ಮದುವೆಯಾದ 6 ತಿಂಗಳಿಗೆ ಪತಿಗೆ ವಿಚ್ಛೇದನ ನೀಡಿದ ಪತ್ನಿ; ಕಾರಣ ತಿಳಿದರೆ ನೀವು ಶಾಕ್​​ ಆಗುದಂತೂ ಖಂಡಿತಾ

ಮದುವೆಯಾದ ಕೇವಲ ಆರೇ ತಿಂಗಳಿಗೆ ಮಹಿಳೆಯೊಬ್ಬಳು ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಾಳೆ. ಇದಲ್ಲದೇ ಆತನಿಂದ ದೂರವಾಗಿರುವ ಖುಷಿಗೆ ಲಕ್ಷ ಲಕ್ಷ ದುಡ್ಡು ಸುರಿದು ಡಿವೋರ್ಸ್ ಪಾರ್ಟಿ ಬೇರೆ ಭರ್ಜರಿಯಾಗಿ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಪತಿಗೆ ವಿಚ್ಛೇದನ ನೀಡಿದ್ದಕ್ಕೆ ಕಾರಣ ಏನೆಂದು ತಿಳಿದರೆ ನೀವು ಶಾಕ್​​ ಆಗುದಂತೂ ಖಂಡಿತಾ.

ಮದುವೆಯಾದ 6 ತಿಂಗಳಿಗೆ  ಪತಿಗೆ ವಿಚ್ಛೇದನ ನೀಡಿದ ಪತ್ನಿ; ಕಾರಣ ತಿಳಿದರೆ ನೀವು ಶಾಕ್​​ ಆಗುದಂತೂ ಖಂಡಿತಾ
ಲಾರಿಸ್ಸಾ ಸಂಪನಿ (Larissa Sumpani)Image Credit source: instagram
Follow us
ಅಕ್ಷತಾ ವರ್ಕಾಡಿ
|

Updated on:Nov 05, 2023 | 5:57 PM

ಪತಿ-ಪತ್ನಿಯರ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸ ಇರಬೇಕಾದುದು ಬಹಳ ಮುಖ್ಯ. ಇವುಗಳಿಲ್ಲದೆ ಈ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ವಿವಾಹಿತ ದಂಪತಿಗಳು ಯಾವುದೋ ಕಾರಣಕ್ಕೆ ಬೇರ್ಪಡುವ ಮತ್ತು ವಿಚ್ಛೇದನ ಪಡೆಯುವ ಬಗ್ಗೆ ನಾವು ಇತ್ತೀಚೆಗೆ ಹೆಚ್ಚು ಕೇಳುತ್ತಿದ್ದೇವೆ. ಇದಲ್ಲದೆ, ವಿಚ್ಛೇದನವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ನಿಮ್ಮ ಮುಂದಿನ ಜೀವನವನ್ನು ನೀವು ಕಳೆಯಲು ಬಯಸುವ ಯಾರೊಂದಿಗಾದರೂ ಸಂಬಂಧವನ್ನು ಮುರಿದಾಗ ಅದು ಖಂಡಿತವಾಗಿಯೂ ನೋವುಂಟು ಮಾಡುತ್ತದೆ. ಆದರೆ ಬ್ರೆಜಿಲ್‌ನ ಮಹಿಳೆಯೊಬ್ಬಳು ತನ್ನ ಗಂಡನಿಂದ ವಿಚ್ಛೇದನ ಪಡೆದ ನಂತರ ತನ್ನ ಸ್ನೇಹಿತರೊಂದಿಗೆ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ವಿಶೇಷವಾಗಿ ಡಿವೋರ್ಸ್ ಪಾರ್ಟಿಯೊಂದನ್ನು ಏರ್ಪಡಿಸಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾಳೆ.

ವೃತ್ತಿಯಲ್ಲಿ ಮಾಡೆಲ್ ಆಗಿರುವ ಲಾರಿಸ್ಸಾ ಸಂಪನಿ (Larissa Sumpani) ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿದ್ದಾರೆ. ಇತ್ತೀಚೆಗಷ್ಟೇ ತನ್ನ ಪತಿಗೆ ವಿಚ್ಛೇದನ ನೀಡಿರುವ ಖುಷಿಯ ವಿಚಾರವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Larissa Sumpani (@eusumpani)

ಇದನ್ನೂ ಓದಿ: ಪ್ರಿಯತಮನಿಗಾಗಿ 35 ಕೆಜಿ ದೇಹತೂಕ ಹೆಚ್ಚಿಸಿಕೊಂಡ ರೂಪದರ್ಶಿ, ಆದರೆ ಆತ ಮಾಡಿದ್ದೇನು?

ಮದುವೆಯಾದ 6 ತಿಂಗಳೊಳಗೆ ವಿಚ್ಛೇದನ:

ಡೈಲಿ ಸ್ಟಾರ್ ವರದಿಯ ಪ್ರಕಾರ, ಲಾರಿಸ್ಸಾ ಮದುವೆಯಾಗಿ ಕೇವಲ 6 ತಿಂಗಳಾಗಿದ್ದು, ಈಗ ಪತಿಗೆ ವಿಚ್ಛೇದನ ನೀಡಿದ್ದಾಳೆ. ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಲೀವಿಂಗ್​​ ರಿಲೇಷನ್​​​ ಶಿಪ್​​​ನ್ಲಲಿದ್ದ ಲಾರಿಸ್ಸಾ. ಆದರೆ ತನ್ನ ವಿಚ್ಛೇದನದಿಂದ ತುಂಬಾ ಸಂತೋಷವಾಗಿದ್ದು, ಈ ವಿಚ್ಛೇದನದ ಪಾರ್ಟಿಯಲ್ಲಿ ಕೇಕ್ ಕಟ್ ಮಾಡಿ ತನ್ನ ಸ್ನೇಹಿತರ ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾಳೆ. ಇದಲ್ಲದೇ ಆಕೆ ಪಾರ್ಟಿಗಾಗಿ 4 ಲಕ್ಷ ರೂ. ಖರ್ಚು ಮಾಡಿರುವುದು ವರದಿಯಾಗಿದೆ.

ವಿಚಿತ್ರ ಕಾರಣಗಳಿಗಾಗಿ ವಿಚ್ಛೇದನ:

ವರದಿಗಳ ಪ್ರಕಾರ, 24 ವರ್ಷದ ಲಾರಿಸ್ಸಾ ತನ್ನ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸಿದ್ದು, ಆಕೆಯ ಕಾರಣ ತಿಳಿದರೆ ಶಾಕ್​ ಆಗುವುದಂತೂ ಖಂಡಿತಾ. ಲಾರಿಸ್ಸಾಗೆ ಹುಡುಗರ ಜೊತೆಗೆ ಮಾತ್ರವಲ್ಲದೇ ಹುಡುಗಿಯರ ಜೊತೆಗೂ ಸಂಬಂಧವನ್ನು ಹೊಂದಲು ಬಯಸುತ್ತಾಳಂತೆ. ಇದಲ್ಲದೇ ತನ್ನ ಪತಿಯೊಂದಿಗೆ ಮಾತ್ರವಲ್ಲದೇ ಬೇರೆಯವರೊಂದಿಗೂ ಸಂಬಂಧವನ್ನು ಬೆಳೆಸಲು ಆಸಕ್ತಿ ಇರುವುದರಿಂದ ಈ ಕಾರಣವನ್ನು ತನ್ನ ಮಾಜಿ ಪತಿಯೊಂದಿಗೆ ಹೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ಒಪ್ಪದ ತನ್ನ ಪತಿಗೆ ಲಾರಿಸ್ಸಾ ವಿಚ್ಛೇದನ ನೀಡಿದ್ದಾಳೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:02 pm, Sun, 5 November 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ