇಂಥ ಪಿಝಾ ಪರಿಚಯಿಸಿದೆ ಪಿಝಾ ಹಟ್​. ಅಚ್ಚರಿಯಾಯಿತೇ, ಆಘಾತವಾಯಿತೇ? ಯೋಚಿಸಬೇಡಿ ಪಿಝಾ ಚಿತ್ರದಲ್ಲಿ ಮಾತ್ರ ಇದೆ, ನಿಮ್ಮ ಟೇಬಲ್​ ಮೇಲಲ್ಲ!

ಇದನ್ನೂ ಓದಿ : Viral Video: ಈ ಭೂಪ ರೈಲ್ವೇ ಹಳಿಗಳ ಮೇಲೆ ಪಟಾಕಿ ಸುಟ್ಟಿದ್ದು ಈ ಕಾರಣಕ್ಕೆ​; ಜೈಪುರದ ರೈಲ್ವೇ ಅಧಿಕಾರಿ ಪ್ರತಿಕ್ರಿಯೆ

1895 ರಲ್ಲಿ ಸ್ಥಾಪನೆಗೊಂಡ ಸೆಂಟ್ರಲ್ ಹಾಂಗ್ ಕಾಂಗ್‌ನಲ್ಲಿರುವ ಸ್ನೇಕ್ ರೆಸ್ಟೋರೆಂಟ್ ಸೆರ್ ವಾಂಗ್ ಫನ್ ಜೊತೆಗೆ ಪಿಝಾ ಹಟ್ ಸ್ನೇಕ್​ ಪಿಝಾ ತಯಾರಿಸಲಾರಂಭಿಸಿದೆ. ಪಿಝಾದ ಮೇಲೋಗರಕ್ಕೆ ಹಾವಿನ ಮಾಂಸದ ತುಂಡು, ಕಪ್ಪು ಅಣಬೆ ಮತ್ತು ಚೀನಾದ ಒಣಗಿದ ಹ್ಯಾಮ್​ ಅನ್ನು ಅಲಂಕರಿಸಿ ಕೊಡುತ್ತಿದೆ. ಒಂಬತ್ತು ಇಂಚಿನ ಪಿಝಾ ಟೊಮ್ಯಾಟೋ ಬೇಸ್​ ಬದಲಾಗಿ ಆ್ಯಬಲೋನ್ ಸಾಸ್ ಬೇಸ್‌ನೊಂದಿಗೆ ಇರುತ್ತದೆ. ಈ ಪಿಝಾ ಸವಿಯುವ ಅವಧಿ ನವೆಂಬರ್ 22 ರವರೆಗೆ ಮಾತ್ರ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿದೆ ಸ್ನೇಕ್ ಪಿಝಾ

ಪಿಝಾ ಹಟ್​, ‘ಚೀಸ್ ಮತ್ತು ಒಣ ಚಿಕನ್​ ತುಂಡುಗಳೊಂದಿಗೆ ಸೇರಿಸಿದ ಸ್ನೇಕ್​ ಮೀಟ್​ ರುಚಿಯನ್ನು ಕೊಡುತ್ತದೆ ಅಷ್ಟೇ ಅಲ್ಲ ಇದು ಆರೋಗ್ಯಕ್ಕೂ ಪೂರಕವಾಗಿದೆ’ ಎಂದಿದೆ. ಕೆಲ ನೆಟ್ಟಿಗರು ಇದನ್ನು ನೋಡಿ, ಆರೋಗ್ಯಕ್ಕೆ ಇದು ಹೇಗೆ ಪೂರಕ ಎನ್ನುವುದನ್ನು ವಿವರಿಸಿ ಎಂದು ಕೇಳಿಕೊಂಡಿದ್ದಾರೆ. ಚೀನಾಮಂದಿಗೆ ಇದು ಇಷ್ಟವಾಗಬಹುದು, ಉಳಿದಂತೆ ಇದು ಅಸಹ್ಯ ತರಿಸುವಂತಿದೆ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಹಗ್ಗ ಬಿಚ್ಚಿ ಕೋತಿಯನ್ನು ರಕ್ಷಿಸಿದವನನ್ನೇ ಅನುಮಾನಿಸಿದ ನೆಟ್ಟಿಗರು; ನೀವೇನಂತೀರಿ?

ಸದ್ಯ ನಮ್ಮ ಭಾರತದ ಪಿಝಾ ಹಟ್​​ಗಳಲ್ಲಿ ಇದು ಬರದಿದ್ದರೆ ಸಾಕು ಎಂದಿದ್ದಾರೆ ಒಬ್ಬರು. ನನಗೆ ಹಾವನ್ನು ನೋಡಿದರೆ ಪಿಝಾ, ಪಿಝಾ ನೋಡಿದರೆ ಹಾವು ಕಾಣುತ್ತಿದೆ. ಇದೊಂದು ರೀತಿ ದುಃಸ್ವಪ್ನದಂತೆ ಕಾಡುತ್ತಿದೆ ಏನು ಮಾಡಲಿ? ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:14 pm, Thu, 9 November 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ